Dakshina Kannada: ಸುಳ್ಯದ ಬಿಳಿನೆಲೆಯ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯರಿಂದ ಸುವರ್ಣಸೌಧದಲ್ಲಿ ‘ಅನುಭವ ಮಂಟಪ’ದ ಪಾಠ | CM Siddaramaiah teach about Anubhava Mantapa to school students 

Dakshina Kannada: ಸುಳ್ಯದ ಬಿಳಿನೆಲೆಯ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯರಿಂದ ಸುವರ್ಣಸೌಧದಲ್ಲಿ ‘ಅನುಭವ ಮಂಟಪ’ದ ಪಾಠ | CM Siddaramaiah teach about Anubhava Mantapa to school students 

Last Updated:

ಬಸವಣ್ಣ ಜಾತಿ, ವರ್ಗ, ಮೌಢ್ಯ ಹಾಗೂ ಕಂದಾಚಾರ ಹೋಗಬೇಕು ಎಂದಿದ್ದರು. ನೀವೆಲ್ಲಾ ಕಲಿತು ಮಾನವರಾಗಬೇಕು ಎಂದು ಕಿವಿಮಾತು ಹೇಳಿದರು.

X

ವಿಡಿಯೋ ಇಲ್ಲಿ ನೋಡಿ

‌ದಕ್ಷಿಣ ಕನ್ನಡ: ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ, ಕೈಕಂಬ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಸುಮಾರು 33 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಬೆಳಗಾವಿ ಸುವರ್ಣಸೌಧಕ್ಕೆ(Belagavi Suvarnasoudha) ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ವಿದ್ಯಾರ್ಥಿಗಳಿಗೆ ಅನುಭವ ಮಂಟಪದ(Anubhava Mantapa) ಬಗ್ಗೆ ಪಾಠ ಮಾಡಿದರು.

ಬಿಳಿನೆಲೆ, ಕೈಕಂಬ ಶಾಲೆಯಿಂದ ಸುಮಾರು 33 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಬೆಳಗಾವಿ ಸುವರ್ಣಸೌಧಕ್ಕೆ ತೆರಳಿದ್ದರು. ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು ಮೊದಲಿಗೆ ಸಭಾಪತಿ ಯು.ಟಿ.ಖಾದರ್ ಅವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ವಿದ್ಯಾರ್ಥಿಗಳು ನೋಡದೆಯೇ ಸಂವಿಧಾನ ಪೀಠಿಕೆಯನ್ನು ಯು.ಟಿ.ಖಾದರ್ ಮುಂಭಾಗ ವಾಚಿಸಿದರು. ಇದಕ್ಕೆ ಮೆಚ್ಚುಗೆ ಸೂಚಿಸಿದ ಖಾದರ್, ಮಕ್ಕಳಿಗೆ ಸಿಎಂ ಅವರನ್ನು ಭೇಟಿ ಮಾಡುವ ಅವಕಾಶ ಒದಗಿಸಿದರು.

ಇದನ್ನೂ ಓದಿ: Melukote: ಮಂಡ್ಯದ ಮೇಲುಕೋಟೆಯಲ್ಲಿ ಅದ್ದೂರಿಯಾಗಿ ಜರುಗಿದ ವಿಷ್ಣು ದೀಪೋತ್ಸವ!

ಈ ವೇಳೆ ಸಿಎಂ ಸಿದ್ದರಾಮಯ್ಯನವರ ಎದುರೂ ಸಹ ವಿದ್ಯಾರ್ಥಿಗಳು ನೋಡದೆ ಸಂವಿಧಾನ ಪೀಠಿಕೆ ವಾಚಿಸಿದರು. ಇದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಶ್ಲಾಘಿಸಿದರು. ಬಳಿಕ ಸಿದ್ದರಾಮಯ್ಯ, ವಿದ್ಯಾರ್ಥಿಗಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ವಿವರಿಸಿದರು.

ಬಸವಣ್ಣ ಜಾತಿ, ವರ್ಗ, ಮೌಢ್ಯ ಹಾಗೂ ಕಂದಾಚಾರ ಹೋಗಬೇಕು ಎಂದಿದ್ದರು. ನೀವೆಲ್ಲಾ ಕಲಿತು ಮಾನವರಾಗಬೇಕು ಎಂದು ಕಿವಿಮಾತು ಹೇಳಿದರು. ಈ ವೇಳೆ ಬಿಳಿನೆಲೆ ಶಾಲಾ ಮುಖ್ಯ ಶಿಕ್ಷಕಿ ಪವಿತ್ರಾ, ಎಸ್‌ಡಿಎಂಸಿ ಅಧ್ಯಕ್ಷ ನವೀನ್, ಶಿಕ್ಷಕಿ ವನಿತಾ ಮತ್ತಿತರರು ಜೊತೆಗಿದ್ದರು.