Dakshina Kannada: ಉಡುಪಿ-ಕೇರಳ ವಿದ್ಯುತ್ ಮಾರ್ಗಕ್ಕೆ ಕೃಷಿಕರ ವಿರೋಧ: ಮೂಡಬಿದಿರೆಯಲ್ಲಿ ಆತಂಕದ ಛಾಯೆ | Farmers opposition to Udupi-Kerala power line shadow of anxiety in Moodbidri

Dakshina Kannada: ಉಡುಪಿ-ಕೇರಳ ವಿದ್ಯುತ್ ಮಾರ್ಗಕ್ಕೆ ಕೃಷಿಕರ ವಿರೋಧ: ಮೂಡಬಿದಿರೆಯಲ್ಲಿ ಆತಂಕದ ಛಾಯೆ | Farmers opposition to Udupi-Kerala power line shadow of anxiety in Moodbidri

Last Updated:

ಈ ಕಾಮಗಾರಿಗಾಗಿ ಅರಣ್ಯದಿಂದ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ನಿಶೇಧವಿರುವ ಈ ರಕ್ಷಿತಾರಣ್ಯದೊಳಗೆ ಹಿಟಾಚಿ, ಜೆಸಿಬಿಗಳ ಅಬ್ಬರ ಮುಗಿಲು ಮುಟ್ಟಿವೆ‌. ಅರಣ್ಯದಂಚಿನಲ್ಲಿರುವ ಕೃಷಿಕರಿಗೆ ಒಂದು ಸಣ್ಣ ಕಟ್ಟಿಗೆ ತೆಗೆಯಲೂ ಅವಕಾಶ ನೀಡದ ಅರಣ್ಯ ಇಲಾಖೆ ವಿದ್ಯುತ್ ತಂತಿ ಸಾಗಿಸಲು ಸಾವಿರಾರು ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲು ಅವಕಾಶವನ್ನು ನೀಡಿರೋದು ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.

X

ಇಲ್ಲಿ ವಿಡಿಯೋ ನೋಡಿ

ಮೂಡಬಿದರೆ: ಉಡುಪಿಯಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸಲು (Udupi, Kerala) ಉದ್ದೇಶಿಸಿರುವ ವಿದ್ಯುತ್ ಮಾರ್ಗಕ್ಕೆ (Power line) ಕೃಷಿಕರ ವಿರೋಧ (Farmers) ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮೂಡಬಿದಿರೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಹಾದು ಹೋಗುವ ವಿದ್ಯುತ್ ಲೈನ್ ನಿಂದಾಗಿ ಸಾವಿರಾರು ಎಕರೆ ಕೃಷಿಭೂಮಿ (Farmland) ಮತ್ತು ಕಾಡು ನಾಶವಾಗುವ ಆತಂಕದಲ್ಲಿ ಕೃಷಿಕರಿದ್ದಾರೆ. ಈ ನಡುವೆ ದಟ್ಟ ಅರಣ್ಯಗಳ ಮಧ್ಯೆಯೇ ಈ ವಿದ್ಯುತ್ ಲೈನ್ ಸಾಗಿಸಲು ಸಿದ್ಧತೆ ನಡೆಸಲಾಗಿದ್ದು, ಸಾವಿರಾರು ಮರಗಳಿಗೆ (Tress) ಈಗಾಗಲೇ ಕೊಡಲಿಯೇಟು ಬಿದ್ದಿವೆ. ವಿಟ್ಲ ಸಮೀಪದ ವೀರಕಂಭ ಕಲ್ಮಲೆ ಅರಣ್ಯವನ್ನು ಚಂದನವನ (Chandanavana Forest) ಎಂದು ಕರೆಯಲಾಗುತ್ತಿದ್ದು, ಇದೀಗ ಈ ಚಂದನವನದಲ್ಲಿ ಮರಗಳ ಮಾರಣಹೋಮವಾಗುತ್ತಿದೆ.

