Daiva Darshana: ನೀವು ಕೋಲ, ನೇಮ ಏನೇ ಮಾಡಿ ಈ ಪ್ರಕ್ರಿಯೆಯೇ ಮುಖ್ಯ! ಇದಿಲ್ಲದಿದ್ದರೆ ನಡೆಯೋಲ್ಲ ಯಾವುದೇ ಆಚರಣೆ | Kantara movie unveils ritual of Daivaradhane Bandara process | ದಕ್ಷಿಣ ಕನ್ನಡ

Daiva Darshana: ನೀವು ಕೋಲ, ನೇಮ ಏನೇ ಮಾಡಿ ಈ ಪ್ರಕ್ರಿಯೆಯೇ ಮುಖ್ಯ! ಇದಿಲ್ಲದಿದ್ದರೆ ನಡೆಯೋಲ್ಲ ಯಾವುದೇ ಆಚರಣೆ | Kantara movie unveils ritual of Daivaradhane Bandara process | ದಕ್ಷಿಣ ಕನ್ನಡ
ಬಂಡಾರ ಏರಿಸೋದು, ಇಳಿಸೋದು ದೈವಾರಾಧನೆಯ ಪ್ರಮುಖ ಪ್ರಕ್ರಿಯೆ

ತುಳುನಾಡಿನ ಅತ್ಯಂತ ನಂಬಿಕೆಯ ದೈವಾರಾಧನೆಯು ಕೋಲ, ನೇಮಗಳ ಮೂಲಕ ಆರಾಧಿಸಲಾಗುತ್ತದೆ. ದೈವಗಳ ನೇಮ ಅಥವಾ ಕೋಲ ಕಾರ್ಯಕ್ರಮದ ಮೊದಲು ದೈವಗಳ ಬಂಡಾರ ಏಳೋದು, ಬಂಡಾರ ಇಳಿಸೋದು ಎನ್ನುವ ಎರಡು ಸಂಪ್ರದಾಯವನ್ನು ತಪ್ಪದೇ ಮಾಡಬೇಕಾಗುತ್ತದೆ. ಬಂಡಾರ ಏಳೋದು, ಇಳಿಸೋದನ್ನ ಮಾಡದೆ ಹೋದಲ್ಲಿ ದೈವಾರಾಧನೆಯೇ ನಡೆಯೋದಿಲ್ಲ ಅನ್ನುವಷ್ಟರ ಮಟ್ಟಿಗೆ ಈ ಸಂಗತಿಯಿದೆ.

ದೈವಾರಾಧನೆಯ ಮೊದಲ ಪ್ರಕ್ರಿಯೆಯೇ ಇದು

ತುಳುನಾಡಿನಲ್ಲಿರುವ ಪ್ರತಿಯೊಂದು ದೈವಕ್ಕೂ ದೈವಸ್ಥಾನ, ಬಂಡಾರ ಮನೆ ಇರೋದು ಸಾಮಾನ್ಯ. ಯಾವ ರೀತಿಯಲ್ಲಿ ದೇವರ ವಿಗ್ರಹಕ್ಕೆ ಕಿರೀಟ, ಮಣಿ ಮಾಲೆ, ಹಾರ, ಆಯುಧ ಮತ್ತು ಆಭರಣಗಳಿರುತ್ತವೋ, ಅದೇ ರೀತಿಯಲ್ಲಿ ಕೊಂಚ ಭಿನ್ನವಾಗಿರುವ ಆಯುಧಗಳಿರುತ್ತವೆ, ಆಭರಣ, ಮುಖವಾಡ ಎಲ್ಲವೂ ಇರುತ್ತವೆ.

ದೈವಸ್ಥಾನ ಎಂದರೆ ಏನು? ಅವುಗಳ ಪ್ರಾಮುಖ್ಯತೆ ಏನು?

ಈ ಎಲ್ಲಾ ದೈವದ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ ದೈವದ ವಸ್ತುಗಳನ್ನು ಒಟ್ಟು ಸೇರಿಸಿ ಅದನ್ನು ದೈವದ ಬಂಡಾರ ಎನ್ನಲಾಗುತ್ತದೆ. ದೈವದ ಬಂಡಾರವು ಯಾವಾಗಲೂ ಆಯಾ ದೈವಕ್ಕೆ ಸಂಬಂಧಪಟ್ಟ ಸ್ಥಾನಗಳಲ್ಲಿ ಇರುತ್ತವೆ. ಇವುಗಳನ್ನು ದೈವಸ್ಥಾನ ಎಂದೂ ಕರೆಯಲ್ಪಡುತ್ತವೆ.

ನೇಮೋತ್ಸವದ ಮೊದಲು ಏನು ಮಾಡುತ್ತಾರೆ?

