Dakshina Kannada: ಇಲ್ಲಿ ನಡೆಯುತ್ತೆ ದೈವ ಮತ್ತು ಭಕ್ತರ ಮಧ್ಯೆ ಬೆಂಕಿಯಾಟ- ನೋಡುಗರಿಗೆ ರೋಮಾಂಚನದ ಅನುಭವ! | Here a firefight between the gods and the devotees in Dakshina Kannada

Dakshina Kannada: ಇಲ್ಲಿ ನಡೆಯುತ್ತೆ ದೈವ ಮತ್ತು ಭಕ್ತರ ಮಧ್ಯೆ ಬೆಂಕಿಯಾಟ- ನೋಡುಗರಿಗೆ ರೋಮಾಂಚನದ ಅನುಭವ! | Here a firefight between the gods and the devotees in Dakshina Kannada

Last Updated:

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ತೂಟೆದಾರ ತುಂಬಾ ಪ್ರಸಿದ್ದಿ.. ಕಟೀಲಿನಲ್ಲಿ ಅತ್ತೂರು ಹಾಗೂ ಕೊಡೆತ್ತೂರು ಊರಿನವರ ನಡುವೆ ತೂಟೆದಾರ ನಡೆಯುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದೈವಾರಾಧನೆಗೆ ಹೆಸರು ವಾಸಿಯಾಗಿರುವ ತುಳುನಾಡಿನಲ್ಲಿ(Tununadu) ವಿಶೇಷ ರೀತಿಯಲ್ಲಿ ದೈವಗಳ ಆರಾಧನೆಗಳು ನಡೆಯುತ್ತವೆ. ಇಂಥ ವಿಶೇಷ ಆಚರಣೆಯಲ್ಲಿ ತೂಟೆದಾರ ಅಥವಾ ಅಗ್ನಿಕೇಳಿಯೂ ಒಂದು. ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ(Kateelu Durgaparameshwari Temple) ಕ್ಷೇತ್ರದಲ್ಲಿ ನಡೆಯುವ “ತೂಟೆದಾರ ” ಜಗತ್ಪ್ರಸಿದ್ಧ.. ಕಟೀಲಿನಲ್ಲಿ ಎರಡು ಊರುಗಳ ನಡುವೆ ಅಗ್ನಿಕೇಳಿ ನಡೆದರೆ, ಕಟೀಲು ಸಮೀಪ ದೈವಸ್ಥಾನವೊಂದರಲ್ಲಿ ದೈವ ಹಾಗೂ ಭಕ್ತರ ನಡುವೆ ಬೆಂಕಿಯಾಟ ‌ನಡೆಯುತ್ತೆ. ದೈವವು ಭಕ್ತರನ್ನು ಅಟ್ಟಾಡಿಸಿಕೊಂಡು ಹೋಗಿ ಬೆಂಕಿಗೆ(Fire) ಎಸೆಯೋದನ್ನು ನೋಡೋದೆ ಒಂದು ರೋಮಾಂಚನದ ಅನುಭವ.

ನಡುರಾತ್ರಿ ಸಮಯ. ಧೂಮಾವತಿ ದೈವದ ನೇಮೋತ್ಸವ ಸಂದರ್ಭ. ಗದ್ದೆಯಲ್ಲಿ ಬೆಂಕಿ ಉರಿಯುತ್ತಿರುವ ತೂಟೆ ಹಿಡಿದು, ಭಕ್ತರನ್ನು ಅಟ್ಟಾಡಿಸುತ್ತಿರುವ ದೈವ.. ಓಡುವ ಭಕ್ತರ ಮೈಗೆ ಉರಿಯುವ ತೂಟೆಯನ್ನು ಎಸೆಯುವ ದೈವ.. ಬೆಂಕಿ ಎಸೆತದಿಂದ ತಪ್ಪಿಸಿಕೊಳ್ಳುತ್ತಿರುವ ಭಕ್ತರು.. ಈ ದೃಶ್ಯ ನೋಡೋದೆ ಒಂದು ರೋಮಾಂಚನದ ಅನುಭವ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪದ ಅಜಾರು ಗ್ರಾಮದ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನಡೆದ ದೈವ-ಭಕ್ತರ ನಡುವೆ ನಡೆದ “ಅಗ್ನಿಕೇಳಿ- ತೂಟೆದಾರ”. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ತೂಟೆದಾರ ತುಂಬಾ ಪ್ರಸಿದ್ದಿ.. ಕಟೀಲಿನಲ್ಲಿ ಅತ್ತೂರು ಹಾಗೂ ಕೊಡೆತ್ತೂರು ಊರಿನವರ ನಡುವೆ ತೂಟೆದಾರ ನಡೆಯುತ್ತದೆ. ಕಟೀಲು ಮಾತ್ರವಲ್ಲದೇ ಅನೇಕ ದೈವ ದೇವಸ್ಥಾನದಲ್ಲಿ ತೂಟೆದಾರ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಆದ್ರೆ ಅಜಾರು ಗ್ರಾಮದಲ್ಲಿ ನಡೆಯೋದು ದೈವ ಹಾಗೂ ಭಕ್ತರ ನಡುವೆ ಬೆಂಕಿಯಾಟ.

