Last Updated:
ವರ್ಷವಿಡೀ ದೇವರಿಗೆ ನೀಡುವ ಶೇಷ ವಸ್ತ್ರವನ್ನು ಸಂಗ್ರಹಿಸಿ ಲಲಿತ ಪಂಚಮಿ ದಿನ ಪ್ರಸಾದ ರೂಪದಲ್ಲಿ ನೀಡುವುದು ಕಟೀಲು ದೇಗುಲದ ಪದ್ಧತಿ. ಲಲಿತ ಪಂಚಮಿಯಂದು ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರಿಗೆ ಶೇಷ ವಸ್ತ್ರ ನೀಡಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಲಿತ ಪಂಚಮಿಯ ಉತ್ಸವ ಸಂಭ್ರಮದಿಂದ ನಡೆಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ದೇವಿಯ ಶೇಷ ವಸ್ತ್ರವನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು.
ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಲಲಿತ ಪಂಚಮಿ ದಿನ ಇಲ್ಲಿ ವಿಶೇಷವಾಗಿದ್ದು ದೇವಿಯ ಶೇಷ ವಸ್ತ್ರವನ್ನು ಪ್ರಸಾದ ರೂಪದಲ್ಲಿ ವಿತರಿಸಿದರು. ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಶೇಷ ವಸ್ತ್ರವನ್ನು ಸ್ವೀಕರಿಸಿದರು.
ವರ್ಷವಿಡೀ ದೇವರಿಗೆ ನೀಡುವ ಶೇಷ ವಸ್ತ್ರವನ್ನು ಸಂಗ್ರಹಿಸಿ ಲಲಿತ ಪಂಚಮಿ ದಿನ ಪ್ರಸಾದ ರೂಪದಲ್ಲಿ ನೀಡುವುದು ಕಟೀಲು ದೇಗುಲದ ಪದ್ಧತಿ. ಲಲಿತ ಪಂಚಮಿಯಂದು ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರಿಗೆ ಶೇಷ ವಸ್ತ್ರ ನೀಡಲಾಗುತ್ತದೆ. ಈ ಬಾರಿಯೂ ಲಲಿತ ಪಂಚಮಿಯ ದಿನ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ದೇಗುಲದ ಭೋಜನ ಶಾಲೆಯಲ್ಲಿ ಅವರಿಗೆ ಅನ್ನಪ್ರಸಾದ, ಸೀರೆ ಪ್ರಸಾದ ವಿತರಿಸಲಾಗಿದೆ.
ಇದನ್ನೂ ಓದಿ: Dakshina Kannada: ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಪಾಡಲು ವಿನೂತನ ಪ್ರಯತ್ನ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಲಿತ ಪಂಚಮಿ ದಿನ 35 ಸಾವಿರಕ್ಕೂ ಹೆಚ್ಚು ಜನರು ಮಧ್ಯಾಹ್ನ ಮತ್ತು ರಾತ್ರಿಯ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಆ ದಿನ ಸಂಜೆ ಆರು ಗಂಟೆಯಿಂದಲೇ ದೇಗುಲದ ಭೋಜನ ಶಾಲೆಯಲ್ಲಿ ಅನ್ನಪ್ರಸಾದ, ಸೀರೆ ಪ್ರಸಾದ ವಿತರಿಸಲಾಗಿದೆ. ಮಧ್ಯಾಹ್ನದಿಂದಲೇ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನದ ರಥ ಬೀದಿಯ ಮೈದಾನದಲ್ಲಿ ಸರತಿಸಾಲಿನಲ್ಲಿ ನಿಂತು ದೇವಿಯ ಪ್ರಸಾದವನ್ನು ಸ್ವೀಕರಿಸಿದರು.
ಪ್ರತಿ ವರ್ಷ ಲಲಿತ ಪಂಚಮಿಗೆ ಕಟೀಲು ಕ್ಷೇತ್ರಕ್ಕೆ ಬರುವ ಮಹಿಳಾ ಭಕ್ತರು ಸೀರೆಯನ್ನು ಪಡೆಯಲು ಬಯಸುತ್ತಾರೆ. ಈ ಬಾರಿ ಕ್ಷೇತ್ರದ ಆಡಳಿತ ಮಂಡಳಿ 10,000 ಕ್ಕೂ ಹೆಚ್ಚು ಮಹಿಳೆಯರು ಶೇಷ ವಸ್ತ್ರವನ್ನು ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆಯೇ ಈ ಬಾರಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಹಿಳೆಯರು ದೇವಿಯ ಸೀರೆ ಪ್ರಸಾದವನ್ನು ಸ್ವೀಕರಿಸಿದ್ದಾರೆ.
ಕಟೀಲು ಕ್ಷೇತ್ರದಲ್ಲಿ ಜಾತ್ರಾ ಉತ್ಸವದ ಬಳಿಕ ವಿಜೃಂಭಣೆಯಿಂದ ನಡೆಯುವ ಉತ್ಸವ ಅಂದ್ರೆ ಅದು ಲಲಿತ ಪಂಚಮಿಯ ದಿನ. ಅಂದು ಭಾರಿ ಜನಸಂದಣಿ ಇದ್ದುದರಿಂದ ಕಟೀಲು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.
Dakshina Kannada,Karnataka
October 10, 2024 3:42 PM IST