Last Updated:
ದೇವಸ್ಥಾನದ(Temple) ಒಳಗೆ ಹೆಚ್ಚಾಗಿ ಇಡುವ ಕಾರ್ಕಳದ ಶಿಲೆ, ಕೃಷ್ಣಶಿಲೆಯಿಂದ ತಯಾರಿಸಿದ ತುಳಸಿ ಕಟ್ಟೆಯನ್ನು ಇಡಲಾಗುತ್ತಿತ್ತು. ಆದರೆ ಇದೀಗ ಮನೆ ಮುಂದೆ ಇಡುವ, ಮನೆ ಮಂದಿಗೆ ಬೇಕಾಗುವ ರೀತಿಯ ಶಿಲೆಗಳಿಂದ ಕೆತ್ತಿದ ತುಳಸೀಕಟ್ಟೆಗಳಿಗೆ ಭಾರೀ ಬೇಡಿಕೆ ಬರಲಾರಂಭಿಸಿದೆ.
ಕರಾವಳಿ ಭಾಗವಾದ ಉಡುಪಿ, ದಕ್ಷಿಣಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಪ್ರತೀ ಮನೆ ಮುಂದೆ ತುಳಸೀ ಕಟ್ಟೆ ಸ್ಥಾಪಿಸೋದು ಈ ಭಾಗದ ಒಂದು ಸಂಪ್ರದಾಯ(Culture). ಇದೇ ಕಾರಣಕ್ಕಾಗಿ ಈ ಭಾಗದ ಎಲ್ಲಾ ಮನೆಗಳ ಮುಂದೆ ತುಳಸೀ ಕಟ್ಟೆಯನ್ನು(Tulasi Plant) ಮಾಡಿ, ದೀಪಾವಳಿ(Deepavali) ದಿನ ತುಳಸಿ ಪೂಜೆಯನ್ನೂ ಆಚರಿಸುತ್ತಾರೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ತುಳಸೀ ಕಟ್ಟೆಯನ್ನು ಕೆಂಪು ಕಲ್ಲು ಅಥವಾ ಇಟ್ಟಿಗೆಗಳನ್ನು ಜೋಡಿಸಿ ಕಟ್ಟಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಚಾರದಲ್ಲಿ ಟ್ರೆಂಡ್ ಸ್ವಲ್ಪ ಚೇಂಜ್ ಆಗಿದೆ. ದೇವಸ್ಥಾನದ(Temple) ಒಳಗೆ ಹೆಚ್ಚಾಗಿ ಇಡುವ ಕಾರ್ಕಳದ ಶಿಲೆ, ಕೃಷ್ಣಶಿಲೆಯಿಂದ ತಯಾರಿಸಿದ ತುಳಸಿ ಕಟ್ಟೆಯನ್ನು ಇಡಲಾಗುತ್ತಿತ್ತು. ಆದರೆ ಇದೀಗ ಮನೆ ಮುಂದೆ ಇಡುವ, ಮನೆ ಮಂದಿಗೆ ಬೇಕಾಗುವ ರೀತಿಯ ಶಿಲೆಗಳಿಂದ ಕೆತ್ತಿದ ತುಳಸೀಕಟ್ಟೆಗಳಿಗೆ ಭಾರೀ ಬೇಡಿಕೆ ಬರಲಾರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲ್ಲರ್ಪೆಯ ಅರಿಯುವ ಕಲ್ಲು ಕೆತ್ತುವವರೂ ಇದೀಗ ಶಿಲೆಯ ತುಳಸೀ ಕಟ್ಟೆಯನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ತಮ್ಮದೇ ತಂಡದ ಸದಸ್ಯರಿಂದ ಈ ತುಳಸಿ ಕಟ್ಟೆಗಳನ್ನು ಕೆತ್ತಲಾಗುತ್ತಿದ್ದು, ಈ ತುಳಸಿ ಕಟ್ಟೆಗೆ ಕೃಷ್ಣಶಿಲೆ ಮತ್ತು ಕಾರ್ಕಳದ ಕಲ್ಲನ್ನು ಬಳಸಲಾಗುತ್ತಿದೆ. ಕೆಂಪು ಕಲ್ಲು ಅಥವಾ ಇಟ್ಟಿಗೆಗಳಿಂದ ತಯಾರಿಸುವ ತುಳಸಿಕಟ್ಟೆಯ ಒಳಭಾಗದಲ್ಲಿ ಶೇಖರಣೆಗೊಳ್ಳುವ ಮಣ್ಣಿನ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮಣ್ಣನ್ನು ಶಿಲೆಯಿಂದ ತಯಾರಿಸಿದ ತುಳಸಿ ಕಟ್ಟೆಯಲ್ಲಿ ತುಂಬಿಸಬಹುದಾಗಿದೆ.
