Last Updated:
ಸರ್ಪ ಸಂಸ್ಕಾರ ಸೇವೆ ನಡೆಸುವ ಭಕ್ತಾಧಿಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗಿದ್ದು, ಪೂಜೆ ನಡೆಯುವ ಹತ್ತು ದಿನಗಳ ಮೊದಲು ಶಾಖಾಹಾರಿಗಳು ಸಸ್ಯಾಹಾರವನ್ನು ಸೇವಿಸಿ ವ್ರತ ಆಚರಿಸಬೇಕು. ಸರ್ಪಸಂಸ್ಕಾರ ಪೂಜೆಯಲ್ಲಿ ನಾಗಪ್ರತಿಷ್ಟೆಯನ್ನೂ ನಡೆಸಲಾಗುತ್ತಿದ್ದು, ಎರಡು ದಿನಗಳ ಕಾಲ ಈ ಸೇವೆ ನಡೆಯಲಿದೆ.
ದಕ್ಷಿಣ ಕನ್ನಡ: ಪ್ರಸಿದ್ಧ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ(Kukke Subramanya) ದೇಶ-ವಿದೇಶಗಳಿಂದ ಭಕ್ತರು(Devotees) ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ. ವಾಸುಕೀ ನಾಗರಾಜನಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಈ ಕ್ಷೇತ್ರದಲ್ಲಿ ಐಕ್ಯನಾಗಿದ್ದು, ಇಲ್ಲಿನ ಆರಾಧನಾ ಮತ್ತು ಆಚರಣೆ ಕ್ರಮದಲ್ಲಿ ವಿಶೇಷತೆಯೂ ಇದೆ. ಕ್ಷೇತ್ರದಲ್ಲಿ ನಾಗದೋಷಕ್ಕೆ(Nagadosha) ಸಂಬಂಧಿಸಿದಂತೆ ಹಲವು ಸೇವೆಗಳಿದ್ದು, ಆಶ್ಲೇಷ ಬಲಿಪೂಜೆ, ನಾಗಪ್ರತಿಷ್ಟೆ, ಸರ್ಪಸಂಸ್ಕಾರ ಈ ಸೇವೆಗಳಲ್ಲಿ ಪ್ರಮುಖವಾದುದು. ನಾಗನ ದೋಷದಿಂದ ಬರುವಂತಹ ಸಂತಾನದ ಸಮಸ್ಯೆ, ಚರ್ಮವ್ಯಾಧಿ, ದೃಷ್ಟಿದೋಷ ಇತ್ಯಾದಿ ಸಮಸ್ಯೆಗಳಲ್ಲಿ(Problems) ಸಿಲುಕಿದ ಸಂದರ್ಭದಲ್ಲಿ ನಿರಾಶರಾಗಿ, ಹತಾಶರಾದ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ತಮ್ಮ ಸಂಕಷ್ಟಗಳ ಪರಿಹಾರಕ್ಕೆ(Solutions) ದೇವರ ಮೊರೆ ಹೋಗುತ್ತಾರೆ.
ನಾಗದೋಷಕ್ಕೆ ಪ್ರಮುಖವಾಗಿ ನಡೆಸುವ ಸೇವೆಗಳಲ್ಲಿ ಸರ್ಪಸಂಸ್ಕಾರ ಸೇವೆ ಒಂದಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಸುವ ಈ ಸೇವೆಗೆ ಭಾರೀ ಮಹತ್ವವೂ ಇದೆ. ಇದೇ ಕಾರಣಕ್ಕೆ ಈ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ಸಲ್ಲಿಸಲು ವರ್ಷಾನುಗಟ್ಟಲೇ ಕಾಯಬೇಕಾದ ಅನಿವಾರ್ಯತೆಯೂ ಇದೆ. ಆನ್ ಲೈನ್ ಮೂಲಕ ಈ ಸೇವೆಯನ್ನು ಬುಕ್ ಮಾಡುವ ವ್ಯವಸ್ಥೆಯೂ ಇದ್ದು, ಈ ಸೇವೆಗೆ ಕ್ಷೇತ್ರದಲ್ಲಿ 4500 ರೂಪಾಯಿಗಳನ್ನು ಶುಲ್ಕರೂಪದಲ್ಲಿ ಪಡೆದುಕೊಳ್ಳಲಾಗುತ್ತದೆ. ಸರ್ಪ ಸಂಸ್ಕಾರ ಸೇವೆ ನಡೆಸುವ ಭಕ್ತಾಧಿಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗಿದ್ದು, ಪೂಜೆ ನಡೆಯುವ ಹತ್ತು ದಿನಗಳ ಮೊದಲು ಶಾಖಾಹಾರಿಗಳು ಸಸ್ಯಾಹಾರವನ್ನು ಸೇವಿಸಿ ವ್ರತ ಆಚರಿಸಬೇಕು. ಸರ್ಪಸಂಸ್ಕಾರ ಪೂಜೆಯಲ್ಲಿ ನಾಗಪ್ರತಿಷ್ಟೆಯನ್ನೂ ನಡೆಸಲಾಗುತ್ತಿದ್ದು, ಎರಡು ದಿನಗಳ ಕಾಲ ಈ ಸೇವೆ ನಡೆಯಲಿದೆ.
ಇದನ್ನೂ ಓದಿ: Kannada Sahitya Sammelana: ಮಂಡ್ಯದಲ್ಲಿ ಕನ್ನಡದ ಕಂಪಿನೊಂದಿಗೆ ಭೂರಿಭೋಜನ- ಊಟದ ಮೆನು ಇಲ್ಲಿದೆ
ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಭಕ್ತರೂ ಇಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಲು ಬರುತ್ತಿರುವುದು ಈ ಕ್ಷೇತ್ರದ ಪ್ರಭಾವಕ್ಕೆ ಒಂದು ಉದಾಹರಣೆಯೂ ಆಗಿದೆ. ಕ್ರಿಕೆಟ್‌ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದ ಬಳಿಕ ಕ್ರಿಕೆಟ್‌ನಲ್ಲಿ ಮತ್ತೆ ಫಾರ್ಮ್ ಕಂಡುಕೊಂಡಿದ್ದರು.
ಅದೇ ರೀತಿ ರಾಹುಲ್ ದ್ರಾವಿಡ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟಿಗರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ತಮ್ಮ ಸೇವೆ ಸಲ್ಲಿಸಿ ಯಶಸ್ವಿಯಾಗಿದ್ದಾರೆ. ಅದೇ ಪ್ರಕಾರ ಚಿತ್ರರಂಗದ ದಿಗ್ಗಜರು, ಜನಪ್ರತಿನಿಧಿಗಳು, ಉದ್ಯಮಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ತಮ್ಮ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ ಹಲವು ನಿದರ್ಶನಗಳು ಇವೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
December 20, 2024 4:47 PM IST