Cycle Balance: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದವರ ಮೋಡಿ, ವರ್ಷಕ್ಕೊಮ್ಮೆ ಬರುವ ಇವರಿಗಾಗಿ ಕಾಯ್ತಾರೆ! | Stunt Performance | ದಕ್ಷಿಣ ಕನ್ನಡ

Cycle Balance: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದವರ ಮೋಡಿ, ವರ್ಷಕ್ಕೊಮ್ಮೆ ಬರುವ ಇವರಿಗಾಗಿ ಕಾಯ್ತಾರೆ! | Stunt Performance | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಕಲ್ ಬ್ಯಾಲೆನ್ಸ್ ಸಾಹಸ ಪ್ರದರ್ಶನಗಳು ವಿರಳವಾಗಿದ್ದು, ಉತ್ತರ ಕರ್ನಾಟಕದ ತಂಡಗಳು ಮಾತ್ರ ಈ ಕಲೆ ತೋರಿಸುತ್ತಿವೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ಸೈಕಲ್ ಬ್ಯಾಲೆನ್ಸ್ (Cycle Balance) ಎನ್ನುವ ಮನೋರಂಜನಾ ಕಾರ್ಯಕ್ರಮ ಸಾಮಾನ್ಯ. ಆದರೆ ದಕ್ಷಿಣ ಕನ್ನಡ (Dakshina Kannada) ಭಾಗದಲ್ಲಿ ಇಂತಹದೊಂದು ಕಾರ್ಯಕ್ರಮ ನಡೆಯಬೇಕಾದಲ್ಲಿ ಉತ್ತರ ಕರ್ನಾಟಕದ ಸಾಹಸಿಗರೇ ಬಂದು ತೋರ್ಪಡಿಸಬೇಕಾದ ಸ್ಥಿತಿಯಿದೆ. ಫಿಲ್ಮ್, ಮಾಲ್ ಸಂಸ್ಕೃತಿಯಲ್ಲೇ ಬೆಳೆದುಕೊಂಡು ಬಂದಿರುವ ಇಂದಿನ ಯುವ ಜನತೆಗೆ ಸೈಕಲ್ ಬ್ಯಾಲೆನ್ಸ್ ಕಾರ್ಯಕ್ರಮ ಅಂದರೆ ಏನು ಎಂದು ಹೇಳಿಕೊಡಬೇಕಾದ ಪರಿಸ್ಥಿತಿಯಿದೆ. ಆದರೆ ಈ ಲೇಟೆಸ್ಟ್ ತಲೆಮಾರಿಗಿಂತ ಕೊಂಚ ಹಿಂದಿನ ತಲೆಮಾರಿನ ಜನರಿಗೆ ಸೈಕಲ್ ಬ್ಯಾಲೆನ್ಸ್ ಕಾರ್ಯಕ್ರಮವೆಂದರೆ ಸ್ಪಲ್ಪ ಇಂಟ್ರೆಸ್ಟ್ ಜಾಸ್ತಿನೇ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೈಕಲ್ ಮೂಲಕ ನಾನಾ ರೀತಿಯ ಸಾಹಸೀ ಪ್ರದರ್ಶನಗಳನ್ನು ನೀಡೋ ಕಲಾವಿದರು ತುಂಬಾ ಕಡಿಮೆ. ಸಾಹಸಿಗರು ಇದ್ದರೂ ಅಂತವರು ಸಾರ್ವಜನಿಕವಾಗಿ ಪ್ರದರ್ಶಿಸಲು ಮುಂದಾಗೋದೂ ಬಹು ವಿರಳವೇ. ಆ ಕಾರಣಕ್ಕಾಗಿಯೇ ಜಿಲ್ಲೆಯ ಜನ ವರ್ಷಕ್ಕೊಮ್ಮ ತಮ್ಮ ಗ್ರಾಮಕ್ಕೆ ಬರೋ ಈ ಸಾಹಸೀ ಕಲಾವಿದರಿಗಾಗಿ ಕಾಯುತ್ತಾರೆ.

ಸಾಹಸ ಪ್ರದರ್ಶನ

ಸೈಕಲ್ ಬ್ಯಾಲೆನ್ಸ್ ಮೂಲಕ ಸಾಹಸ ಪ್ರದರ್ಶನ ತೋರುವ ಈ ಸಾಹಸಿ ಕಲಾವಿದರಿಗೆ ಸಾಹಸವೇ ಬದುಕು. ಈ ಕಲಾವಿದರು ತಮ್ಮ ಸ್ಟಂಟ್ ಗಳನ್ನ ಪ್ರದರ್ಶಿಸದೇ ಹೋದಲ್ಲಿ ಅಂತ ಕಲಾವಿದರ ಕುಟುಂಬಗಳು ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿಗೆ ತಲುಪುತ್ತೆ.

ಇದೇ ಕಾರಣಕ್ಕೆ ರಾಜ್ಯದ ಗಲ್ಲಿ ಗಲ್ಲಿಗೂ ತಲುಪಿ ಈ ತಂಡ ತಮ್ಮ ಸಾಹಸ ಕಲೆಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿ ತಮ್ಮ ಬದುಕನ್ನ ಕಟ್ಟಿಕೊಳ್ಳುತ್ತಾರೆ.

ಪ್ರೇಕ್ಷಕರಲ್ಲಿ ಆಶ್ಚರ್ಯ

ಸೈಕಲೇ ಇವರ ಸಾಹಸ ಪ್ರದರ್ಶನದ ಪ್ರಮುಖ ಸಾಧನವಾಗಿದ್ದು, ಸೈಕಲ್ ಮೂಲಕ ನಾನಾ ತರಹದ ಸಾಹಸಗಳನ್ನು ಪ್ರದರ್ಶಿಸುವ ಮೂಲಕ ನೆರೆದಿರುವ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸುತ್ತಾರೆ. ನೀರು, ಬೆಂಕಿ ಎಲ್ಲವನ್ನೂ ಸೇರಿಸಿಕೊಂಡು ಸೈಕಲ್ ಮೂಲಕ ಈ ಕಲಾವಿದರು ಸಾಹಸ ಪ್ರದರ್ಶಿಸುತ್ತಾರೆ. ಈ ಪ್ರದರ್ಶನವನ್ನು ಕಂಡ ಜನ ಕೂಡಾ ತಮ್ಮ ಕೈಯಲ್ಲಾದ ಹಣವನ್ನು ನೀಡುವ ಮೂಲಕ ಕಲಾವಿದರನ್ನ ಮತ್ತು ಅವರನ್ನು ನಂಬಿಕೊಂಡಿರುವ ಸಂಸಾರವನ್ನೂ ಪ್ರೋತ್ಸಾಹಿಸುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮನೋರಂಜನೆಗಾಗಿ ಸಾಕಷ್ಟು ಕಾರ್ಯಕ್ರಮಗಳಿದ್ದರೂ, ಸೈಕಲ್ ಬ್ಯಾಲೆನ್ಸ್ ತಂಡ ತಮ್ಮ ಗ್ರಾಮದ ಕಡೆಗೆ ಬಂದ ಸಮಯದಲ್ಲಂತೂ ಸೈಕಲ್ ಬ್ಯಾಲೆನ್ಸ್ ಕಾರ್ಯಕ್ರಮ ನೋಡಲೆಂದೇ ತಮ್ಮ ಇತರ ಮನೋರಂಜನೆಗಳಿಂದ ದೂರ ಉಳಿಯುತ್ತಾರೆ.