Last Updated:
ವಿಷ್ಣುಮೂರ್ತಿ ದೈವವನ್ನು ಕೇರಳ ರಾಜ್ಯದ ಗಡಿಭಾಗವನ್ನು ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಈ ದೈವದ ಮುಖವರ್ಣಿಕೆಯ ಅಬ್ಬರಕ್ಕೆ ಮನಸೋಲದವರಿಲ್ಲ. ಅಲ್ಲದೆ ಈ ದೈವವು ಬೆಂಕಿಯಲ್ಲಿ ಆಡುವ ಚೆಲ್ಲಾಟವನ್ನು ನೋಡಿ ನಿಬ್ಬೆರಗಾಗದವರಿಲ್ಲ.
ದಕ್ಷಿಣಕನ್ನಡ: ದೈವಾರಾಧನೆ(Daivaradhane) ಅನ್ನೋದು ತುಳುನಾಡಿನ ಪ್ರಮುಖ ಧಾರ್ಮಿಕ ಆಚರಣೆ. ಈ ಆಚರಣೆಯಲ್ಲಿರುವ ಎಲ್ಲಾ ಸಂಪ್ರದಾಯಗಳೂ(Rituals) ಒಂದು ರೀತಿಯ ಆಕರ್ಷಣೆಯ ಕೇಂದ್ರ ಬಿಂದುಗಳು. ಯಾವ ರೀತಿ ದೈವಾರಾಧನೆಯಲ್ಲಿ ದೈವಗಳು ಕಾಲಿಗೆ ಕಟ್ಟುವ ಗಗ್ಗರ ಆಕರ್ಷಣೆಯಾಗಿದೆಯೋ, ಅದೇ ಪ್ರಕಾರ ದೈವಗಳಿಗೆ ಹಚ್ಚುವ ಬಣ್ಣಗಳಿಗೂ(Colors) ಪ್ರಧಾನ್ಯತೆಯಿದೆ. ಇಂತಹ ಆಕರ್ಷಕ ಬಣ್ಣಗಳನ್ನು ಹಚ್ಚುವ ದೈವಗಳಲ್ಲಿ ದಕ್ಷಿಣಕನ್ನಡ(Dakshina Kannada) ಮತ್ತು ಕಾಸರಗೋಡು ಜಿಲ್ಲೆಗಳ ಗಡಿಭಾಗದಲ್ಲಿ ಕಂಡುಬರುವ ವಿಷ್ಣುಮೂರ್ತಿ ದೈವವೂ ಒಂದು.
ವಿಷ್ಣುಮೂರ್ತಿ ದೈವ ಬೆಂಕಿಯಲ್ಲಿ ಆಡುವ ಚೆಲ್ಲಾಟವೇ ಚಂದ!
ದೈವಗಳ ಸ್ವಭಾವ ಮತ್ತು ಪ್ರಾಧಾನ್ಯತೆಗೆ ಅನುಗುಣವಾಗಿ ದೈವ ನರ್ತಕ ಬಣ್ಣಗಳನ್ನು ಬಳಿಯುತ್ತಾನೆ. ಅದೇ ಪ್ರಕಾರ ತುಳುನಾಡಿನಲ್ಲಿ ಆರಾಧಿಸಲ್ಪಡುವ ಬಹುತೇಕ ಪ್ರಧಾನ ದೈವಗಳ ಮುಖವರ್ಣಿಕೆ ಹಳದಿ ಬಣ್ಣದಲ್ಲೇ ಹೆಚ್ಚಾಗಿರುತ್ತದೆ. ಅದೇ ರೀತಿ ಗುಳಿಗ, ಕೊರಗಜ್ಜ ಮೊದಲಾದ ದೈವಗಳ ಮುಖವರ್ಣಿಕೆ ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಒಳಗೊಂಡಿರುತ್ತದೆ. ಅದೇ ಪ್ರಕಾರ ಕೇರಳ ಭಾಗದಲ್ಲಿ ಆರಾಧಿಸಲ್ಪಡುವ ದೈವಗಳ ಮುಖವರ್ಷಿಕೆ ಕಡು ಕೆಂಪು ಬಣ್ಣದಿಂದ ಕೂಡಿರುತ್ತದೆ. ಅತ್ಯಂತ ಆಕರ್ಷಕವಾಗಿ ಕಾಣುವ ಕಡು ಕೆಂಪು ಬಣ್ಣದ ಮುಖವರ್ಣಿಕೆಯನ್ನು ಹೊಂದಿರುವ ವಿಷ್ಣುಮೂರ್ತಿ ದೈವವನ್ನು ಕೇರಳ ರಾಜ್ಯದ ಗಡಿಭಾಗವನ್ನು ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಈ ದೈವದ ಮುಖವರ್ಣಿಕೆಯ ಅಬ್ಬರಕ್ಕೆ ಮನಸೋಲದವರಿಲ್ಲ. ಅಲ್ಲದೆ ಈ ದೈವವು ಬೆಂಕಿಯಲ್ಲಿ ಆಡುವ ಚೆಲ್ಲಾಟವನ್ನು ನೋಡಿ ನಿಬ್ಬೆರಗಾಗದವರಿಲ್ಲ.
