Dakshina Kannada: ಆಡಳಿತ ಮಂಡಳಿಗೆ ಸ್ವಚ್ಛತೆಯ ಪಾಠ ಬೋಧಿಸಿದ ದೈವ! | Dakshina Kannada God taught the lesson of cleanliness to Temple administration

Dakshina Kannada: ಆಡಳಿತ ಮಂಡಳಿಗೆ ಸ್ವಚ್ಛತೆಯ ಪಾಠ ಬೋಧಿಸಿದ ದೈವ! | Dakshina Kannada God taught the lesson of cleanliness to Temple administration

Last Updated:

ವಲಸರಿ ಎಂದರೆ ದೈವ ಕಟ್ಟಿದ ನರ್ತಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ನರ್ತನದ ಮೂಲಕ ಸಾಗುವುದಾಗಿದೆ. ದೈವದ ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಕರಾವಳಿಯಲ್ಲಿ(Coastal) ದೈವಾರಾಧನೆ(Worship of Gods) ಪ್ರಕೃತಿಯ ಆರಾಧನೆ(Worship of Nature) ಜೊತೆ ಜೊತೆಯಾಗಿ ನಡೆಯುತ್ತದೆ. ಪ್ರಕೃತಿಯನ್ನೇ ಇಲ್ಲಿ ದೇವರು, ದೈವ‌ ಎಂದು ನಂಬುವ ಹಲವಾರು ಸಂಪ್ರದಾಯ, ಪದ್ಧತಿಗಳು ಕರಾವಳಿ ಭಾಗದಲ್ಲಿದೆ. ಈ ಪ್ರಕೃತಿಯನ್ನು(Nature) ಹಾಳುಗೆಡವಿದರೆ ದೈವಗಳು ಕೂಡಾ ಮುನಿಸಿಕೊಳ್ಳುತ್ತವೆ ಎನ್ನುವುದಕ್ಕೊಂದು ನೈಜ ಉದಾಹರಣೆ(Example) ಇಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ‌ಕೊಲ್ಯ ಎಂಬಲ್ಲಿ ನಡೆದ ದೈವದ ನೇಮದ ಸಂದರ್ಭದಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ.

ಚಾಮುಂಡಿ ದೈವದ ಕಟ್ಟೆ ಜಾತ್ರೆ

ದೈವದ ನೇಮ ಆಗುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ಕೆಂಡಾಮಂಡಲವಾದ ವೈದ್ಯನಾಥ ದೈವ ಕಸ ತೆಗೆದು ಶುಚಿಗೊಳಿಸದಿದ್ದಲ್ಲಿ ವಲಸರಿ (ದೈವದ ಸವಾರಿ) ಹೊರಡೋಲ್ಲವೆಂದು ದೈವದ ಸೇವೆ ನಡೆಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದೆ. ಮಂಗಳೂರು ಹೊರವಲಯದ ಕೊಲ್ಯದ ಕನೀರುತೋಟದಲ್ಲಿ ಈ ದೈವಾರಾಧನೆ ನಡೆದಿದೆ. ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆಜಾತ್ರೆ ಡಿ.25 ರ ಬುಧವಾರ ನಡೆದಿತ್ತು.

ಇದನ್ನೂ ಓದಿ: Historical Temple: ಒಂದೇ ರಾತ್ರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಕಟ್ಟಿದ ಐತಿಹಾಸಿಕ ದೇವಾಲಯವಿದು!

ಕಸ ತೆಗೆಯದಿದ್ದರೆ ಮುಂದೆ ಹೋಗಲ್ಲ ಎಂದ ದೈವ

ರಾತ್ರಿ ಇಲ್ಲಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ವಲಸರಿ ಎಂದರೆ ದೈವ ಕಟ್ಟಿದ ನರ್ತಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ನರ್ತನದ ಮೂಲಕ ಸಾಗುವುದಾಗಿದೆ. ದೈವದ ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ. ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿಯೇ ಇದಕ್ಕೆ ಕಾರಣ. “ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ?. ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ” ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದೆ.

ದೈವದ ಪ್ರಕೃತಿಯ ಮೇಲಿನ ಕಾಳಜಿಗೆ ತಕ್ಷಣ ಎಚ್ಚೆತ್ತ ಆಡಳಿತ ಮಂಡಳಿ ದೈವ ಸಾಗುವ ದಾರಿಯನ್ನು ಶುಚಿಗೊಳಿಸಿದೆ. ದಾರಿ ಶುಚಿಗೊಂಡ ಬಳಿಕ ವೈದ್ಯನಾಥ ದೈವವು ತನ್ನ ವರ್ಷಂಪ್ರತಿ ನಡೆಯುವ ವಲಸರಿಯನ್ನು ನೆರವೇರಿಸಿದೆ‌.