Last Updated:
ಮುಂಬೈ ಇಂಡಿಯನ್ಸ್ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ (76) ಮತ್ತು ಸೂರ್ಯಕುಮಾರ್ ಯಾದವ್ (68) ಅರ್ಧಶತಕಗಳ ನೆರವಿನಿಂದ 177 ರನ್ ಗುರಿ ಮುಟ್ಟಿದರು.
ಮುಂಬೈ ಇಂಡಿಯನ್ಸ್ ತವರಿನಲ್ಲಿ ವಾಂಖೆಡೆ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 177 ರನ್ಗಲ ಗುರಿಯನ್ನ ಮುಂಬೈ ಇಂಡಿಯನ್ಸ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯ ಸಾಧಿಸಿತು. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಇನ್ನು 26 ಎಸೆತಗಳಿರುವಂತೆಯೇ ಜಯ ಸಾಧಿಸಿತು. ಇದು ಮುಂಬೈ ಇಂಡಿಯನ್ಸ್ಗೆ 4ನೇ ಗೆಲುವಾದರೆ, ಚೆನ್ನೈ ಸೂಪರ್ ಕಿಂಗ್ಸ್ಗೆ 6ನೇ ಸೋಲಾಗಿದೆ. ಇನ್ನು ಮುಂಬೈ ಆಡಿದ 8 ಪಂದ್ಯಗಳಲ್ಲಿ 4ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ರೋಹಿತ್-ಸೂರ್ಯ ಶತಕದ ಜೊತೆಯಾಟ
177ರನ್ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್ಗಳ ಜೊತೆಯಾಟ ನಡೆಸಿದರು. ಇದು ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ವಿಕೆಟ್ಗೆ ಮೊದಲ ಅರ್ಧಶತಕದ ಜೊತೆಯಾಟವಾಗಿದೆ. ರಿಕಲ್ಟನ್ 19 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿ 24 ರನ್ಗಳಿಸಿ ಜಡೇಜಾ ಬೌಲಿಂಗ್ನಲ್ಲಿ ಔಟ್ ಆದರು. ಆದರೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ 2ನೇ ವಿಕೆಟ್ ಜೊತೆಯಾಟದಲ್ಲಿ 54 ಎಸೆತಗಳಲ್ಲಿ 114 ರನ್ಗಳ ಜೊತೆಯಾಟ ನಡೆಸಿ ತಂಡವನ್ನಯ ಗೆಲುವಿನ ಗಡಿ ದಾಟಿಸಿದರು.
ಕಳೆದ 7 ಪಂದ್ಯಗಳಲ್ಲಿ ಒಂದೂ ಅರ್ಧಶತಕ ಸಿಡಿಸಲು ವಿಫಲರಾಗಿದ್ದ ರೋಹಿತ್ ಶರ್ಮಾ ಇಂದು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. 45 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ಗಳ ಸಹಿತ ಅಜೇಯ 76 ರನ್ಗಳಿಸಿದರೆ, ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ಗಳ ಸಹಿತ ಅಜೇಯ 68 ರನ್ಗಳಿಸಿ ತಂಡವನ್ನು ಗೆಲಯವಿನ ಗಡಿ ದಾಟಿಸಿದರು.
ಇದನ್ನೂ ಓದಿ: IPL 2025: ಪಂಜಾಬ್ ವಿರುದ್ಧ ಗೆಲುವಿನ ಅರ್ಧಶತಕ! ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲುಗಲ್ಲು
ಸಿಎಸ್ಕೆಗೆ ಹಿನ್ನಡೆಯಾದ ನಿಧಾನಗತಿ ಆರಂಭ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿ ಆರಂಭ ಪಡೆಯಿತು. ಅಲ್ಲದೆ ನಾಲ್ಕನೇ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ರಚಿನ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು. ಅಶ್ವಿನಿ ಕುಮಾರ್ ರಚಿ್ನ ವಿಕೆಟ್ ಪಡೆದು ಮೊದಲ ಆಘಾತ ಕೊಟ್ಟಿದ್ದರು. ಆದರೆ ಇಂದೇ ಪದಾರ್ಪಣೆ ಮಾಡಿದ 17 ವರ್ಷದ ಆಯುಷ್ ಮ್ಹಾತ್ರೆ ಸ್ಫೋಟಕ ಆರಂಭ ಪಡೆದರು. ದೀಪಕ್ ಚಾಹರ್ ಬೌಲಿಂಗ್ನಲ್ಲಿ ಔಟ್ ಆಗುವ ಮುನ್ನ ಅವರು 15 ಎಸೆತಗಳಲ್ಲಿ 32 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿ, 2 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ರಶೀದ್ 20 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು.
ದುಬೆ-ಜಡೇಜಾ ಅರ್ಧಶತಕ
ಆದರೆ ಸ್ಟಾರ್ ಆಲ್ರೌಂಡರ್ ಶಿವಂ ದುಬೆ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 50 ರನ್ ಗಳಿಸಿ ಔಟಾದರು. ಬುಮ್ರಾ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಔಟ್ ಮಾಡಿದರು. ಆದರೆ ದುಬೆ ಮತ್ತು ಜಡೇಜಾ ನಡುವೆ ನಾಲ್ಕನೇ ವಿಕೆಟ್ಗೆ 79 ರನ್ಗಳ ಜೊತೆಯಾಟ ನೀಡಿದ್ದರು. ಇನ್ನು ಜಡೇಜಾ ಕೂಡ ಅರ್ಧಶತಕ ಸಿಡಿಸಿದರು. 4ನೇ ಕ್ರಮಾಂಖದಲ್ಲಿ ಬಡ್ತಿ ಪಡೆದು ಆಡಿದ ಜಡೇಜಾ 5 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳಿಸಿದರು. ಧೋನಿ 4 ರನ್ಗಳಿಸಷ್ಟೇ ಶಕ್ತವಾದರೆ, ಜೇಮೀ ಓವರ್ಟನ್ ಅಜೇಯ 4 ರನ್ಗಳಿಸಿದರು.
ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ 17 ವರ್ಷದ ಕ್ರಿಕೆಟರ್! ಸಿಎಸ್ಕೆ ಪರ ಹೊಸ ದಾಖಲೆ ಬರೆದ ಆಯುಷ್
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಒಟ್ಟು 38 ಪಂದ್ಯಗಳು ನಡೆದಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 18 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 20 ಪಂದ್ಯಗಳನ್ನು ಗೆದ್ದಿದೆ. ಐಪಿಎಲ್ 2025 ರಲ್ಲೂ ಈ ಎರಡೂ ತಂಡಗಳ ನಡುವೆ ಘರ್ಷಣೆ ನಡೆದಿದೆ. ಅಲ್ಲಿ ಚೆನ್ನೈ 4 ವಿಕೆಟ್ಗಳಿಂದ ಗೆದ್ದಿತು.
April 20, 2025 11:00 PM IST