Last Updated:
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಆದಿ ಸ್ವರೂಪ 20 ಬಗೆಯಲ್ಲಿ ಬರೆಯುವ ಕೌಶಲ್ಯದಿಂದ ವಿಶ್ವ ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿರರ್ ಇಮೇಜ್ ಹ್ಯಾಂಡ್ ರೈಟಿಂಗ್, ಹಿಮ್ಮುಖ ಬರವಣಿಗೆ, ಮತ್ತು ಅಷ್ಟದಶಾವಧಾನದಲ್ಲಿ ಸಾಧನೆ ಮಾಡಿದ್ದಾರೆ.
ದಕ್ಷಿಣ ಕನ್ನಡ: ಬರವಣಿಗೆ (Hand Writing) ಬರೀ ಬರೆಯೋದಷ್ಟೇ ಅಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗ! ಎಲ್ಲರಿಗೂ ಅವರದ್ದೇ ಧಾಟಿಯ ಬರವಣಿಗೆ ಇದೆ. ಇಲ್ಲೊಬ್ಬಳು ಹುಡುಗಿ ಇದ್ದಾಳೆ ನೋಡಿ! ಈಕೆ ನಮ್ಮ ನಿಮ್ಮಂತೆ ನೇರವಾಗಿ ಒಂದೇ ಶೈಲಿಯಲ್ಲಿ ಬರೆಯೋಲ್ಲ, ಇವರು ಬರೆಯುವ ಶೈಲಿ ಇಂದು ವಿಶ್ವ ದಾಖಲೆಯನ್ನೇ (world record) ಪಡೆದಿದೆ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ(Mangalore)ಸ್ವರೂಪ ಅಧ್ಯಯನ ಕೇಂದ್ರದ (swaroopa educational institution) ಆದಿ ಸ್ವರೂಪಳ ವಿಶ್ವದರ್ಶನದ ಸ್ಟೋರಿ.
ಒಂದೇ ಶಬ್ದ 20 ಬಗೆಯಲ್ಲಿ ಬರೆಯುವ ಚತುರೆ!
ಇವರು ದಕ್ಷಿಣಕನ್ನಡ ಮೂಲತ ಸುಳ್ಯ ನಿವಾಸಿಗಳಾದ ಮತ್ತು ಸದ್ಯ ಮಂಗಳೂರಿನಲ್ಲೇ ವಾಸಿಸುತ್ತಿರುವ ಗೋಪಾಡ್ಕರ್ ಮತ್ತು ಸುಮಂಗಳಾ ಸುಮಾಡ್ಕರ್ ದಂಪತಿಗಳ ಮಗಳು ಆದಿ ಸ್ವರೂಪ. ಅತ್ಯಂತ ಡಿಫರೆಂಟ್ ಕ್ಯಾರೆಕ್ಟರ್ ನ ಆದಿ ಸ್ವರೂಪಳ ಮುಂದೆ ಯಾವುದು ತಿಳಿದಿಲ್ಲ ಎಂದು ಪ್ರಶ್ನೆ ಕೇಳುವಂತೆಯೇ ಇಲ್ಲ. ಲೋಕ ಜ್ಞಾನದ ಭಂಡಾರೇ ಆಗಿರುವ ಈ ಆದಿ ಸ್ವರೂಪ ತನ್ನ ವಿಶಿಷ್ಟ ಕೌಶಲ್ಯದಿಂದಾಗಿ ಹಲವು ವಿಶ್ವ ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಮುಖ್ಯವಾಗಿ ಈಕೆಯ ಬರೆಯುವ ಶೈಲಿಗೇ ಹೆಚ್ಚಿನ ದಾಖಲೆಗಳು ಬರೆಯಲಾಗಿದೆ. ಗೋಪಾಡ್ಕರ್ ದಂಪತಿಗಳ ಪ್ರಕಾರ ಆದಿ ಸ್ವರೂಪ ತನ್ನ ಒಂದೂವರೆ ವರ್ಷದ ಮಗುವಾಗಿರುವಾಗಲೇ ಬರೆಯಲು ಆರಂಭಿಸಿದ್ದರು. ಎರಡೂವರೆ ವರ್ಷದ ಪ್ರಾಯಕ್ಕೆ ದಿನಕ್ಕೆ 30 ಪುಟ ಬರೆಯುತ್ತಿದ್ದರು. ಇದರಿಂದಾಗಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡು ಬಂದಿದ್ದ ಈಕೆ ಇದೀಗ ಸುಮಾರು 20 ಬಗೆಯಲ್ಲಿ ಬರೆಯಬಲ್ಲಳು.
