Dakshina Kananda: ನೀವು ವಿದೇಶಿ ಹೂವುಗಳ ಪ್ರೇಮಿಗಳೇ? ಗಿಡ ತರೋಕೆ ಹೋಗಿ ಕೇಸ್ ಹಾಕಿಸಿಕೊಳ್ಳಬೇಡಿ! | import of plants have strong legal regulations Dakshina kannada farmer explained

Dakshina Kananda: ನೀವು ವಿದೇಶಿ ಹೂವುಗಳ ಪ್ರೇಮಿಗಳೇ? ಗಿಡ ತರೋಕೆ ಹೋಗಿ ಕೇಸ್ ಹಾಕಿಸಿಕೊಳ್ಳಬೇಡಿ! | import of plants have strong legal regulations Dakshina kannada farmer explained

Last Updated:

ಭಾರತದ ಕೃಷಿಕರು ವಿದೇಶೀ ಬೆಳೆಗಳನ್ನು ಬೆಳೆಯಲು ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸಬೇಕು. ಬೆಳ್ತಂಗಡಿಯ ಬಳಂಜ ಫಾರ್ಮ್ ನ ಅನಿಲ್ ಬಳಂಜ ಶ್ರೀಲಂಕಾ, ಮಲೇಶಿಯಾ, ಥೈಲ್ಯಾಂಡ್, ಇಂಡೋನೇಷ್ಯಾ ದೇಶಗಳಿಂದ ಗಿಡಗಳನ್ನು ತರುತ್ತಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಭಾರತದಲ್ಲಿ ಕೃಷಿಕರು ಇಂದು ಕೇವಲ ನಮ್ಮ ನಾಡಿನ ಬೆಳೆಗಳನ್ನು ಮಾತ್ರ ಬೆಳೆಯುತ್ತಿಲ್ಲ! ಅವರು ನಮ್ಮ ದೇಶದಲ್ಲಿ‌ ಹಿಂದಿನಿಂದಲೂ ಬೆಳೆಸಿಕೊಂಡು‌ ಬಂದ ಬೆಳೆಗಳ ಜೊತೆ ವಿದೇಶೀ‌ ಬೆಳೆಗಳನ್ನೂ (Foreign Crops) ತಮ್ಮ ತೋಟದಲ್ಲಿ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅಥವಾ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಗಿಡಗಳನ್ನು ಸಾಗಿಸಿದಷ್ಟು ಸುಲಭವಲ್ಲ ವಿದೇಶಗಳಿಂದ ಹಣ್ಣಿನ ಗಿಡ ಅಥವಾ ಇತರ ಗಿಡ, ಬಳ್ಳಿಗಳನ್ನು ತರೋದು! (Import) ವಿದೇಶಗಳಿಂದ ಗಿಡಗಳನ್ನು ತರುವ ಮೊದಲು ಹಲವಾರು ಅಂತರರಾಷ್ಟ್ರೀಯ ಮಟ್ಟದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಿದೇಶಕ್ಕೆ‌ ಹೋಗಿ ತನಗೆ ಬೇಕಾದ ಗಿಡ,ಬಳ್ಳಿಗಳನ್ನು ತನ್ನ ದೇಶಕ್ಕೆ‌ ತರುತ್ತೇನೆ ಎಂದು ಯೋಚಿಸುವವರು ತಕ್ಷಣಕ್ಕೆ ತಮ್ಮ ಯೋಚನೆಯನ್ನು ಕೈ ಬಿಡಬೇಕು. ತಪ್ಪಿದಲ್ಲಿ ಆಯಾ ದೇಶದ ಕಾನೂನಿನ (Legal Case) ಆಧಾರದಲ್ಲಿ ನಿಮ್ಮ ಕೇಸು ದಾಖಲಾಗಬಹುದು.

ಗಿಡ ತರೋಕೂ ಬೇಕು ಲೈಸೆನ್ಸು, ಸರ್ಟಿಫಿಕೇಟು!

ಹೌದು ವಿದೇಶಗಳಿಂದ ಗಿಡಗಳನ್ನು ತರುವ ಮೊದಲು, ತರುವ ವ್ಯಕ್ತಿ ಅಥವಾ ಸಂಸ್ಥೆ Import ಮತ್ತು Export ಲೈಸೆನ್ಸ್ ಅನ್ನು ಪಡೆದಿರಲೇಬೇಕು. ಅದಲ್ಲದೆ ಈ ಲೈಸೆನ್ಸ್ ಜೊತೆಗೆ “ಫೈಟೋ ಸಾನಿಟರಿ” ಎನ್ನುವ ಸರ್ಟಿಫಿಕೇಟ್ ಅನ್ನೂ ಮಾಡಿಸಿಕೊಂಡಿರಬೇಕು. ವಿದೇಶಗಳಿಂದ ಅಲ್ಲಿನ ಸ್ಥಳೀಯ ಗಿಡ, ಬಳ್ಳಿಗಳನ್ನು ತರುವ ಸಂದರ್ಭದಲ್ಲಿ ಆ ಗಿಡದ ಬಗ್ಗೆ ಸೂಕ್ತ ಪರಿಶೀಲನೆಯನ್ನು ನಡೆಸಲಾಗುತ್ತದೆ.

