Last Updated:
ಸೈಬರ್ ವಂಚನೆ ಇತ್ತೀಚೆಗೆ ಜಾಸ್ತಿ ಆಗ್ಬಿಟ್ಟಿದೆ. ಒಂದಲ್ಲಾ, ಒಂದು ರೀತಿಯಲ್ಲಿ ಜನ ವಂಚನೆಗೆ ಒಳಗಾಗುತ್ತಿದ್ದಾರೆ. ಈಗ ಸೈಬರ್ ವಂಚಕರು ಹೊಸ ಪ್ಯಾಟರ್ನ್ ಶುರು ಮಾಡಿಕೊಂಡಿದ್ದಾರೆ. ಈ ಮೂಲಕ ಹಣ ಲಪಟಾಯಿಸುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು: ತಂತ್ರಜ್ಞಾನ ಬೆಳೆದಂತೆ (Technology) ಸೈಬರ್ ಕ್ರೈಂಗಳು (Cyber Crime) ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ. ಸೈಬರ್ ಕ್ರೈಂ ಹಾಗೂ ಹಣದ ವಿಷಯಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪರಾಧಗಳು (Crime) ನಡೆಯುತ್ತವೆ. ಈಗ ಹಣ ಗಳಿಸೋಕೆ ಕೆಲ ಸೈಬರ್ ವಂಚಕರು ಹೊಸ ಪ್ಯಾಟರ್ನ್ನನ್ನ (New Pattern) ಕಂಡು ಕೊಂಡಿದ್ದಾರೆ.
AI ತಂತ್ರಜ್ಞಾನ ಮೂಲಕ ವಂಚನೆ
ಜನ, ಎಷ್ಟು ಜಾಗರೂಕರಾಗಿದ್ರೂ ಕೆಲವೊಮ್ಮೆ ಅಪ್ಪಿತಪ್ಪಿ ಸೈಬರ್ ವಂಚಕರಿಗೆ ಆಹಾರವಾಗಿ, ಲಕ್ಷಾಂತರ ಹಣ ಕಳೆದುಕೊಳ್ತಾರೆ. ಇದೇ ರೀತಿ ಈಗ ಹೊಸದೊಂದು ಸೈಬರ್ ವಂಚನೆಯ ಪ್ಯಾಟರ್ನ್ ಬೆಳಕಿದೆ ಬಂದಿದೆಯಂತೆ. ಹೀಗಂತ ಅಘಾತಕಾರಿ ಮಾಹಿತಿಯನ್ನು ಸೈಬರ್ ತಜ್ಞರು ಹೊರ ಹಾಕಿದ್ದಾರೆ. ಅದುವೇ ಲೈಕ್ ಮಾಡಿ ಶೇರ್ ಮಾಡಿ ಪ್ಯಾಟರ್ನ್. ಆದಾಯ ಮೂಲಕ್ಕೆ ಏನಾದರೂ ಹೊಸದೊಂದನ್ನು ಹುಡುಕುವ ಯುವ ಜನತೆ, ಇತ್ತೀಚೆಗೆ ಪಾರ್ಟ್ಟೈ ಮನಿ ಗಳಿಸುವ ಆನ್ಲೈನ್ ಫ್ಲ್ಯಾಟ್ಫಾರ್ಮ್ ಬಳಕೆ ಮಾಡುತ್ತಿದ್ದಾರೆ.. ಇಂತಹದರಲ್ಲೇ ಇಂತಿಷ್ಟು ಲೈಕ್, ಶೇರ್ ಮಾಡಿದ್ರೆ ಹಣ ನೀಡ್ತೀವಿ ಎನ್ನುವ ಹೊಸ ಹೊಸ ಆಫರ್ಗಳು ಯೂಟ್ಯೂಬ್, ಇನ್ಟಾದಲ್ಲಿ ಕಾಣ ಸಿಗುತ್ತೆ.. ಇದನ್ನು ವಂಚಕರು ದಾಳವಾಗಿ ಬಳಸಿಕೊಂಡಿದ್ದಾರಂತೆ.
ಸೈಬರ್ ತಜ್ಞರಿಂದ ಆಘಾತಕಾರಿ ವಿಷ್ಯ
ಈ ಬಗ್ಗೆ ಸೈಬರ್ ತಜ್ಞ ಅನಂತ ಪ್ರಭು ವಿವರವಾಗಿ ನ್ಯೂಸ್ 18 ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಒಂದು ಲಿಂಕ್ ಕಳುಹಿಸುತ್ತೇವೆ, ಅದು ಯೂಟ್ಯೂಬ್ ಲಿಂಕ್ ಆಗಿರಬಹುದು ಅಥವಾ ಫೇಸ್ ಬುಕ್, ಬೇರೆ ಯಾವುದೇ ಲಿಂಕ್ ಕಳುಸುತ್ತೇವೆ ಅಂತ ಹೇಳ್ತಾರೆ. ಕಳುಹಿಸಿದ ನಂತರ ಅದರಲ್ಲಿ ಒಂದು ವಿಡಿಯೋ ಇರುತ್ತೆ. ಅದಕ್ಕೆ ಲೈಕ್ ಮಾಡಿ ಶೇರ್ ಮಾಡಿ ನಿಮಗೆ 5-10 ರೂಪಾಯಿ ಕೊಡ್ತೀವಿ ಅಂತ ಹೇಳ್ತಾರಂತೆ.
