Dakshina Kannada: ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಪಾಡಲು ವಿನೂತನ ಪ್ರಯತ್ನ | Dakshina Kannada: Innovative effort to maintain cleanliness in piligobbu program

Dakshina Kannada: ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಪಾಡಲು ವಿನೂತನ ಪ್ರಯತ್ನ | Dakshina Kannada: Innovative effort to maintain cleanliness in piligobbu program

Last Updated:

ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದರು. ಸ್ವಚ್ಛತೆಯ ಈ ವಿನೂತನ ಪ್ರಯತ್ನಕ್ಕೆ ಭಾರೀ ಪ್ರಶಂಸೆಯೂ ದೊರೆತಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎರಡನೇ ಬಾರಿಗೆ ಪಿಲಿಗೊಬ್ಬು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹುಲಿವೇಷಗಳ ಕುಣಿತ ಸ್ಪರ್ಧೆಯ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರೇಕ್ಷಕರಿಗಾಗಿ ಫುಡ್‌ ಫೆಸ್ಟ್‌ ಅನ್ನು ಕೂಡಾ ಆಯೋಜನೆ ಮಾಡಲಾಗಿತ್ತು. ಇಂತಹ ಕಾರ್ಯಕ್ರಮಗಳಿಗೆ ಸಹಜವಾಗಿಯೇ ಸಾವಿರಾರು ಜನ ಸೇರುತ್ತಾರೆ. ಹಾಗಾಗಿ ಇಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದರು.

ಈ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆಯನ್ನೂ ನೀಡಲಾಗಿತ್ತು. ಜೊತೆಗೆ ಸಾವಿರಾರು ಜನ ಭಾಗವಹಿಸಿದ್ದರು. ಹೀಗೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸ್ವಚ್ಛತೆಯ ದೃಷ್ಟಿಯಿಂದ ಕಸದ ಬುಟ್ಟಿಗಳನ್ನು ಇಟ್ಟರೂ ಕೂಡಾ ಅಲ್ಲಲ್ಲಿ ಕಸ ಕಡ್ಡಿಗಳು ಕಾಣಸಿಗುತ್ತಲೇ ಇರುತ್ತವೆ. ಹೀಗಿರುವಾಗ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ವಿಷಯವಾಗಿ ಒಂದು ಸಣ್ಣ ತಪ್ಪು ಕೂಡಾ ನಡೆಯಬಾರದು ಎಂದು ಅಲ್ಲಲ್ಲಿ ಕಾಣಸಿಗುವ ಕಸವನ್ನು ಹೆಕ್ಕಿ, ಆ ಕಸವನ್ನು ತೋರಿಸಿ ಬಹುಮಾನ ಪಡೆಯಿರಿ ಎಂದು ಕಾರ್ಯಕ್ರಮದ ಆಯೋಜಕರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದರು. ಸ್ವಚ್ಛತೆಯ ಈ ವಿನೂತನ ಪ್ರಯತ್ನಕ್ಕೆ ಭಾರೀ ಪ್ರಶಂಸೆಯೂ ದೊರೆತಿದೆ.

ಇದನ್ನೂ ಓದಿ: Bengaluru: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ದೂರಿ ನವರಾತ್ರಿ ಸಂಭ್ರಮ!

ಸ್ವಚ್ಛತಾ ಸಿಬ್ಬಂದಿಗಳು ಮಾರ್ಗದಲ್ಲಿ ಮತ್ತು ಆಹಾರ ಮಳಿಗೆಗಳ ಸುತ್ತಮುತ್ತ ಇದ್ದಂತಹ ಕೆಳಗೆ ಬಿದ್ದಂತಹ ಸಣ್ಣ ಸಣ್ಣ ಕಸ ಕಡ್ಡಿಗಳನ್ನು ಕೂಡಾ ಹೆಕ್ಕಿ ಬುಟ್ಟಿಗೆ ಹಾಕುತ್ತಿದ್ದರು. ಜೊತೆಗೆ ಕಸದ ಬುಟ್ಟಿಯಲ್ಲಿ ಕಸ ತುಂಬಿ ತುಳುಕದಂತೆ ಮುಂಜಾಗ್ರತೆ ವಹಿಸಿದ್ದರು. ಆ ಮೂಲಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿರತರಾಗಿರುವ ದೃಶ್ಯ ಕಾರ್ಯಕ್ರಮ ನಡೆಯುವ ಪ್ರದೇಶದ ಸುತ್ತಲೂ ಕಂಡು ಬರುತ್ತಿತ್ತು.

ಹುಲಿಗೊಬ್ಬು ಕಾರ್ಯಕ್ರಮದಲ್ಲಿ ಈ ರೀತಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ಈ ವಿಡಿಯೋಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಪಿಲಿಗೊಬ್ಬು/ಹುಲಿಗೊಬ್ಬು ಕಾರ್ಯಕ್ರಮ ಅಂದ್ರೇನು?

ಹುಲಿಗೊಬ್ಬು ಅಂದರೆ ಆಯ್ದ ಹುಲಿವೇಷಗಳ ತಂಡಗಳನ್ನು ಕರೆಸಿ ಪ್ರದರ್ಶನ ತೋರಿಸುವ ಕಾರ್ಯಕ್ರಮ. ಹುಲಿಗೊಬ್ಬು ಕಾರ್ಯಕ್ರಮದಲ್ಲಿ 8 ತಂಡಗಳು ಭಾಗಿಯಾಗಿತ್ತು. ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಮೊದಲ ಬಹುಮಾನವಾಗಿ 3 ಲಕ್ಷ ನೀಡಲಾಗುತ್ತದೆ.