Last Updated:
ಪುತ್ತೂರಿನಲ್ಲಿ ಸ್ಥಾಪನೆಗೊಂಡಿದ್ದ ಈ ಸೈರನ್ ಹೌಸ್ ದಿನದಲ್ಲಿ ಬೆಳಿಗ್ಗೆ 8 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಸೈರನ್ ಸದ್ದು ಮಾಡುತ್ತಿತ್ತು.
ದಕ್ಷಿಣಕನ್ನಡ: ಯಾರ ಕೈಯಲ್ಲೂ ವಾಚ್ ಇಲ್ಲ, ಯಾವ ಮನೆಯಲ್ಲೂ ಗಡಿಯಾರಗಳು ಟಿಕ್ ಟಿಕ್ ಸದ್ದು ಮಾಡದೇ ಇದ್ದ ಕಾಲದಲ್ಲಿ ಪುತ್ತೂರಿನ ಜನತೆಗೆ ನಿರ್ದಿಷ್ಟ ಸಮಯ ನೆನಪಿಸುತ್ತಿದ್ದದ್ದು ಸೈರನ್ ಹೌಸ್. ಬ್ರಿಟಿಷ್ ಕಾಲದ ಈ ಸೈರನ್ ಹೌಸ್ ಇಂದಿಗೂ ಪುತ್ತೂರಿನ ಹೃದಯ ಭಾಗದಲ್ಲಿ ಬಾನೆತ್ತರದಲ್ಲಿ ಕಂಗೊಳಿಸುತ್ತಿದೆ. ಇತ್ತೀಚಿನವರೆಗೂ ದಿನಕ್ಕೆ ಮೂರು ಬಾರಿ ಸೈರನ್ ಮಾಡಿ ಜನರಿಗೆ ವೇಳೆ ತಿಳಿಸುತ್ತಿತ್ತು. ಆದರೆ ಈ ಸೈರನ್ ಹೌಸ್ ಇದೀಗ ಸದ್ದು ಮಾಡುವುದನ್ನು ನಿಲ್ಲಿಸಿದ್ದರೂ, ಪುತ್ತೂರು ನಗರಕ್ಕೆ ಬರುವ ಆಸುಪಾಸಿನ ಊರಿನ ಜನ ಮಾತ್ರ ಇದನ್ನೊಮ್ಮೆ ವೀಕ್ಷಿಸದೆ ತಮ್ಮ ಊರುಗಳಿಗೆ ಹಿಂದಿರುಗುವುದಿಲ್ಲ.
ವಾಚ್, ಗಡಿಯಾರಗಳು ಮರೀಚಿಕೆಯಾಗಿದ್ದ ಬ್ರಿಟಿಷ್ ಕಾಲದಲ್ಲಿ ಜನತೆಗೆ ಸರಿಯಾಗಿ ಸಮಯದ ಪಾಲನೆ ಮಾಡಲಿ ಎನ್ನುವ ಕಾರಣಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ಬ್ರಿಟಿಷರು ಒಂದು ಸೈರನ್ ಹೌಸ್ ಕಟ್ಟಿದ್ದರು. ಪುತ್ತೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಈ ಸೈರನ್ ಹೌಸ್ ಇದೀಗ ಪುತ್ತೂರು ನಗರಸಭೆಯ ವ್ಯಾಪ್ತಿಯಡಿ ಬರುವ ಈ ಸೈರನ್ ಹೌಸ್ ಇಂದು ಕೇವಲ ಸ್ಮಾರಕವಾಗಿ ಬದಲಾಗಿದೆ.
ಈ ಸೈರನ್ ಹೌಸ್ ನಿಂದ ಹೊರಡುವ ಸೈರನ್ ಯಾವ ರೀತಿ ಪುತ್ತೂರು ಹಾಗು ಆಸುಪಾಸಿನ ಗ್ರಾಮಗಳ ಜನತೆಗೆ ಯಾವ ರೀತಿ ಉಪಕಾರಿಯಾಗಿತ್ತು ಅನ್ನೋದನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಸಮಯದ ಪ್ರಜ್ಞೆಯೇ ಇಲ್ಲದ ಆ ದಿನಗಳಲ್ಲಿ ಸೂರ್ಯನ ಗತಿಯನ್ನು ಲೆಕ್ಕಹಾಕಿ ಸಮಯವನ್ನು ತಿಳಿದುಕೊಳ್ಳಲಾಗುತ್ತಿತ್ತು. ಬ್ರಿಟಿಷರು ಬಂದ ಬಳಿಕ ಅವರ ಆಡಳಿತ ವ್ಯವಸ್ಥೆಗೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಅಲ್ಲಲ್ಲಿ ಇಂತಹ ಸೈರನ್ ಹೌಸ್ ಗಳನ್ನು ಸ್ಥಾಪಿಸಿದ್ದರು.
