Dakshina Kannada: ಗಮನಸೆಳೆದ ಪುತ್ತೂರಿನ ಶಾರದೋತ್ಸವ, ಮೇಳೈಸಿದ ಕೇರಳ-ಕರ್ನಾಟಕದ ಕಲಾ ವೈಭವ! | Dakshina Kannada: Highlighted Puttur Sharadotsav

Dakshina Kannada: ಗಮನಸೆಳೆದ ಪುತ್ತೂರಿನ ಶಾರದೋತ್ಸವ, ಮೇಳೈಸಿದ ಕೇರಳ-ಕರ್ನಾಟಕದ ಕಲಾ ವೈಭವ! | Dakshina Kannada: Highlighted Puttur Sharadotsav

Last Updated:

ಶಾರದಾ ಶೋಭಾಯಾತ್ರೆಯಲ್ಲಿ ಪಟಾಕಿ, ಡಿ.ಜೆ. ಮತ್ತು ಟ್ಯಾಬ್ಲೂ ನಿರ್ಬಂಧಿಸಲಾಗಿತ್ತು. ಜಿಲ್ಲೆಯ 20 ಕುಣಿತ ಭಜನಾ ತಂಡಗಳು, ಕರ್ನಾಟಕ ಮತ್ತು ಕೇರಳದ 22 ಜನಪದ ಕಲಾತಂಡಗಳು ಭಾಗವಹಿಸಿದ್ದವು.

X

ವಿಡಿಯೋ ಇಲ್ಲಿ ನೋಡಿ

ವೈಭವದ ಪುತ್ತೂರು ಶಾರದೋತ್ಸವ ಶೋಭಾಯಾತ್ರೆ ಶನಿವಾರ ರಾತ್ರಿ ನಡೆಯಿತು. ಕರ್ನಾಟಕ ಮತ್ತು ಕೇರಳ ರಾಜ್ಯದ ಅಪೂರ್ವ ಜನಪದ ಕಲಾ ತಂಡಗಳು ಅದ್ದೂರಿ ಪ್ರದರ್ಶನ ನೀಡಿದವು. ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ 4 ದಿನಗಳ ಕಾಲ ಪೂಜೆ ನಡೆಯಿತು. ಆ ಮೂಲಕ 90 ನೇ ವರ್ಷದ ಶಾರದೋತ್ಸವ ಶನಿವಾರ ಸಂಜೆ ಸಂಪನ್ನಗೊಂಡಿತು. ಬೊಳುವಾರು ವೃತ್ತದಿಂದ ದರ್ಬೆ ವೃತ್ತದವರೆಗೆ ಸಾವಿರಾರು ಭಕ್ತರ ಸಮಾಗಮದೊಂದಿಗೆ ಮೆರವಣಿಗೆ ನಡೆಯಿತು.

ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕರಾದ ವಿ.ಎಸ್. ಭಟ್ ಶ್ರೀ ಶಾರದಾ ಮಾತೆಯ ವಿಗ್ರಹ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಭಗವಾಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್, ಮೆರವಣಿಗೆ ಸಂಚಾಲಕ ನವೀನ್ ಕುಲಾಲ್, ಪ್ರ. ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಪ್ರಮುಖರಾದ ಡಾ. ಸುರೇಶ್ ಪುತ್ತೂರಾಯ, ಚಿದಾನಂದ ಬೈಲಾಡಿ, ಮುರಳಿಕೃಷ್ಣ ಹಸಂತಡ್ಕ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Train Service: ಭಕ್ತಾದಿಗಳಿಗೆ ಗುಡ್‌ನ್ಯೂಸ್- ಮುರುಡೇಶ್ವರದಿಂದ ತಿರುಪತಿಗೆ ರೈಲು ಸೇವೆ ಪ್ರಾರಂಭ

ಶಾರದಾ ಶೋಭಾಯಾತ್ರೆಯಲ್ಲಿ ಪಟಾಕಿ, ಡಿ.ಜೆ. ಮತ್ತು ಟ್ಯಾಬ್ಲೂ ನಿರ್ಬಂಧಿಸಲಾಗಿತ್ತು. ಜಿಲ್ಲೆಯ 20 ಕುಣಿತ ಭಜನಾ ತಂಡಗಳು, ಕರ್ನಾಟಕ ಮತ್ತು ಕೇರಳದ 22 ಜನಪದ ಕಲಾತಂಡಗಳು ಭಾಗವಹಿಸಿದ್ದವು.

ಮುಂಚೂಣಿಯಲ್ಲಿ ಭಜನಾ ತಂಡಗಳು ಸಾಗಿದರೆ, ಪ್ರತೀ ಕಲಾ ತಂಡಗಳು ಒಂದರ ಹಿಂದೆ ಶಿಸ್ತುಬದ್ಧವಾಗಿ ಸಾಗಿದವು. ಚೆಂಡೆ, ಬ್ಯಾಂಡ್, ಕೊಂಬುಗಳು ಸಾಥ್ ನೀಡಿದವು. ಬೆಂಕಿ ಉಗುಳುವ ಮೆಗಾ ಘಟೋದ್ಗಜ ಮತ್ತು ವಿರಾಟ್ ಹನುಮಂತ ವೇಷಗಳು ಎಲ್ಲರ ಗಮನ ಸೆಳೆದವು. ಮುಖ್ಯ ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆಯಲ್ಲಿ ಪ್ರಮುಖ 12 ಪೂರ್ವನಿಗದಿತ ಸ್ಥಳಗಳಲ್ಲಿ ಕಲಾತಂಡಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲೆಲ್ಲಾ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆ ಕಣ್ತುಂಬಿಕೊಂಡರು.

ಹಾದಿಯುದ್ದಕ್ಕೂ ಭಕ್ತರು ಶ್ರೀ ಶಾರದಾ ಮಾತೆಗೆ ಹಣ್ಣು-ಕಾಯಿ ಮತ್ತು ಆರತಿ ಸಮರ್ಪಿಸಿದರು. ರಾತ್ರಿ ದರ್ಬೆ ವೃತ್ತದ ಬಳಿಕ ಶೋಭಾಯಾತ್ರೆ ಸಂಪನ್ನಗೊಂಡ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿರುವ ಕೆರೆಯಲ್ಲಿ ವಿಗ್ರಹ ಜಲಸ್ತಂಭನ ಮಾಡಲಾಯಿತು.