ಆ ಗಿಡದಲ್ಲಿ ಯಾವುದಾದರೂ ರೋಗ ಲಕ್ಷಣಗಳಿವೆಯೋ, ವೈರಾಣುಗಳಿವೆಯೋ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಆ ವೈರಾಟುಗಳಿರುವ ಗಿಡವನ್ನು ಆಮದು ಮಾಡುವ ದೇಶದಲ್ಲಿ ರೋಗ ಹರಡುವ ಸಾಧ್ಯತೆಯಿದೆಯೋ ಎನ್ನುವ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತಿದೆ‌. ಈ ಎಲ್ಲಾ ಪರೀಕ್ಷೆಗಳನ್ನು ಒಳಗೊಂಡ ದಾಖಲೆಯೇ ಫೈಟೋ ಸಾನಿಟರಿ ಪರೀಕ್ಷೆಯಾಗಿದೆ. ಫೈಟೋ ಸಾನಿಟರಿ ಸರ್ಟಿಫಿಕೇಟ್ ಮತ್ತು ಆಮದು-ರಫ್ತು ಲೈಸೆನ್ಸ್ ಹೊಂದಿರದವರು ವಿದೇಶದಿಂದ ಕೃಷಿಗೆ ಸಂಬಂಧಿಸಿದ ಒಂದು ಸಣ್ಣ ಹುಲ್ಲು ಕಡ್ಡಿಯನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ.

ಬೆಳ್ತಂಗಡಿಯ ಬಳಂಜ ಫಾರ್ಮ್ ನಲ್ಲಿದೆ ದೇಶ-ವಿದೇಶದ ಗಿಡಗಳು

ಹೀಗೆ ವಿದೇಶಗಳಿಂದ ವಿವಿಧ ಪ್ರಕಾರದ ಹಣ್ಣಿನ ಗಿಡಗಳನ್ನು, ಕೊಂಬೆಗಳನ್ನು ದಕ್ಷಿಣಕನ್ನಡಕ್ಕೆ ಬೆಳ್ತಂಗಡಿಯ “ಬಳಂಜ ಫಾರ್ಮ್” ನ ಅನಿಲ್ ಬಳಂಜ ತರುತ್ತಿದ್ದಾರೆ. ಜಿಲ್ಲೆಯ ಕೃಷಿಕರು ಹೆಚ್ಚು ಹೆಚ್ಚು ವಿದೇಶೀ ಹಣ್ಣುಗಳನ್ನು ಬೆಳೆಯಬೇಕು ಎನ್ನುವ ಉದ್ದೇಶದಿಂದ ಶ್ರೀಲಂಕಾ, ಮಲೇಶಿಯಾ, ಥೈಲ್ಯಾಂಡ್, ಇಂಡೋನೇಷ್ಯಾ ಮೊದಲಾದ ದೇಶಗಳಿಂದ ಗಿಡಗಳನ್ನು ಬಳಂಜ ಫಾರ್ಮ್ ಗೆ ತರಿಸಲಾಗುತ್ತಿದೆ. ಆ ದೇಶದಿಂದ ಗಿಡಗಳನ್ನು ತರುವ ಸಂದರ್ಭದಲ್ಲಿ ಈ ಕಾನೂನುಗಳನ್ನು ಪಾಲಿಸದೇ ಹೋದಲ್ಲಿ ಗಿಡಗಳನ್ನು ತರಲು ಸಾಧ್ಯವಿಲ್ಲ. “ಬಳಂಜ ಫಾರ್ಮ್ ಹೆಸರಿನಲ್ಲಿ import and export ಲೈಸೆನ್ಸ್ ಮಾಡಲಾಗಿದ್ದು, ಆ ಮೂಲಕವೇ ಗಿಡಗಳನ್ನು ತಂದು ಹಂಚಲಾಗುತ್ತಿದೆ. ಈ ನಿಯಮಗಳನ್ನು ಪಾಲಿಸದೇ ಹೋದಲ್ಲಿ ವಿದೇಶಗಳ ಗಿಡ-ಬಳ್ಳಿಗಳು ಇಲ್ಲಿಗೆ ಬರಲು ಸಾಧ್ಯವಿಲ್ಲ.” ಎನ್ನುತ್ತಾರೆ ಅನಿಲ್.