Last Updated:
ಸೀತಾರಾಮ ಗೌಡ ಎಡಮಂಗಲದಲ್ಲಿ ನಡೆಯುವ ದೈವದ ಕಾರ್ಯಕ್ರಮಕ್ಕೆ ಹರಕೆ ನೀಡಲು ಕೋಳಿಯೊಂದನ್ನು ಕೋಡಿಂಬಾಳದಿಂದ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿ ಅಂದು ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.
ದಕ್ಷಿಣಕನ್ನಡ: ನವೆಂಬರ್ 2 ರಂದು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲೊಂದು ಅವಘಡ ಸಂಭವಿಸಿತ್ತು. ತನ್ನ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಕಡಬ ತಾಲೂಕಿನ ಎಡಮಂಗಲ ನಿವಾಸಿ ಸೀತಾರಾಮ ಗೌಡ ಎಂಬವರ ಮೇಲೆ ರಸ್ತೆ ಪಕ್ಕದಲ್ಲೇ ಇದ್ದ ದೂಪದ ಮರವೊಂದು ಬಿದ್ದಿತ್ತು. ಸ್ಕೂಟರ್ ಚಲಿಸುತ್ತಿದ್ದಾಗಲೇ ಬಿದ್ದ ಮರದಿಂದಾಗಿ ಸ್ಕೂಟಿ ಸಂಪೂರ್ಣ ನಜ್ಜುಗೊಂಡು ಸವಾರ ಸೀತಾರಾಮ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಸೀತಾರಾಮ ಗೌಡ ಎಡಮಂಗಲದಲ್ಲಿ ನಡೆಯುವ ದೈವದ ಕಾರ್ಯಕ್ರಮಕ್ಕೆ ಹರಕೆ ನೀಡಲು ಕೋಳಿಯೊಂದನ್ನು ಕೋಡಿಂಬಾಳದಿಂದ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿ ಅಂದು ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ಘಟನೆ ನಡೆದು ಮೂರ್ನಾಲು ದಿನಗಳು ಕಳೆದರೂ, ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನೆ ನಡೆದ ಸ್ಥಳವನ್ನು ಬಿದ್ದು ಕದಲಿರಲಿಲ್ಲ.
ಇದನ್ನೂ ಓದಿ: Apprentice Training: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಂಪರ್ ಆಫರ್- ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಅಪಘಾತ ನಡೆದ ವೇಳೆ ಸಾವನ್ನಪ್ಪಿದ ಸೀತಾರಾಮ ಗೌಡರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿಯ ಕಾಲುಗಳನ್ನು ಕಟ್ಟಲಾಗಿತ್ತು. ಈ ಕಾರಣಕ್ಕಾಗಿ ಕೋಳಿಯು ಮೃತದೇಹದ ಬಳಿಯೇ ಬಿದ್ದಿತ್ತು. ಇದನ್ನು ಗುರುತಿಸಿದ್ದ ಸ್ಥಳೀಯರು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟಿದ್ದರು. ಆ ಸಮಯದಲ್ಲಿ ಕೋಳಿಯು ಹತ್ತಿರದ ಕಾಡಿನೊಳಗೆ ಹೋಗಿತ್ತು. ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರು ಚದುರಿದ ಬಳಿಕ ಮರಬಿದ್ದು ನಜ್ಜುಗುಜ್ಜಾಗಿದ್ದ ಸೀತಾರಾಮ ಅವರ ಸ್ಕೂಟಿಯ ಮೇಲೆ ಕೋಳಿ ಬಂದು ಕುಳಿತಿತ್ತು. ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿದ್ದ ಕೋಳಿ, ಘಟನೆ ನಡೆದು ಮೂರು ದಿನ ಕಳೆದರೂ ಘಟನಾ ಸ್ಥಳ ಬಿಟ್ಟು ಹೋಗದಿರುವುದು ಜನರ ಸೋಜಿಗಕ್ಕೆ ಕಾರಣವಾಗಿತ್ತು. ಈ ನಡುವೆ ಸೀತಾರಾಮ ಗೌಡರ ಸಂಬಂಧಿಕರು ಬಂದು ಕೊನೆಗೂ ಕೋಳಿಯನ್ನು ಅವರ ಮನೆಗೆ ಕೊಂಡೊಯ್ದಿದ್ದರು.
ಬಲಿ ಕೊಡಲೆಂದು ತಂದಿದ್ದ ಕೋಳಿಯ ಬದಲು ಸ್ಕೂಟರ್ ಸವಾರ ಸೀತಾರಾಮ ಗೌಡರೇ ಅಂದು ದುರ್ದೈವದಿಂದ ಬಲಿಯಾಗಿದ್ದರು. ಆದರೆ ಕೋಳಿ ಮಾತ್ರ ಸ್ಕೂಟಿಯನ್ನು ಬಿಟ್ಟು ತೆರಳದಿರುವ ಹಿಂದೆ ಇದೀಗ ಹಲವು ಕಥೆಗಳೂ ಹುಟ್ಟಿಕೊಂಡಿವೆ. ಕೋಳಿಯ ಈ ವರ್ತನೆಯ ಹಿಂದೆ ಹರಕೆ ಪಡೆಯಬೇಕಾದ ದೈವದ ಪ್ರಭಾವವೂ ಇದೆ ಎನ್ನುತ್ತಾರೆ ಸ್ಥಳೀಯರು.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
November 08, 2024 1:19 PM IST