Last Updated:
ಈ ಹಾವುಗಳಲ್ಲಿ ಅತ್ಯಂತ ಅಪರೂಪದ ಹಾವುಗಳು ಸೇರಿದಂತೆ ಅಪಾಯಕಾರಿ ಕಾಳಿಂಗ ಸರ್ಪ, ನಾಗರಹಾವು, ಹೆಬ್ಬಾವು, ಕೊಳಕು ಮಂಡಲ, ಮಂಡಲ ಹೀಗೆ ಹಲವು ಪ್ರಕಾರದ ಹಾವುಗಳನ್ನು ಹಿಡಿದು ಮಾಧವ, ಹಾವಿನ ಭಯದಿಂದ ಬೇಸತ್ತವರನ್ನು ನೆಮ್ಮದಿಯಾಗಿ ಇರುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.
ದಕ್ಷಿಣಕನ್ನಡ: ಸಂಗಾತಿಯನ್ನು ಹುಡುಕಿ ಬರುವ ಹಾವುಗಳು(Snakes) ಕೆಲವೊಮ್ಮೆ ಮನೆಗೋ, ಕಚೇರಿಯೊಳಗೋ ನುಗ್ಗುವ ವಿದ್ಯಾಮಾನಗಳು ಹೆಚ್ಚಾಗಿ ನಡೆಯುತ್ತೆ. ಈ ಸಂದರ್ಭದಲ್ಲಿ ಮನೆಯಲ್ಲಿರುವ ಸದಸ್ಯರು ಹಾವುಗಳನ್ನು ಮನೆಯೊಳಗಿಂದ ಹೊರಗಡೆ ಹಾಕೋವರೆಗೆ ಭಯದ ವಾತಾವರಣದಲ್ಲೇ ಇರಬೇಕಾಗುತ್ತೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ನೆನಪಾಗೋದು ಉರಗತಜ್ಞರದು(Snake Expert). ಇಂತಹ ಉರಗತಜ್ಞರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದ ಮಾಧವ ಕೂಡಾ ಒಬ್ಬರು. ಹಾವುಗಳ ಕೇರಿಯಂತಿರುವ ಸುಬ್ರಹ್ಮಣ್ಯ ಪರಿಸರ, ಕಡಬ, ಸುಳ್ಯ, ಪುತ್ತೂರು ಹೀಗೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಚಿರಪರಿಚಿತವಾಗಿರುವ ಮಾಧವ ಅವರು ಅರಣ್ಯ ಇಲಾಖೆಯಿಂದ ಈ ಬಗ್ಗೆ ತರಬೇತಿಯನ್ನೂ ಪಡೆದವರು. ಈವರೆಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ಹಾವುಗಳನ್ನು ಹಿಡಿದು ಸಂರಕ್ಷಿಸಿದ ಹೆಗ್ಗಳಿಕೆ ಇವರ ಪಾಲಿಗಿದೆ.
ಹೆಚ್ಚಾಗಿ ಸುಬ್ರಹ್ಮಣ್ಯ ಪರಿಸರದಿಂದಲೇ ಇವರಿಗೆ ಹೆಚ್ಚಿನ ಕರೆಗಳು ಬರುತ್ತವೆ. ಕೆಲವು ಸಂದರ್ಭಗಳಲ್ಲಿ ದಿನಕ್ಕೆ ಮೂರ್ನಾಲ್ಕು ವಿಷಪೂರಿತ ಹಾವುಗಳನ್ನು ಇವರು ರಕ್ಷಿಸಿ ಸಂರಕ್ಷಿಸಿದ್ದಾರೆ. ಈ ಹಾವುಗಳಲ್ಲಿ ಅತ್ಯಂತ ಅಪರೂಪದ ಹಾವುಗಳು ಸೇರಿದಂತೆ ಅಪಾಯಕಾರಿ ಕಾಳಿಂಗ ಸರ್ಪ, ನಾಗರಹಾವು, ಹೆಬ್ಬಾವು, ಕೊಳಕು ಮಂಡಲ, ಮಂಡಲ ಹೀಗೆ ಹಲವು ಪ್ರಕಾರದ ಹಾವುಗಳನ್ನು ಹಿಡಿದು ಮಾಧವ, ಹಾವಿನ ಭಯದಿಂದ ಬೇಸತ್ತವರನ್ನು ನೆಮ್ಮದಿಯಾಗಿ ಇರುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.
ಇದನ್ನೂ ಓದಿ: Mysuru: ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ಗೌರವ!
ಅದರಲ್ಲೂ ಸುಬ್ರಹ್ಮಣ್ಯ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯ ಹಾವುಗಳನ್ನು ಹಿಡಿದಿರುವ ಮಾಧವ, ಅಲ್ಲಿ ಹಿಡಿದ ಹಾವುಗಳನ್ನು ಕ್ಷೇತ್ರದ ಪಕ್ಕದಲ್ಲೇ ಇರುವ ನಾಗೋದ್ಯಾನದ ಒಳಗಡೆ ಬಿಡುತ್ತಾರೆ. ಕುಮಾರಧಾರಾ ಸ್ನಾನಘಟ್ಟದ ಈ ಕಡೆಗೆ ಸಿಗುವ ಎಲ್ಲಾ ಹಾವುಗಳನ್ನು ನಾಗೋದ್ಯಾನದಲ್ಲೇ ಬಿಡುತ್ತಾರೆ. ಜೊತೆಗೆ ಇತರ ಪ್ರದೇಶಗಳಲ್ಲಿ ಹಿಡಿದ ಹಾವುಗಳನ್ನು ಕಾಡಿಗೆ ಬಿಟ್ಟು ಬಿಡುತ್ತಾರೆ. ಈವರೆಗೆ ಸುಮಾರು ಲಕ್ಷಕ್ಕೂ ಮಿಕ್ಕಿದ ಹಾವುಗಳನ್ನು ಹಿಡಿದಿರುವ ಇವರ ಸೇವೆಯನ್ನು ಗುರುತಿಸಿ ಹಲವು ಸಂಘಸಂಸ್ಥೆಗಳು ಇವರನ್ನು ಗೌರವಿಸಿ, ಸನ್ಮಾನಿಸಿದೆ.
ಹಾವು ಹಿಡಿಯಲು ಅರಣ್ಯ ಇಲಾಖೆಯಿಂದ ನೀಡಲಾಗುವ ವಿಶೇಷ ತರಬೇತಿಯನ್ನೂ ಪಡೆದಿರುವ ಮಾಧವ್, ಅರಣ್ಯ ಇಲಾಖೆಗೂ ಬಹಳ ಬೇಕಾದ ವ್ಯಕ್ತಿ ಆಗಿದ್ದಾರೆ. ಹಾವು ಹಿಡಿಯುವ ಸಂದರ್ಭದಲ್ಲಿ ಹಲವು ಬಾರಿ ವಿಷಕಾರಿ ಹಾವುಗಳು ದಾಳಿ ಮಾಡುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಒಂದು ಬಾರಿ ಮಾಧವ್ ಅವರ ಕೈಗೆ ನಾಗರಹಾವು ಕಚ್ಚಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದಾರೆ.
Dakshina Kannada,Karnataka
March 18, 2025 10:27 AM IST