ಇದನ್ನೂ ಓದಿ: Kukke Subrahmanya: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಅನ್ನಪ್ರಸಾದ ಮತ್ತಷ್ಟು ರುಚಿಕರ!
ಪುತ್ತೂರಿನಲ್ಲಿ ಸ್ಥಾಪನೆಗೊಂಡಿದ್ದ ಈ ಸೈರನ್ ಹೌಸ್ ದಿನದಲ್ಲಿ ಬೆಳಿಗ್ಗೆ 8 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಸೈರನ್ ಸದ್ದು ಮಾಡುತ್ತಿತ್ತು. ಇದರಿಂದ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹೊರಡಬೇಕಾದ ವೇಳೆ, ಮಧ್ಯಾಹ್ನದ ಊಟದ ಸಮಯ ಮತ್ತು ಸಂಜೆ ಕೆಲಸ ಬಿಡುವ ಸಮಯ ಸುಲಭವಾಗಿ ತಿಳಿಯುತ್ತಿತ್ತು.
ಇತ್ತೀಚುನ ವರ್ಷಗಳವರೆಗೆ ದಿನದ ಮೂರು ಹೊತ್ತು ಸೈರನ್ ಹೊಡೆಯುತ್ತಿದ್ದ ಈ ಘಟಕದಲ್ಲಿ ಕೆಲವು ತಾಂತ್ರಿಕ ತೊಂದರೆ ಕಂಡು ಬಂದಿತ್ತು. ಅಂದಿನ ಪುತ್ತೂರು ಪುತ್ತೂರು ಪುರಸಭೆ ದೋಷವನ್ನು ಸರಿಪಡಿಸಿ ಕೆಲವು ತಿಂಗಳಲ್ಲೇ ಮತ್ತೆ ಸದ್ದು ನಿಲ್ಲಿಸಿತ್ತು. ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಗಣೇಶೋತ್ಸವ ಸಂದರ್ಭದಲ್ಲೂ, ಗೌರವಾರ್ಥವಾಗಿ ಗಣೇಶನ ಪೂಜೆಯ ಸಂದರ್ಭದಲ್ಲೂ ಇಲ್ಲಿ ಸೈರನ್ ಹಾಕಲಾಗುತ್ತಿತ್ತು. ಆದರೆ ಬಳಿಕದ ದಿನಗಳಲ್ಲಿ ಈ ಸೈರನ್ ಹೌಸ್ ಸೈರನ್ ಹಾಕುವುದನ್ನು ಸಂಪೂರ್ಣ ನಿಲ್ಲಿಸಿದೆ.
ಚಿಕ್ಕವರಿದ್ದ ಸಂದರ್ಭದಲ್ಲಿ ಈ ಸೈರನ್ ಸದ್ದನ್ನು ಕೇಳಿಸಿಕೊಂಡಿದ್ದ ಜನ ಪುತ್ತೂರು ನಗರಕ್ಕೆ ಬಂದಾಗ ಈ ಸೈರನ್ ಹೌಸ್‌ಗೊಮ್ಮೆ ಭೇಟಿ ನೀಡಿ ಹೋಗೋದು ಸಾಮಾನ್ಯವಾಗಿದೆ. ಸೈರನ್ ಹೌಸ್‌ನೊಳಗಿದ್ದ ಯಂತ್ರಗಳನ್ನು ರಿಪೇರಿ ಹಿನ್ನಲೆಯಲ್ಲಿ ನಗರಸಭೆಯಲ್ಲೇ ಇರಿಸಲಾಗಿದೆ. ಯಂತ್ರಗಳು ಇಲ್ಲದ ಕಾರಣ ಕಟ್ಟಡಕ್ಕೂ ಬೀಗ ಜಡಿಯಲಾಗಿದೆ. ಆದರೆ ಸೈರನ್ ಹಾಕುವ ಮೈಕ್ ಇಂದಿಗೂ ಬಾನೆತ್ತರದ ಸ್ತೂಪದಂತಹ ನಿರ್ಮಾಣದ ಮೇಲೆ ಇಂದಿಗೂ ಇದ್ದು, ಇದನ್ನು ನೀಡಲೆಂದೇ ಪುತ್ತೂರಿಗೆ ಬರುವ ಜನರಿದ್ದಾರೆ.
Dakshina Kannada,Karnataka
October 13, 2024 3:15 PM IST