Dakshina Kannada: ಕಪ್ಪು-ಬಿಳುಪಿನ ಕಾಲದಿಂದ LEDಯ ಯುಗಕ್ಕೆ; ತಂತ್ರಜ್ಞಾನದ ಓಟದಲ್ಲಿ ಹಿಂದೆ ಬಿದ್ದ ಡೂಮ್ ಟಿವಿಗಳ ಕಥೆ | The story of the doom TVs From the black-and-white era to smart tv era

Dakshina Kannada: ಕಪ್ಪು-ಬಿಳುಪಿನ ಕಾಲದಿಂದ LEDಯ ಯುಗಕ್ಕೆ; ತಂತ್ರಜ್ಞಾನದ ಓಟದಲ್ಲಿ ಹಿಂದೆ ಬಿದ್ದ ಡೂಮ್ ಟಿವಿಗಳ ಕಥೆ | The story of the doom TVs From the black-and-white era to smart tv era

Last Updated:

ಡೂಮ್ ಟಿವಿಗಳು ಕಪ್ಪು ಬಿಳುಪಿನ ಮೂಲಕ ಜನರನ್ನು ರಂಜಿಸುತ್ತಿದ್ದವು. ಈಗ ಎಲ್‍ಇಡಿ, ಸ್ಮಾರ್ಟ್ ಟಿವಿಗಳು ಬದಲಾಗಿದೆ. ಡೂಮ್ ಟಿವಿಗಳ ರಿಪೇರಿ ಕಡಿಮೆ ಖರ್ಚು, ಆದರೆ ಸ್ಮಾರ್ಟ್ ಟಿವಿಗಳತ್ತ ಜನರ ಆಸಕ್ತಿ ಹೆಚ್ಚಾಗಿದೆ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ನೀವು ನೋಡುತ್ತಿರುವ ಈ ಟಿವಿಗಳು (Television) ನಿಮಗೆ ನೆನಪಿದ್ಯಾ? ಈ ಟಿವಿಗಳನ್ನು ಇಂದಿನ ಕೆಲ ಮಕ್ಕಳು (Children) ನೋಡೇ ಇಲ್ಲ ಅಂದ್ರೆ ತಪ್ಪಾಗಲಾರದು. ಹೌದು ಕಾಲ ಬದಲಾದಂತೆ ಮನುಷ್ಯನ (Human) ಅಗತ್ಯತೆಗಳು ಬದಲಾಗುತ್ತೆ. ಅದೇ ರೀತಿ ಜನರಿಗೆ ಮನೋರಂಜನೆ (Entertainment) ನೀಡುತ್ತಿದ್ದ ಟಿವಿಗಳಲ್ಲೂ ಈ ಬದಲಾವಣೆಯಾಗಿವೆ. ಒಂದು ಕಾಲದಲ್ಲಿ ಡೂಮ್ ಟಿವಿಗಳು ಕಪ್ಪು ಬಿಳುಪಿನ (Black and White) ಮೂಲಕ ಜನರನ್ನು ರಂಜಿಸುತ್ತಿದ್ದವು. ಈಗ ಅವು ಎಲ್‍ಇಡಿ, ಸ್ಮಾರ್ಟ್ ಟಿವಿಗಳಾಗಿ (LED and Smart TV) ಬದಲಾಗಿವೆ.

ಡೂಮ್ ಟಿವಿಗಳ ಸವಿ ನೆನಪು

ಟಿವಿಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಮೊದಲ ಬಾರಿಗೆ ಬಂದ ಟಿವಿಯ ಆಕಾರಕ್ಕೂ, ಈಗ ಮಾರುಕಟ್ಟೆಯಲ್ಲಿ ಸಿಗುವ ಟಿವಿಯ ಆಕಾರಕ್ಕೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು. ಕೇವಲ ಕಪ್ಪು ಮತ್ತು ಬಿಳುಪು ಬಣ್ಣಗಳನ್ನಷ್ಟೇ ಹೊರಸೂಸಬಲ್ಲ ಟಿವಿಗಳು ಇಂದು ಮಲ್ಟಿ ಲೇಯರ್ ಕಲರ್ ಗಳನ್ನು ಹೊರ ಸೂಸುವ ಟಿವಿಗಳಿವೆ. ಮೊದ ಮೊದಲು ಟಿವಿ ಪಾದಾರ್ಪಣೆಯಾದಾಗ ಕೇವಲ ಶ್ರೀಮಂತರ ಕೈಗೆ ಎಟಕುವಷ್ಟಕ್ಕೆ ಮಾತ್ರ ಇದ್ದ ಕಾಲ ಬದಲಾಗಿದೆ. ಇಂದು ಮನೆ ಮನೆಯಲ್ಲೂ ಟಿವಿಯ ಶಬ್ಧ ಕೇಳಿಸುತ್ತೆ.