ದಾಖಲೆಗಳೆಲ್ಲಾ ಚಾಕಲೇಟ್ ಹಾಗೆ ಈಕೆಗೆ! ಮಿರರ್ ವ್ರೈಟಿಂಗ್ ಚಾಂಪಿಯನ್ ಆದಿ
ಮೊದಲು ರುಬಿಕಾಸ್ ಕ್ಯೂಬ್ ಜೋಡಣೆಯಲ್ಲಿ 2019ರಲ್ಲಿ ಆದಿ ಸ್ವರೂಪ ಮತ್ತು ಆಕೆಯ ತಾಯಿ ಸುಮಂಗಲಾ ಜೊತೆಯಾಗಿ ವಿಶ್ವ ದಾಖಲೆಯನ್ನು ಮಾಡಿದ್ದರು. ಆ ಬಳಿಕ ಕೊರೊನಾ ಸಮಯದಲ್ಲಿ ತನ್ನ ಬರವಣಿಗೆಯ ಮೇಲೆ ಕೇಂದ್ರೀಕರಿಸಿ ಎರಡು ಕೈಗಳಲ್ಲಿ ಬರೆದು ವಿಶ್ವ ದಾಖಲೆಯನ್ನು ಸಾಧಿಸಿದರು. ಅಲ್ಲದೆ ಒಂದು ಕೈಯಲ್ಲಿ ಪದಗಳನ್ನು ನೇರವಾಗಿ ಬರೆದರೆ, ಇನ್ನೊಂದು ಕೈಯಲ್ಲಿ ಶಬ್ದವನ್ನು ಅದೇ ಪದವನ್ನು ಉಲ್ಟಾ ಬರೆಯುವ ಮೂಲಕ ಮಿರರ್ ಇಮೇಜ್ ಹ್ಯಾಂಡ್ ರೈಟಿಂಗ್ ನಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಮಿರರ್ ಇಮೇಜ್ ರೈಟಿಂಗ್ ದಾಖಲೆ ಈ ಹಿಂದೆ ಬೇರೊಬ್ಬರ ಹೆಸರಿನಲ್ಲಿದ್ದರೂ,ಈಗ ಆ ದಾಖಲೆ ಇರೋದು ಆದಿಯ ಹೆಸರಿನಲ್ಲಿ. ಅಲ್ಲದೆ ಪದಗಳನ್ನು ಹಿಮ್ಮುಖವಾಗಿ ಬರೆಯೋದರಲ್ಲೂ ತನ್ನದೇ ದಾಖಲೆಯನ್ನು ಆದಿ ಮುರಿದಿದ್ದಾರೆ.
