Last Updated:
ಬಜಪೆಯ ಕರಾವಳಿ ಸ್ಟೋಡಿಯೋದ ಮಾಲಿಕ ರತ್ನಾಕರ ಅವರ ಹಳೆಯ ಕಾರುಗಳ ಮೇಲಿನ ಆಸಕ್ತಿ ಈಗ ಒಂದು ಉದ್ಯಮವಾಗಿಯೂ ಬೆಳೆಯುತ್ತಿದೆ.
ದಕ್ಷಿಣ ಕನ್ನಡ: ಮದುವೆಯನ್ನು ಡಿಫೆರೆಂಟ್ ಆಗಿ ಮಾಡಬೇಕೆನ್ನೋದು ಎಲ್ಲರ ಆಸೆ. ಡಿಫೆರೆಂಟ್ ಆಲೋಚನೆಗೆ ತಕ್ಕಂತೆ ನವನವೀನತೆಯನ್ನು ಮದುವೆಗಳಲ್ಲಿ(Marriages) ಕಾಣುತ್ತೇವೆ. ಯುವಕರ ವಿಂಟೇಜ್ ಕಾರ್ನ ಕ್ರೇಜ್ನ್ನೇ ಉದ್ಯಮವಾಗಿ(Business) ಬಳಸಿ ಯಶಸ್ವಿಯಾಗಿದ್ದಾರೆ ಮಂಗಳೂರಿನ ಫೋಟೋಗ್ರಾಫರ್. ಹೌದು, ಮದುವೆಗಳಲ್ಲಿ ವಧು-ವರರ ದಿಬ್ಬಣಕ್ಕಾಗಿ ವಿಂಟೇಜ್ ಕಾರ್ ಗಳನ್ನು(Vintage Cars) ಬಳಸುವ ಕ್ರೇಜ್ ಹೆಚ್ಚಾಗಿರೋದನ್ನು ಗಮನಿಸಿದ ಮಂಗಳೂರಿನ ಬಜಪೆಯ ಫೋಟೋಗ್ರಾಫರ್ ರತ್ನಾಕರ್(Photographer Rathnakar) ಈಗ ಐದು ವಿಂಟೇಜ್ ಕಾರ್ಗಳನ್ನು ರೆಂಟ್ ಗೆ ನೀಡಿ ಉದ್ಯಮ ನಡೆಸುತ್ತಿದ್ದಾರೆ.
ಮದುವೆ ಸಮಾರಂಭಗಳಲ್ಲಿ ಮದುಮಗ ಮತ್ತು ಮದುಮಗಳು ರಾಯಲ್ ಮನೆತನದವರಂತೆ ಪ್ರವೇಶ ನೀಡಲು ಹಳೆಯ ವಾಹನಗಳನ್ನು ಬಳಸುತ್ತಾರೆ. ಬಜಪೆಯ ಕರಾವಳಿ ಸ್ಟುಡಿಯೋ ಮಾಲಕ ರತ್ನಾಕರ್ ಇಂಥಹುದೇ ಕಾರ್ಯಕ್ರಮಗಳಿಗಾಗಿ ಐದು ಹಳೆಯ ಕಾರು ಮತ್ತು ಒಂದು ಜೀಪನ್ನು ಇಟ್ಟುಕೊಂಡಿದ್ದಾರೆ. ಬಜಪೆಯ ಕರಾವಳಿ ಸ್ಟೋಡಿಯೋದ ಮಾಲಿಕ ರತ್ನಾಕರ ಅವರ ಹಳೆಯ ಕಾರುಗಳ ಮೇಲಿನ ಆಸಕ್ತಿ ಈಗ ಒಂದು ಉದ್ಯಮವಾಗಿಯೂ ಬೆಳೆಯುತ್ತಿದೆ.
ಉತ್ತರ ಪ್ರದೇಶದಿಂದ ತಂದ ಅರಸು ಮನೆತನದ 1929ರ ಫೆವರ್ಲೆಟ್ ಕಾರು, ಗುಜರಾತ್ನಿಂದ ತಂದ ಜಡೇಜಾ ಅವರ ಅರಸು ಮನೆತನದ 1937ರ ಆಸ್ಟಿನ್ ರೊಬಿ, ಗದಗ್ನಿಂದ ತಂದ 1951ರ ಮೌರಿಸ್ ಮೈನರ್ (ಎಂಜಿ), ಉತ್ತರ ಪ್ರದೇಶದಿಂದ ತಂದ 1961ರ ಸ್ಟಾಂಡರ್ಡ್ ಹೆರಾಲ್ಡ್ ಬೆಂಗಳೂರಿನಿಂದ ತಂದ 1981ರ ಪ್ರೀಮಿಯರ್ ಪದ್ಮಿನಿ 1960ರ ವಿಲ್ಲಿಸ್ ಜೀಪ್ ಈ ಆರು ಹಳೆಯ ವಾಹನಗಳು ಅವರ ಮನೆಯಲ್ಲಿವೆ.
ವಧು-ವರರು ತಮ್ಮಜೀವನದ ಆರಂಭಿಕ ಹೆಜ್ಜೆಯ ಸವಿನೆನಪು ರಾಯಲ್ ಆಗಿ ಇರಬೇಕೆಂದು ವಿಂಟೇಜ್ ಕಾರ್ ಗಳನ್ನು ಬಳಸುತ್ತಿರೋದು ರತ್ನಾಕರ್ ಅವರ ಉದ್ಯಮಕ್ಕೂ ಯಶಸ್ಸು ತಂದಿದೆ..
Dakshina Kannada,Karnataka
May 02, 2025 10:53 AM IST