ಇದನ್ನೂ ಓದಿ: Laksha Deepotsava: ಶ್ರೀರಂಗನಾಥಸ್ವಾಮಿಗೆ ವೈಭವದಿಂದ ಜರುಗಿದ ಲಕ್ಷ ದೀಪೋತ್ಸವ- ದೇವರ ದರ್ಶನ ಪಡೆದ ಧನ್ಯರಾದ ಭಕ್ತರು

ಶ್ರೀ ಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸದ ಸಂದರ್ಭ ದೈವದ ಬಂಡಿಯನ್ನು ಎಳೆಯುವ ಸಂಪ್ರದಾಯವಿದೆ. ಶ್ರೀ ಧೂಮಾವತಿ ಮತ್ತು ಬಂಟ ದೈವ ಬಂಡಿಯೊಂದಿಗೆ, ದೈವಸ್ಥಾನದ ಹೊರಗೆ ಗದ್ದೆಗೆ ಬರುತ್ತದೆ. ಬಂಡಿ ಎಳೆದ ನಂತರ ತೂಟೆದಾರ ಶುರುವಾಗುತ್ತೆ.. ಬಂಟ ದೈವವು ಉರಿಯುತ್ತಿರುವ ತೂಟೆಯನ್ನು ಭಕ್ತರ ಮೇಲೆ ಎಸೆಯುತ್ತದೆ.. ಭಕ್ತರು ಅತ್ತಿಂದಿತ್ತ ಓಡುವಾಗ ಭಕ್ತರನ್ನು ಅಟ್ಟಾಡಿಸಿಕೊಂಡು ಬಂಟ ದೈವ ಬೆಂಕಿ ಎಸೆಯುತ್ತದೆ.. ಭಕ್ತರು ಬೆಂಕಿ ಏಟಿನಿಂದ ತಪ್ಪಿಸಿಕೊಂಡು ಸಂಭ್ರಮಿಸುತ್ತಾರೆ.. ಊರ ಯುವಕರು ಈ ಅಗ್ನಿಕೇಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ವೇಳೆ ಬೆಂಕಿಯಿಂದ ಗಾಯವಾದರೆ, ದೈವದ ಗಂಧವನ್ನೇ‌ ಔಷದಿಯಾಗಿ ಹಚ್ಚಿದರೆ ಗುಣವಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಇಂತಹ ವಿಶೇಷ ತೂಟೆದಾರ ಆಚರಣೆ ಪ್ರತಿವರ್ಷ ನೇಮೋತ್ಸವ ಸಂದರ್ಭದಲ್ಲಿ ನಡೆಯುತ್ತದೆ. ಸಾವಿರಾರು ಭಕ್ತರು ಪಾಲ್ಗೊಂಡು ತೂಟೆದಾರ ಕಂಡು ಪುಳಕಿತರಾಗುತ್ತಾರೆ. ಹೀಗೆ ತೂಟೆದಾರ ನಡೆಯೋದರಿಂದ ಊರಿಗೆ ಬರುವ ಕಷ್ಟ ಪರಿಹಾರ ಆಗುತ್ತೆ ಅನ್ನುವ ನಂಬಿಕೆ ಇದೆ.