ಸಾಂಪ್ರದಾಯಿಕ ಶಿಕ್ಷಣದಿಂದ ದೂರ, ಆದರೂ ಚಿಕ್ಕಮಕ್ಕಳಿಗೆ ಶಿಕ್ಷಕಿ
ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಿಂದ ಸಂಪೂರ್ಣ ದೂರು ಉಳಿದಿರುವ ಸ್ವರೂಪ ತನ್ನ ತಂದೆ-ತಾಯಿ ನಡೆಸಿಕೊಂಡು ಬರುತ್ತಿರುವ “ಸ್ವರೂಪ ಶಿಕ್ಷಣ ಕೇಂದ್ರ”ದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಹತ್ತನೇ ತರಗತಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದಿರುವ ಇವರು ಹತ್ತನೇ ತರಗತಿಯಲ್ಲಿ ಕಲಿಸಲಾಗುವ ಪಠ್ಯವನ್ನು ಒಂದೇ ಪುಟದಲ್ಲಿ ಚಿತ್ರಕಲೆಯ ರೂಪದಲ್ಲಿ ಚಿತ್ರಿಸುವ ಮೂಲಕ ಹತ್ತನೇ ತರಗತಿಯ ಪರೀಕ್ಷೆ ದೊಡ್ಡ ವಿಚಾರವೇ ಅಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸ್ವರೂಪ ಶಿಕ್ಷಣ ಕೇಂದ್ರದಲ್ಲಿರುವ ಮಕ್ಕಳಿಗೆ ಈಕೆ ಕೂಡಾ ಒಬ್ಬಳು ತರಬೇತುದಾರೆಯಾಗಿದ್ದು, ಲೋಕ ಶಿಕ್ಷಣದ ಕಾನ್ಸೆಪ್ಟ್ ಅನ್ನು ಇಲ್ಲಿ ಕಲಿಸಲಾಗುತ್ತದೆ.
“ಅಷ್ಟದಶಾವಧಾನ” ಎನ್ನುವ ವಿಶಿಷ್ಟ ತಿಳುವಳಿಕೆ ಶಿಕ್ಷಣವನ್ನೂ ನೀಡಲಾಗುತ್ತಿದ್ದು ಇದು ಏಕ ಕಾಲಕ್ಕೆ ಹದಿನೆಂಟು ಕೆಲಸಗಳನ್ನು ಮಾಡುವ ವಿಧಾನ. ಈ ವಿಧಾನ ನಡೆದ 40 ನಿಮಿಷದ ಬಳಿಕ ಏನೆಲ್ಲಾ ಕೆಲಸಗಳನ್ನು ಮಾಡಲಾಗಿದೆಯೋ ಅದನೆಲ್ಲಾ ಜ್ಞಾಪಿಸಿಕೊಂಡು ಇದ್ದ ಹಾಗೇ ಪುನಾರಾವರ್ತನೆ ಮಾಡಲಾಗುತ್ತದೆ. ಈ ವಿಷಯದಲ್ಲೂ ಆದಿ ಸ್ವರೂಪ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಈಕೆಯ ಕಡೆ ತರಬೇತಿ ಪಡೆಯುವ ಮಕ್ಕಳ ಹೆಸರಲ್ಲಿದೆ 63 ದಾಖಲೆಗಳು
ಸ್ವರೂಪ ಶಿಕ್ಷಣ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ಕಲಿಸದೇ, ಅನುಭವ ಶಿಕ್ಷಣ ಮತ್ತು ಕಲಿಕೆಯ ಅಪಾರ ಅವಕಾಶಗಳನ್ನು ವಿದ್ಯಾರ್ಥಿಯ ಮುಂದೆ ಇಡುವ ಕೆಲಸವು ನಡೆಯುತ್ತಿದೆ. ಈ ಕೇಂದ್ರದಲ್ಲಿ ಕಲಿತ 16 ಮಕ್ಕಳು ಸುಮಾರು ಬೇರೆ ಬೇರೆಯಾದ 63 ವಿಷಯಗಳಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಎಲ್ಲಾ ಮಕ್ಕಳನ್ನೂ ಆದಿ ಸ್ವರೂಪಳಂತೆ ಜೀನಿಯಸ್ ಮಾಡುವ ಪ್ರಯತ್ನ ಈ ಶಿಕ್ಷಣ ಕೇಂದ್ರದಲ್ಲಿ ನಡೆಯುತ್ತಿದೆ.
Dakshina Kannada,Karnataka
June 19, 2025 2:45 PM IST