Dakshina Kannada: ತುಳುನಾಡಿನಲ್ಲಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ- ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು! | Dakshina Kannada: Annual Nemotsavam of Koragajja Deity in Tulunadu

Dakshina Kannada: ತುಳುನಾಡಿನಲ್ಲಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ- ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು! | Dakshina Kannada: Annual Nemotsavam of Koragajja Deity in Tulunadu

Last Updated:

ಸುಮಾರು 600 ವರ್ಷಗಳ‌ ಇತಿಹಾಸ ಈ ಕೊರಗಜ್ಜ ಕ್ಷೇತ್ರಕ್ಕೆ ಇದೆ. ಗುರುವ ಎಂಬುವವರು ಈ ಜಾಗದಲ್ಲಿ ಕೊರಗಜ್ಜನನ್ನು‌ ನಂಬಿ ಆರಾಧನೆ ಮಾಡಿದರು. ಬಳಿಕ‌ ಕುಟುಂಬಸ್ಥರು ಇಂದಿನವರೆಗೂ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ತುಳುನಾಡು(Tulunadu) ದೈವಾರಾಧನೆಯ ನೆಲೆವೀಡು. ಇಲ್ಲಿ ದೇವರಿನಷ್ಟೇ ಮಹತ್ವ ದೈವಗಳಿಗೂ ಇದೆ. ಜನ ಇಂದಿಗೂ ತಾವು ನಂಬಿದ ದೈವಗಳ ಯಾವುದೇ ಕಾರ್ಯವಿದ್ದರೂ ಎಷ್ಟೇ ದೂರದಲ್ಲಿದ್ದರೂ ಬಂದು ದೈವದ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ದಕ್ಷಿಣ‌ಕನ್ನಡ ಜಿಲ್ಲೆಯಲ್ಲಿ(Dakshina Kannada District) ದೈವಗಳು ಹಲವಾರು ಇದ್ರೂ ಇತ್ತೀಚಿನ ವರ್ಷಗಳಲ್ಲಿ ಜನ ಜಾಸ್ತಿಯಾಗಿ ನಂಬಿ ಆರಾಧನೆ ಮಾಡುವಂತ ದೈವ ಕೊರಗಜ್ಜ‌. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ಕ್ಷೇತ್ರಗಳಿವೆ(Koragajja). ಅಂತಹ ಕಾರಣಿಕ ಕ್ಷೇತ್ರಗಳ ಪೈಕಿ ಮಂಗಳೂರಿನ ಕಾರಣಿಕ ಕೊರಗಜ್ಜ ಕ್ಷೇತ್ರ ಯಾದವ ಕಂಪೌಂಡಿನ ಕೊರಗಜ್ಜ ದೈವದ ಕ್ಷೇತ್ರವೂ ಒಂದು.

ಇದನ್ನೂ ಓದಿ: Kolar: ಕೋಲಾರದಲ್ಲಿ ಜನಪರ ಉತ್ಸವ ಪ್ರಯುಕ್ತ ವಸ್ತ್ರಸಿರಿ ಮೇಳ- ಸೀರೆ ಕೊಳ್ಳಲು ಮುಗಿಬಿದ್ದ ನಾರಿಮಣಿಯರು!

ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಅದ್ದೂರಿಯಿಂದ ನೆರವೇರಿದೆ. ಸಂಪ್ರಾದಾಯ ಬದ್ಧವಾಗಿ ನಡೆಯುವ ನೇಮೋತ್ಸವ ಕಾಣೋದೇ ಭಕ್ತರ ಕಣ್ಣಿಗೆ ಹಬ್ಬ. ಹೈವೇ ದೇರಬೈಲ್, ದಡ್ಡಕಾಡ್, ಯಾದವ ಕಂಪೌಂಡಿನ ಬಹು ನಂಬಿಕೆಯ ಕೊರಗಜ್ಜ ಕ್ಷೇತ್ರ ಇದಾಗಿದ್ದು, ನೂರಾರು ಜನರ ಕೂಡುವಿಕೆಯಲ್ಲಿ ಕೊರಗಜ್ಜ ನೇಮೋತ್ಸವ ನಡೆದಿದೆ. ಸುಮಾರು 600 ವರ್ಷಗಳ‌ ಇತಿಹಾಸ ಈ ಕೊರಗಜ್ಜ ಕ್ಷೇತ್ರಕ್ಕೆ ಇದೆ. ಗುರುವ ಎಂಬುವವರು ಈ ಜಾಗದಲ್ಲಿ ಕೊರಗಜ್ಜನನ್ನು‌ ನಂಬಿ ಆರಾಧನೆ ಮಾಡಿದರು. ಬಳಿಕ‌ ಕುಟುಂಬಸ್ಥರು ಇಂದಿನವರೆಗೂ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಕೊರಗಜ್ಜ ಕ್ಷೇತ್ರದ ಪ್ರಮುಖ ಹರಕೆಯೇ ಅಗೇಲು ಸೇವೆ. ಪ್ರತಿ ತಿಂಗಳು ಭಕ್ತರು ಅಧಿಕ ಸಂಖ್ಯೆಯಲ್ಲಿ ಅಗೇಲು ಸೇವೆ ಕೋಡೋದು ಈ ಕ್ಷೇತ್ರದ ಕಾರಣಿಕತೆಗೆ ಸಾಕ್ಷಿ.

ಮುಳೂರು ವಿಶ್ವನಾಥ ಪಂಡಿತ್ ಅವರ ನೇತೃತ್ವದಲ್ಲಿ ಕೊರಗಜ್ಜನ ಆರಾಧನಾ ಸೇವೆ ನಡೆಯುತ್ತಿದ್ದು, ಈ ಬಾರಿಯೂ ವಿಜೃಂಭಣೆಯಿಂದ ನಡೆದಿದೆ. ಸಾಂಪ್ರದಾಯಿಕವಾಗಿ ನಡೆಯುವ ವರ್ಷಾವಧಿ ಕೊರಗಜ್ಜ ಕೋಲದಲ್ಲಿ ಈ ಬಾರಿಯೂ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಅಜ್ಜನಿಗೆ ಹರಕೆ ರೂಪದಲ್ಲಿ ಮದ್ಯ, ಎಲೆ-ಅಡಿಕೆ, ಚಕ್ಕುಲಿ ಸಮರ್ಪಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸೇರಿದಂತೆ ಪ್ರಮುಖರು ಕೊರಗಜ್ಜನ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ.