Last Updated:
ರಸ್ತೆ ಅಗಲೀಕರಣ ಕಾರಣದಿಂದ ಹಳೆಯ ಗೋಪುರವನ್ನು ಕೆಡವಲಾಗಿದ್ದು, ಇದೀಗ ಹೊಸ ಗೋಪುರದ ನಿರ್ಮಾಣ ಮಾಡಲಾಗಿದೆ. ಈ ಹೊಸ ಗೋಪುರವನ್ನು ಉದ್ಯಮಿಗಳಾದ ಸುಧಾಕರ ಶೆಟ್ಟಿ ಮತ್ತು ಅನಿಲ್ ಕುಮಾರ್ ಶೆಟ್ಟಿ ನಿರ್ಮಿಸಿದ್ದಾರೆ.
ದಕ್ಷಿಣ ಕನ್ನಡ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ(Durga Parameshwari Temple) ಜಾತ್ರಾ ಸಂಭ್ರಮ ನಡೆಯುತ್ತಿದೆ. ಕಟೀಲು ದೇವಳದ(Kateelu Devala) ನೂತನ ಸ್ವಾಗತ ಗೋಪುರವನ್ನು ಎಕ್ಕಾರ್ ಎಂಬಲ್ಲಿ ನಿರ್ಮಾಣ ಮಾಡಲಾಗಿದ್ದು, ಸ್ವಾಗತ ಗೋಪುರವನ್ನು ಪಲಿಮಾರು ಮಠದ ಶ್ರೀ ವಿದ್ಯಾದೀಶ ಸ್ವಾಮೀಜಿ ಉದ್ಘಾಟನೆ ಮಾಡಿದ್ದಾರೆ. ಮಂಗಳೂರಿನಿಂದ(Mangaluru) ಕಟೀಲುಗೆ ಸಾಗುವ ಎಕ್ಕಾರು ಎಂಬಲ್ಲಿ ಈ ಹಿಂದೆಯೂ ಸ್ವಾಗತ ಗೋಪುರವಿತ್ತು. ಆದರೆ ರಸ್ತೆ ಅಗಲೀಕರಣ ಕಾರಣದಿಂದ ಹಳೆಯ ಗೋಪುರವನ್ನು ಕೆಡವಲಾಗಿದ್ದು, ಇದೀಗ ಹೊಸ ಗೋಪುರದ ನಿರ್ಮಾಣ ಮಾಡಲಾಗಿದೆ. ಈ ಹೊಸ ಗೋಪುರವನ್ನು ಉದ್ಯಮಿಗಳಾದ ಸುಧಾಕರ ಶೆಟ್ಟಿ ಮತ್ತು ಅನಿಲ್ ಕುಮಾರ್ ಶೆಟ್ಟಿ ನಿರ್ಮಿಸಿದ್ದಾರೆ.
ಇದನ್ನೂ ಓದಿ: Dakshina Kannada: ಇತಿಹಾಸ ಪ್ರಸಿದ್ದ ಪುತ್ತೂರಿನ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ದೇವರ ಬ್ರಹ್ಮರಥೋತ್ಸವ ಸಂಪನ್ನ!
ಶ್ವೇತ ವರ್ಣದ ಸ್ವಾಗತ ಗೋಪುರವನ್ನು ಅತ್ಯಾಕರ್ಷಕವಾಗಿ ನಿರ್ಮಾಣ ಮಾಡಲಾಗಿದ್ದು ನಡುಗೋಪುರದಲ್ಲಿ ಕಟೀಲು ಶ್ರೀ ದೇವಿಯನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಕಟೀಲು ದುರ್ಗಾಪರಮೇಶ್ವರಯ ಬಲಭಾಗದಲ್ಲಿ ಶಾರದೆ, ಎಡಭಾಗದಲ್ಲಿ ಲಕ್ಷ್ಮೀಯ ಸುಂದರವಾದ ಮೂರ್ತಿ ನಿರ್ಮಾಣ ಮಾಡಲಾಗಿದೆ.
ಎಕ್ಕಾರಿನಿಂದ ಕಟೀಲು ದೇವಸ್ಥಾನಕ್ಕೆ ಒಂದೂವರೆ ಕಿ.ಮೀ ದೂರವಿದ್ದು, ಕಟೀಲು ದೇವಸ್ಥಾನಕ್ಕೆ ಬರುವ ಭಕ್ತರ ಆಕರ್ಷಣೆಯಾಗಿದೆ. ಕಟೀಲು ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು, ದೇವಿಗೆ ವಿವಿಧ ಪೂಜಾ ವಿಧಿ-ವಿಧಾನಗಳು ನಡೆಯುತ್ತಿವೆ.
Dakshina Kannada,Karnataka
April 19, 2025 4:04 PM IST