Dakshina Kannada: ಪೊಳಲಿ ರಾಜರಾಜೇಶ್ವರಿ ಜಾತ್ರೋತ್ಸವದಲ್ಲಿ ಚೆಂಡಾಟದ ವೈಭವ! | Dakshina Kannada: Ball glory at Polali Rajarajeshwari fair!

Dakshina Kannada: ಪೊಳಲಿ ರಾಜರಾಜೇಶ್ವರಿ ಜಾತ್ರೋತ್ಸವದಲ್ಲಿ ಚೆಂಡಾಟದ ವೈಭವ! | Dakshina Kannada: Ball glory at Polali Rajarajeshwari fair!

Last Updated:

ಒಟ್ಟು ಐದು ದಿನಗಳ ಕಾಲ ಈ ಚೆಂಡಾಟ ನಡೆಯಲಿದ್ದು, ಐದು ದಿನ ಬೇರೆ ಬೇರೆ ರೀತಿಯ ರಥೋತ್ಸವಗಳು ಕೂಡಾ ಇಲ್ಲಿ ನಡೆಯುತ್ತದೆ. ದುಷ್ಟ ಶಕ್ತಿಯನ್ನು ನಾಶ ಮಾಡಿದ ಹಿನ್ನಲೆಯಲ್ಲಿ ಈ ಚೆಂಡಾಟ ನಡೆಯುತ್ತಿದ್ದು, ಇದು ಬಹಳ ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ನಡೆಸಲಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಆ ಗದ್ದೆಯಲ್ಲಿ(Field) ತಂಡಗಳು ನೆರೆದಿತ್ತು. ಎಲ್ಲರ ಕಾಲು ಚೆಂಡು(Ball) ಒದೆಯೋಕೆ ರೆಡಿಯಾಗಿತ್ತು. ದೇವಸ್ಥಾನದಲ್ಲಿ(Temple) ಪೂಜೆಯಾಗಿ ಚೆಂಡನ್ನು ಗದ್ದೆಗೆ ಎಸೆಯುತ್ತಿದ್ದಂತೆಯೇ ಆ ಎರಡು ತಂಡಗಳ ಯುವಕರು ವೀರಾವೇಶದಿಂದ ಹೋರಾಡಿದರು. ಮೂರು ಬಾರಿ ಗೋಲು ಹೊಡೆದ ಬಳಿಕ ಮತ್ತೆ ಆ ಚೆಂಡನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡಲಾಗುತ್ತದೆ. ಇದು ದಕ್ಷಿಣ ಭಾರತದಲ್ಲಿಯೇ(South India) ವಿಶೇಷವಾಗಿ ಒಂದು ತಿಂಗಳ ಕಾಲ ನಡೆಯುವ ಪೊಳಲಿ ಜಾತ್ರೋತ್ಸವದಲ್ಲಿ(Polali Jatrotsava) ನಡೆಯುವ ಚೆಂಡು ಆಟದಲ್ಲಿ ಕಂಡುಬರುವ ದೃಶ್ಯ.

ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜಾತ್ರೆ ಅಂದ್ರೆ ಪೊಳಲಿ ಚೆಂಡು ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದು, ಇಲ್ಲಿನ ಚೆಂಡಾಟವೇ ಜಾತ್ರೆಯ ವಿಶೇಷವಾಗಿದೆ. ಒಟ್ಟು ಐದು ದಿನಗಳ ಕಾಲ ಈ ಚೆಂಡಾಟ ನಡೆಯಲಿದ್ದು, ಐದು ದಿನ ಬೇರೆ ಬೇರೆ ರೀತಿಯ ರಥೋತ್ಸವಗಳು ಕೂಡಾ ಇಲ್ಲಿ ನಡೆಯುತ್ತದೆ. ದುಷ್ಟ ಶಕ್ತಿಯನ್ನು ನಾಶ ಮಾಡಿದ ಹಿನ್ನಲೆಯಲ್ಲಿ ಈ ಚೆಂಡಾಟ ನಡೆಯುತ್ತಿದ್ದು, ಇದು ಬಹಳ ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ನಡೆಸಲಾಗುತ್ತದೆ.