ನೂರಾರು ಮನೆಗಳು, ಸಾವಿರಾರು ಎಕರೆ ತೋಟಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ರಕ್ಷಿತಾರಣ್ಯಗಳು ಈ ಲೈನ್ ನಿರ್ಮಾಣದ ಕಾಮಗಾರಿಗೆ ಆಹುತಿಯಾಗಲಿದೆ. ಬಂಟ್ವಾಳ, ಬೆಳ್ತಂಗಡಿ, ಮೂಡಬಿದಿರೆ ಸೇರಿದಂತೆ ಜಿಲ್ಲೆಯ ಕೆಲವು ತಾಲೂಕುಗಳ ಮೂಲಕ ಹಾದು ಹೋಗಲಿರುವ ಈ ತಂತಿಯನ್ನು ಯಾವುದೇ ಕಾರಣಕ್ಕೆ ಕೃಷಿತೋಟಗಳು,ಅರಣ್ಯಗಳು ಇರುವ ಕಡೆಗಳಲ್ಲಿ ಸಾಗಿಸಬಾರದು ಎನ್ನುವ ಒತ್ತಾಯ ಕಳೆದ ನಾಲ್ಕೈದು ವರ್ಷಗಳಿಂದ ಕೇಳಿಬರಲಾರಂಭಿಸಿದೆ. ಆದರೆ ಕೃಷಿಕರ ವಿರೋಧದ ನಡುವೆಯೂ ಈ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ಅದರಲ್ಲೂ ಅವಸಾನದಂಚಿನಲ್ಲಿರುವ ಪ್ರಾಣಿ-ಪಕ್ಷಿಗಳಿರುವ ರಕ್ಷಿತಾರಣ್ಯವಾದ ಬಂಟ್ವಾಳದ ವೀರಕಂಭ ಕಲ್ಮಲೆ ಅರಣ್ಯದಲ್ಲಿ ಇದೀಗ ವಿದ್ಯುತ್ ತಂತಿ ಸಾಗಿಸಲು ಟವರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಈ ಕಾಮಗಾರಿಗಾಗಿ ಅರಣ್ಯದಿಂದ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ನಿಶೇಧವಿರುವ ಈ ರಕ್ಷಿತಾರಣ್ಯದೊಳಗೆ ಹಿಟಾಚಿ, ಜೆಸಿಬಿಗಳ ಅಬ್ಬರ ಮುಗಿಲು ಮುಟ್ಟಿವೆ‌. ಅರಣ್ಯದಂಚಿನಲ್ಲಿರುವ ಕೃಷಿಕರಿಗೆ ಒಂದು ಸಣ್ಣ ಕಟ್ಟಿಗೆ ತೆಗೆಯಲೂ ಅವಕಾಶ ನೀಡದ ಅರಣ್ಯ ಇಲಾಖೆ ವಿದ್ಯುತ್ ತಂತಿ ಸಾಗಿಸಲು ಸಾವಿರಾರು ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲು ಅವಕಾಶವನ್ನು ನೀಡಿರೋದು ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸರದ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವ ಹೋರಾಟಗಾರರು ಜಿಲ್ಲೆಯ ಅರಣ್ಯ ನಾಶವಾಗುತ್ತಿರುವ ಬಗ್ಗೆ ಮೌನವಾಗಿರುವುದು ಕೃಷಿಕರ ಆಕ್ರೋಶಕ್ಕೂ ಕಾರಣವಾಗಿದೆ. ಪರಿಸರದ ಮೇಲೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ, ಯಾವೊಬ್ಬ ಅಧಿಕಾರಿಯೂ, ಜನಪ್ರತಿನಿಧಿಗಳು ಈ ಬಗ್ಗೆ ಮೌನವಾಗಿರುವುದರ ಬಗ್ಗೆಯೂ ಕೃಷಿಕರಲ್ಲಿ ಆಕ್ರೋಶವಿದೆ.

ಇದನ್ನೂ ಓದಿ: Belagavi: ಕೋವಿಡ್​​ನಿಂದ ಬದಲಾದ ಬದುಕು; ನೌಕರಿ ಬಿಟ್ಟು ಹೈನುಗಾರಿಕೆಯಿಂದ ಲಕ್ಷ ಲಕ್ಷ ಗಳಿಸುತ್ತಿರುವ ಸಹೋದರರು!

ಟವರ್ ನಿರ್ಮಾಣದ ನೆಪದಲ್ಲಿ ರಕ್ಷಿತಾರಣ್ಯದಿಂದ ಹಲವು ಬೆಲೆಬಾಳುವ ಮರಗಳ ಸಾಗಾಟವೂ ನಡೆಯುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರಲಾರಂಭಿಸಿದೆ. ವಿದ್ಯುತ್ ತಂತಿಯನ್ನು ಕೇರಳಕ್ಕೆ ಸಾಗಿಸಲು ಇತರೆ ಹಲವು ವ್ಯವಸ್ಥೆಗಳಿದ್ದರೂ, ಕೃಷಿಭೂಮಿಯ ಮೇಲೆಯೇ ಇದನ್ನು ಸಾಗಿಸುವ ಉದ್ಧೇಶದ ಹಿಂದೆ ಷಡ್ಯಂತ್ರವಿರುವ ಆರೋಪವನ್ನೂ ಕೃಷಿಕರು ಮಾಡಲಾರಂಭಿಸಿದ್ದಾರೆ. ವಿದ್ಯುತ್ ಲೈನ್ ಸಾಗಿಸುವ ಪ್ರಕ್ರಿಯೆಗೆ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಈ ವಿರೋಧ ಮುಂದಿನ ದಿನಗಳಲ್ಲಿ ಆಂದೋಲನವಾಗುವ ಮೊದಲು ಸರ್ಕಾರ, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.