Dakshina Kannada: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ದೇವಿಯ ಮಹಾತ್ಮೆ ಪ್ರಸಂಗ ! | Dakshina Kannada: Mahatme Prasang of Goddess in Katilu Shri Durgaparameshwari Temple!

Dakshina Kannada: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ದೇವಿಯ ಮಹಾತ್ಮೆ ಪ್ರಸಂಗ ! | Dakshina Kannada: Mahatme Prasang of Goddess in Katilu Shri Durgaparameshwari Temple!

Last Updated:

ಅದರಲ್ಲೂ ಶ್ರೀ ದೇವಿ ಮಹಾತ್ಮೆ ಪ್ರಸಂಗ ಅಂದ್ರೆ ಸೇವಾಕರ್ತರಿಗೆ ಅದು ಭಾವನಾತ್ಮಕತೆಯ ಸಂಕೇತ. ಶ್ರೀ ದೇವಿ ಮಹಾತ್ಮೆ ಪ್ರಸಂಗ ಎಲ್ಲಾ ಕಡೆ ಆಡಿ ತೋರಿಸುವಂತಿಲ್ಲ. ಕೆಲ‌ಕಡೆ ಈ ಪ್ರಸಂಗ ಆಡಿ ತೋರಿಸೋದು ನಿಷಿದ್ಧ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಯಕ್ಷಗಾನ ರಂಗದ(Yakshagana Ranga) ಗಜಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳ(Kateelu Durgaparameshwari Mela). ಯಕ್ಷಗಾನ, ನಾಟ್ಯ, ಸಂಗೀತ ಪ್ರಿಯೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆರು ದಶಾವತಾರ ಯಕ್ಷಗಾನ ಮೇಳಗಳು ಈ ಬಾರಿಯೂ ಯಶಸ್ವಿಯಾಗಿ ಪ್ರದರ್ಶನ(Show) ನೀಡುತ್ತಿವೆ. ಪೌರಾಣಿಕ ಕಥಾ ಪ್ರಸಂಗಗಳನ್ನು ಆಡಿ ತೋರಿಸುವ ಕಟೀಲು ಮೇಳದ(Kateelu Mela) ಬಹಳ ಪ್ರಸಿದ್ಧ ಪ್ರಸಂಗ ಶ್ರೀ ದೇವಿ ಮಹಾತ್ಮೆ.

ಈ ಬಾರಿಯ ತಿರುಗಾಟದಲ್ಲಿ ಕಟೀಲು ಯಕ್ಷಗಾನ ಮೇಳ 500 ಕ್ಕೂ ಅಧಿಕ ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಆಡಿ ತೋರಿಸಿದೆ. ಕಟೀಲಿನ ಆರು ಮೇಳಗಳು ಆರು ದಿನ ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಆಡಿ ತೋರಿಸಿದೆ. ಕಟೀಲು ಮೇಳದ ಆಟ ಒಂದು ಊರಿನಲ್ಲಿ ನಡೆಯುತ್ತದೆ ಎಂದಾದರೆ ಅದು ಊರಿಗೇ ಸಂಭ್ರಮದ ದಿನ. ಅದರಲ್ಲೂ ಶ್ರೀ ದೇವಿ ಮಹಾತ್ಮೆ ಪ್ರಸಂಗ ಅಂದ್ರೆ ಸೇವಾಕರ್ತರಿಗೆ ಅದು ಭಾವನಾತ್ಮಕತೆಯ ಸಂಕೇತ. ಶ್ರೀ ದೇವಿ ಮಹಾತ್ಮೆ ಪ್ರಸಂಗ ಎಲ್ಲಾ ಕಡೆ ಆಡಿ ತೋರಿಸುವಂತಿಲ್ಲ. ಕೆಲ‌ಕಡೆ ಈ ಪ್ರಸಂಗ ಆಡಿ ತೋರಿಸೋದು ನಿಷಿದ್ಧ.

ಕಟೀಲು ದೇವಳದ ಸಭಾಭವನ, ಖಾಸಗಿ ಸಭಾಭವನ ಹಾಗೂ ಕಟೀಲು ದೇವಳದ ಪರಿಸರದಲ್ಲಿ ದೇವಿ ಮಹಾತ್ಮೆ‌ ಆಡಿ ತೋರಿಸುವಂತಿಲ್ಲ. ಕಟೀಲು ಕ್ಷೇತ್ರ ಮಹಾತ್ಮೆ ಹಾಗೂ ಶ್ರೀ ಮಹಾದೇವಿ ಲಲಿತೋಪಾಖ್ಯಾನ ಪ್ರಸಂಗಗಳನ್ನೂ ಕಟೀಲು ದೇವಳದ ಪರಿಸರದಲ್ಲಿ ಆಡಿ ತೋರಿಸುವಂತಿಲ್ಲ. ಈ ಬಾರಿ ಶ್ರೀ ದೇವಿ ಮಹಾತ್ಮೆ ಪ್ರಸಂಗದ ದಾಖಲೆಯ ಐನೂರರ ಗಡಿ ದಾಟಿ ಪ್ರದರ್ಶನ ಕಂಡಿರೋದು ವಿಶೇಷವಾಗಿದೆ. ದೇವಿ ಮಹಾತ್ಮೆ ಪ್ರಸಂಗವನ್ನು ಜ‌ನ ಇಂದಿಗೂ ಭಕ್ತಿ ಭಾವದಿಂದ ನೋಡೋದು ವಿಶೇಷ. ಇದು ಕಟೀಲು ಶ್ರೀ ದೇವಿ ಮೇಲೆ ಜನರಿಗೆ ಇರುವ ಶ್ರದ್ಧಾ ಭಕ್ತಿಯೂ ಹೌದು.