ಅಲ್ಲದೇ ಈ ತುಳಸಿ ಕಟ್ಟೆಯನ್ನು ವಾಸ್ತು ಪ್ರಕಾರವೇ ಕೆತ್ತಲಾಗಿದ್ದು, ಮೂರು ಲೇಯರ್ ಗಳ ಮೂಲಕ ತುಳಸಿಕಟ್ಟೆಯನ್ನು ನಿರ್ಮಿಸಲಾಗುತ್ತದೆ. ತಳ ಭಾಗದ ಪೋರ್ಶನ್, ಮಧ್ಯಭಾಗದ ಮತ್ತು ಮೇಲ್ಭಾಗದ ಹೀಗೆ ಮೂರು ಕಲ್ಲುಗಳನ್ನು ಜೋಡಿಸಿ ಈ ತುಳಸಿ ಕಟ್ಟೆ ಸಿದ್ಧಗೊಳ್ಳುತ್ತದೆ.
ಕೆಂಪು ಕಲ್ಲಿನ ತುಳಸಿ ಕಟ್ಟೆಯ ನಿರ್ಮಾಣ ವೆಚ್ಚಕ್ಕೆ ಹೋಲಿಸಿದರೆ, ಶಿಲೆಯ ತುಳಸಿ ಕಟ್ಟೆಗೆ ಕೊಂಚ ದುಬಾರಿ ಹಣ ತೆರಬೇಕಾದ ಅನಿವಾರ್ಯತೆಯೂ ಇದೆ. ಆದರೆ ಒಮ್ಮೆ ಈ ಶಿಲೆಯ ತುಳಸಿ ಕಟ್ಟೆ ಅಳವಡಿಸಿದಲ್ಲಿ, ಅದು ಎಷ್ಟೋ ವರ್ಷಗಳ ಕಾಲ ಬಾಳಿಕೆಗೆ ಬರುತ್ತದೆ. ಗಾತ್ರ ಮತ್ತು ಆಕಾರಕ್ಕೆ ಅನುಗುಣವಾಗಿ ಈ ಕಟ್ಟೆಗಳ ದರ ನಿಗದಿಯಾಗುತ್ತದೆ. 8 ಸಾವಿರದಿಂದ ಹಿಡಿದು 35 ಸಾವಿರದವರೆಗೂ ಈ ತುಳಸಿ ಕಟ್ಟೆಯ ಬೆಲೆ ನಿಗದಿಯಾಗಿದೆ. ಈ ತುಳಸಿ ಕಟ್ಟೆಯನ್ನು ವಾಸ್ತು ಪ್ರಕಾರವೇ ಕೆತ್ತಲಾಗಿದೆ ಎನ್ನುವ ಕಾರಣಕ್ಕೆ ಹೆಚ್ಚಿನ ಜನ ಇದೀಗ ಇದೇ ಶಿಲೆಯ ಕಟ್ಟೆಗಳತ್ತ ಒಲವು ತೋರಿಸಲು ಆರಂಭಿಸಿದ್ದಾರೆ.
Dakshina Kannada,Karnataka