ಆ ಬಳಿಕ ಆರಂಭದಲ್ಲಿ ಇದೇ ರೀತಿಯಲ್ಲಿ ವಿಡಿಯೋ ಕಳುಹಿಸಿ ಲೈಕ್, ಶೇರ್ ಮಾಡಿದಕ್ಕೆ ಇಂತಿಷ್ಟು ಹಣ ಅಂತ ಕೂಡ ನೀಡ್ತಾರೆ. ಆ ಮೂಲಕ ವಿಶ್ವಾಸ ಗಳಿಸಿ, ಅವರೇ ಮತ್ತೊಬ್ಬರರಿಗೆ ಇದರ ಬಗ್ಗೆ ತಿಳಿಸುವಂತೆಯೂ ಮಾಡ್ತಾರೆ. ನಂತರದ ದಿನಗಳಲ್ಲಿ ಇದೇ ವಿಡಿಯೋದಲ್ಲಿ AI ತಂತ್ರಜ್ಞಾನ ಮೂಲಕ ಪೋಟೋ ಬಳಸಿ ಹಣ ಮಾಡುವ ವಿಡಿಯೋ ಕಳುಹಿಸುತ್ತಾರೆ. ಪೂರ್ತಿ ವಿಡಿಯೋ ನೋಡಲು Description ಇರೋ ಬಟನ್ ಪ್ರೆಸ್ ಮಾಡಿ ಅಂತ ವಿಡಿಯೋದಲ್ಲಿ ತಿಳಿಸ್ತಾರೆ. ಹೀಗೆ Description ಪ್ರೆಸ್ ಮಾಡಿದ್ರೆ ಮುಗಿತು. ನಿಮ್ಮ ಬ್ಯಾಂಕ್ನಲ್ಲಿದ್ದ ಹಣ ಗುಳಂ ಆಗೋದಂತು ಪಕ್ಕ.
ಇದನ್ನೂ ಓದಿ: Numerology: ಈ ದಿನಾಂಕಗಳಲ್ಲಿ ಹುಟ್ಟಿದ ಗಂಡುಮಕ್ಕಳು ತಂದೆಗೆ ವರ; ಕೋಟ್ಯಾಧಿಪತಿಗಳಾಗುತ್ತಾರಂತೆ!
ಮೊದ ಮೊದಲು ನಿಮಗೆ ಹಣ ಕಳುಹಿಸುತ್ತಾರೆ, ಆ ಬಳಿಕ ನಿಮ್ಮವರನ್ನು ಸೇರಿಸಿ ಅಂತ ಹೇಳ್ತಾರೆ. ನೀವು ಬೇರೆ ಅವರನ್ನು ಸೇರ್ಪಡೆ ಮಾಡಿದ ಬಳಿಕ ಹಣ ಕದಿಯಲು ಶುರು ಮಾಡ್ತಾರೆ. ಹಣ ಕಳೆದುಕೊಂಡ ವ್ಯಕ್ತಿ ಈ ಕೆಲಸಕ್ಕೆ ಸೇರಿದ್ದು ನನ್ನ ಸ್ನೇಹಿತ ಅಂತ ಹೇಳಿದರೆ, ಆಗ ನಿಮ್ಮ ಮೇಲೂ ಪ್ರಕರಣ ದಾಖಲಾಗುತ್ತದೆ. ಇದರೊಂದಿಗೆ ವಂಚಕ ಸೇಫ್ ಆಗ್ತಾನೆ ಅಂತ ಸೈಬರ್ ತಜ್ಞರು ಹೇಳಿದ್ದಾರೆ.
ಅನಂತ ಪ್ರಭು, ಸೈಬರ್ ತಜ್ಞ
ಒಟ್ಟಾರೆಯಾಗಿ ಸೈಬರ್ ವಂಚನೆ ಅನ್ನೋದು ಇತ್ತೀಚೆಗೆ ವ್ಯಾಪಕ ಆಗಿ ಬಿಟ್ಟಿದೆ. ವಿಡಿಯೋ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಣ ನೀಡ್ತೀವಿ ಅಂದ್ರೆ ಯಾವುದಕ್ಕೂ ಜಾಗರೂಕರಾಗಿದೆ. ಹಣ ಕಳೆದುಕೊಂಡ್ರೆ ವಾಪಾಸು ಸಿಗೋದು ಕಷ್ಟ. (ವರದಿ: ಕಿಶನ್ ಶೆಟ್ಟಿ, ನ್ಯೂಸ್ 18, ಮಂಗಳೂರು)
Dakshina Kannada,Karnataka
December 07, 2024 4:17 PM IST