ಇದನ್ನೂ ಓದಿ: Dakshina Kannada: ಎಳೆ ವಯಸ್ಸಿನಲ್ಲೇ ದೈವಗಳ ಸೇವೆಗೆ ಇಳಿದ ಯುವಕ!
ಕೇರಳೀಯರ ಅತ್ಯಂತ ಪ್ರಭಾವಿ ದೈವವಾಗಿರುವ ಹಾಗೂ ಕರಾವಳಿಯ ಕೇರಳ ಗಡಿ ಭಾಗದಲ್ಲಿ ಮಾತ್ರ ಕಂಡು ಬರುವ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ತನ್ನದೇ ಆದ ಮಹತ್ವವಿದೆ. ಒಂದು ಮರದಷ್ಟು ಎತ್ತರದಲ್ಲಿ ಮರದ ತುಂಡುಗಳನ್ನು ಜೋಡಿಸಿ ಅದಕ್ಕೆ ಈ ದೈವದ ನುಡಿಗಟ್ಟಿನ ಪ್ರಕಾರ ಬೆಂಕಿಯನ್ನು ಹಚ್ಚಿ ಉರಿಸಲಾಗುತ್ತದೆ. ಉರಿದು ಉಳಿಯುವ ಕೆಂಡದಲ್ಲಿ ಈ ದೈವವು ಕುಳಿತುಕೊಳ್ಳುವ, ಮಲಗುವ ದೃಶ್ಯಗಳು ಸೇರಿದ್ದ ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಯಾವ ಗ್ರಾಮದಲ್ಲಿ ಈ ಒತ್ತೆಕೋಲ ನಡೆಯುತ್ತದೋ, ಆ ಗ್ರಾಮದಾದ್ಯಂತದಿಂದ ಒಂದು ತಿಂಗಳಿನಿಂದ ಮರದ ತುಂಡುಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಈ ಮರಗಳ ತುಂಡುಗಳನ್ನು ಒತ್ತೆಕೋಲ ನಡೆಯುವಂತಹ ಸ್ಥಳದಲ್ಲಿ ಶೇಖರಿಸುವ ಮೂಲಕ ಒತ್ತೆಕೋಲ ನೇಮೋತ್ಸವದ ದಿನ ಇದಕ್ಕೆ ದೈವದ ಕಟ್ಟುಪಾಡುಗಳ ಮೂಲಕ ಬೆಂಕಿ ಹಚ್ಚಲಾಗುತ್ತದೆ.
ವಿಷ್ಣುಮೂರ್ತಿ ದೈವವು ವಿಷ್ಣುವಿನ ಅವತಾರವಾಗಿದ್ದು, ಹಿಂದೆ ಪ್ರಹ್ಲಾದನ ಭಕ್ತಿಗೆ ಒಲಿದ ವಿಷ್ಣುವು ಹಿರಣ್ಯಕಶ್ಯಪುವನ್ನು ನರಸಿಂಹಾವತಾರದಲ್ಲಿ ವಧೆ ಮಾಡಿದ್ದನು. ಈ ಸಂದರ್ಭದಲ್ಲಿ ದುಷ್ಟನ ವಧೆಯಿಂದಾಗಿ ವಿಷ್ಣುವಿನ ಮೈ ಎಲ್ಲಾ ರಕ್ತದಿಂದ ತುಂಬಿತ್ತು. ಆ ಸಂದರ್ಭದಲ್ಲಿ ವಿಷ್ಣು ಬೆಂಕಿಯಲ್ಲಿ ಸ್ನಾನ ಮಾಡುವ ಮೂಲಕ ತನ್ನ ಕೊಳೆಯನ್ನು ತೊಳೆದುಕೊಂಡ ಎನ್ನುವ ನಂಬಿಕೆ ಭಕ್ತರದ್ದಾಗಿದೆ.
Dakshina Kannada,Karnataka
December 24, 2024 4:15 PM IST