ಇದನ್ನೂ ಓದಿ: Ghibli Style Image: ಘಿಬ್ಲಿ ಸ್ಟೈಲ್‌ ಇಮೇಜ್‌ ಟ್ರೆಂಡ್‌- ಸೈಬರ್‌ ವಂಚಕರ ಜಾಲಕ್ಕೆ ಸಿಗದಿದ್ರೆ ಒಳ್ಳೇದು ಅಂತಿದಾರೆ ತಜ್ಞರು!

ದೇವಸ್ಥಾನದಿಂದ ಮೆರವಣಿಗೆಯ ಮೂಲಕ ತರುವ ಚೆಂಡನ್ನು ದೇವರ ಗದ್ದೆಯಲ್ಲಿ ಎಸೆದ ಬಳಿಕ ಯುವಕರು ಅದನ್ನು ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಕಾಲಿನಲ್ಲಿ ತಳ್ಳುತ್ತಾ ಸಾಗುತ್ತಾರೆ. ಇದೊಂದು ರೀತಿಯಲ್ಲಿ ಸ್ಪರ್ಧೆಯಂತೆ ನಡೆದರೂ ಕೂಡಾ ಎರಡೂ ದಿಕ್ಕಿನ ಯಾವುದಾದರೂ ಒಂದು ದಿಕ್ಕಿಗೆ ಚೆಂಡು ತಾಗಬೇಕು . ಹೀಗೆ ಮೂರು ಬಾರಿ ಚೆಂಡು ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ತಾಗಿದ ಬಳಿಕ ಅದನ್ನು ತಾಗಿಸಿದವರು ಚೆಂಡನ್ನು ತಂದು ಚೆಂಡು ಎಸೆದವರ ಕೈಗೆ ನೀಡಬೇಕು . ಹೀಗೆ ಮಾಡಿದಾಗ ಮಾತ್ರ ಚೆಂಡಾಟ ಪೂರ್ಣವಾಗಿ ದೇವಸ್ಥಾನದಲ್ಲಿ ಪೂಜಾದಿಗಳು ನಡೆದು ರಥೋತ್ಸವ ನಡೆಯುತ್ತದೆ.

ಅನೇಕ ಬಾರಿ ಎರಡು ಕಡೆಯವ ಪೈಪೋಟಿಯ ಕಾರಣದಿಂದ ರಾತ್ರಿ ತಡವಾಗಿ ಆಟ ಮುಗಿದ ಇತಿಹಾಸ ಕೂಡಾ ಇದೆ. ಮೊದಲ ಚೆಂಡಾಟ ನಡೆದ ಬಳಿಕ ಕುಮಾರ ರಥೋತ್ಸವ ನಡೆಸಲಾಗಿದೆ. ಎರಡನೇ ಚೆಂಡಿನ ಬಳಿಕ ಹೂವಿನ ತೇರು, ಮೂರನೆ ಚೆಂಡಿನ ಬಳಿಕ ಸೂರ್ಯ ಮಂಡಲ , ನಾಲ್ಕನೇ ಚೆಂಡಿನ ಬಳಿಕ ಚಂದ್ರ ಮಂಡಲ ಹಾಗೂ ಐದನೇ ಚೆಂಡಿನ ಬಳಿಕ ಹಾಲು ಪಲ್ಲಕಿ ರಥೋತ್ಸವ ನಡೆದಿದೆ.‌ ಈ ಚೆಂಡಾಟ ಮುಗಿದ ಬಳಿಕ ದೇವಸ್ಥಾನಲ್ಲಿ ವಿಶೇಷವಾಗಿ ದೀವಟಿಗೆ ಸಲಾಂ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.