ಮನೋರಂಜನೆಯ ತಂತ್ರಜ್ಞಾನದ ಪಯಣ

ಕೆಲವು ವರ್ಷದ ಹಿಂದೆ ಅತ್ಯಂತ ಜನಪ್ರಿಯವಾಗಿದ್ದ ಡೂಮ್ ಟಿವಿಗಳು ಇನ್ನು ಕೇವಲ ನೆನಪು ಮಾತ್ರ ಅಂದ್ರೆ ತಪ್ಪಾಗಲಾರದು. ಇದೀಗ ಅಲ್ಪ, ಸ್ವಲ್ಪ ಇರುವ ಈ ಡೂಮ್ ಟಿವಿಗಳು, ಟಿವಿ ಮೆಕ್ಯಾನಿಕ್ ಶಾಪ್ ಗಳ ಮುಂದೆ ರಾಶಿ ಬಿದ್ದಿವೆ. ಈ ಟಿವಿಗಳ ಸ್ಥಾನವನ್ನು ಇಂದು ಎಲ್.ಇ.ಡಿ , ಸ್ಮಾರ್ಟ್ ಟಿವಿಗಳು ತುಂಬಿವೆ. ಗುಣಮಟ್ಟದ ಪಿಕ್ಟರ್ ಕ್ವಾಲಿಟಿ ಮತ್ತು ಉತ್ತಮ ಗುಣಮಟ್ಟದ ಧ್ವನಿಗೆ ಹೆಸರುವಾಸಿಯಾಗಿದ್ದ ಡೂಮ್ ಟಿವಿಗಳು ಇಂದಿನ ಮನೆಗಳ ವ್ಯವಸ್ಥೆಗೆ ಸರಿಹೊಂದೋದು ಕಷ್ಟ. ಮತ್ತು ಸ್ಮಾರ್ಟ್ ಟಿವಿಗಳ ಮುಂದೆ ಡೂಮ್ ಟಿವಿಗಳು ನಿಲ್ಲಲೂ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ತಂತ್ರಜ್ಞಾನ ಅಳವಡಿಸಿಕೊಂಡು ನಿಂತಿವೆ. ಅಲ್ಲದೆ ಸ್ಮಾರ್ಟ್ ಟಿವಿಗಳಿಗೆ ಬೇಕಾದ ಕನಿಷ್ಟ ಸ್ಥಳಾವಕಾಶದಿಂದಾಗಿಯೂ ಡೂಮ್ ಟಿವಿಗಳ ಮೇಲಿನ ಆಸಕ್ತಿ ಇಂದು ಕ್ಷೀಣಿಸುತ್ತಿದೆ.

ಇತ್ತೀಚಿಗೆ ಜನ ಎಲ್.ಇ.ಡಿ ಟಿವಿಗಳತ್ತ ಮುಖ ಮಾಡಿದ್ದು, ಮತ್ತೆ ಡೂಮ್ ಟಿವಿಯತ್ತ ಮರಳಿದ್ದು ಕಡಿಮೆಯೇ ಎನ್ನುವುದು ಟಿವಿ ಮೆಕ್ಯಾನಿಕ್ ಗಳ ಅನುಭವದ ಮಾತು. ಡೂಮ್ ಟಿವಿಗಳ ರಿಪೇರಿ ಅತ್ಯಂತ ಕಡಿಮೆ ಖರ್ಚು. ಆದರೆ ಇತ್ತೀಚಿನ ಸ್ಮಾರ್ಟ್ ಟಿವಿಗಳಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಅದನ್ನು ಮೊದಲಿನ ರೂಪಕ್ಕೆ ತರಲು ಸಾಧ್ಯವಿಲ್ಲ. ಆದರೆ ಡೂಮ್ ಟವಿಗಳನ್ನು ಆ ರೀತಿ ಸಿದ್ಧಪಡಿಸಬಹುದಂತೆ. ಏನೇ ಆದ್ರೂ ಸ್ಮಾರ್ಟ್ ಟಿವಿ ನೋಡಿದ ಜನ ಡೂಮ್ ಟಿವಿಗಳತ್ತ ಮುಖ ಮಾಡುವುದು ಕಷ್ಟ.