ಆಯಾ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ಈ ಬಂಡಾರವನ್ನು ದೈವಸ್ಥಾನದ ಒಳಗಿಂದ ಹೊರಗೆ ತರಲಾಗುತ್ತದೆ. ದೈವದ ಮುಖವಾಡ, ಖಡ್ಗ, ಹಣೆಯ ಪಟ್ಟಿ, ಮಣಿ ಸರ, ಚವಲ ಹೀಗೆ ಎಲ್ಲವೂ ಈ ಭಂಡಾರದಲ್ಲಿ ಸೇರಿಕೊಂಡಿವೆ. ದೇವಸ್ಥಾನದಲ್ಲಿ ದೈವಗಳ ನೇಮಕ್ಕೆ ದಿನ ನಿಗದಿಯಾದ ಬಳಿಕ ದೈವಗಳ ನೇಮೋತ್ಸವ ಜರುಗಲಿರುವ ಮೊದಲನೇ ದಿನ ದೈವಸ್ಥಾನದ ಒಳಗಿಂದ ದೈವದ ಬಂಡಾರವನ್ನು ಹೊರಗೆ ತರಲಾಗುತ್ತದೆ.

ಇವೆಲ್ಲಾ ಇಲ್ಲದಿದ್ದರೆ ಕೋಲ, ನೇಮ ಮಾಡೋದಿಲ್ಲ!

ಹೀಗೆ ಹೊರಗೆ ತಂದ ಆಭರಣಗಳನ್ನು ಪ್ರತಿ ದೈವಗಳ ನೇಮ ನಡೆಯುವ ಸ್ಥಳದಲ್ಲಿ ಕೊಡಿಯಡಿ ಒಳಗೆ ಇಡಲಾಗುತ್ತದೆ. ತೆಂಗಿನ ಸೋಗೆಯನ್ನು ಮುಚ್ಚಿ ಶೆಡ್ ಮಾದರಿಯನ್ನು ನಿರ್ಮಿಸಿ ಅದರೊಳಗೆ ದೈವದ ಎಲ್ಲಾ ಸಾಮಾಗ್ರಿಗಳನ್ನು ಇಟ್ಟು ಪೂಜಿಸಲಾಗುತ್ತದೆ. ಸ್ಥಾನದಿಂದ ಬಂಡಾರವನ್ನು ಹೊರಗೆ ತೆಗೆದಿಡುವುದಕ್ಕೆ ಬಂಡಾರ ಇಳಿಸೋದು ಎನ್ನುತ್ತಾರೆ. ಹೀಗೆ ಕೊಡಿಯಡಿಯಲ್ಲಿ ಇರಿಸಿದ ಬಂಡಾರವನ್ನು ದೈವ ನರ್ತನ ಮಾಡುವ ನರ್ತಕರು ಬಳಸಿಕೊಳ್ಳುತ್ತಾರೆ. ದೈವದ ಮುಖವಾಡ, ದೈವದ ಖಡ್ಗ, ಚವಲ ಎಲ್ಲವೂ ದೈವದ ಜೊತೆ ಯಾವಾಗಲೂ ಇರಬೇಕಾಗುತ್ತದೆ.

ಹೇಗೆ ನಡೆಯುತ್ತದೆ ಬಂಡಾರದ ಪ್ರಕ್ರಿಯೆ?

ಒಂದೋ, ಎರಡೋ ದಿನ ನಡೆಯುವ ನೇಮೋತ್ಸವ ಅಥವಾ ಇತರ ಉತ್ಸವಗಳು ನಡೆದ ಬಳಿಕ ಬಂಡಾರದ ಮೂಲಕ ತಂದ ಎಲ್ಲಾ ವಸ್ತುಗಳನ್ನು ಮತ್ತೆ ಅದೇ ರೀತಿಯಲ್ಲಿ ಜೋಡಿಸಿ ಕೊಡಿಯಡಿ ಇಡಲಾಗುತ್ತದೆ. ಹೀಗೆ ಬಂದ ದೈವದ ಬಂಡಾರಕ್ಕೆ ಪೂಜೆ ಸಲ್ಲಿಸಿ ಶುದ್ಧ ನೀರನ್ನು ಸಿಂಪಡಿಸಿ ಮತ್ತೆ ಅವುಗಳನ್ನು ದೈವಸ್ಥಾನದ ಒಳಗೆ ಇಡಲಾಗುತ್ತದೆ. ಬಂಡಾರವನ್ನು ಹೀಗೆ ದೈವಸ್ಥಾನದ ಒಳಗೆ ಇಡುವ ಪ್ರಕ್ರಿಯೆಗೆ ಬಂಡಾರ ಏರಿಸುವುದು ಎಂದು ಕರೆಯಲಾಗುತ್ತದೆ.

ಒಮ್ಮೆ ದೈವದ ಬಂಡಾರ ಇಳಿದರೆ ನೀವು ಊರು ಬಿಡುವಂತಿಲ್ಲ!