Last Updated:
ಈ ಜೋಡಿಯ ಪ್ರೀತಿ ಜಾತಿ, ಧರ್ಮ, ಭಾಷೆ, ದೇಶಗಳನ್ನೂ ಮೀರಿದ್ದು. ಮೊದಲ ನೋಟದಲ್ಲೇ ಯುವಕನಿಗೆ ವಿದೇಶಿ ಯುವತಿ ಮೇಲೆ ಪ್ರೇಮವಾಗಿ ಈಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದು ಯಾವ ಜೋಡಿ ಎಂದು ತಿಳಿಯಲು ಈ ಸ್ಟೋರಿ ನೋಡಿ.
ದಕ್ಷಿಣ ಕನ್ನಡ: ಮಂಗಳೂರಿನ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್ ನ (Thailand) ಮೊಂತಕನ್ ಸಸೂಕ್ ಶ್ರೀ ಮಂಗಳಾದೇವಿ ದೇಗುಲದಲ್ಲಿ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ. ಪೃಥ್ವಿರಾಜ್ ಥೈಲ್ಯಾಂಡ್ ಗೆ ಹೋಗಿದ್ದಾಗ ಅವರಿಗೆ ಮೊಂತಕನ್ ಮೇಲೆ ಮೊದಲ ನೋಟದಲ್ಲೇ ಪ್ರೇಮವಾಗಿತ್ತು (Dakshina Kannada). ಸದ್ಯ ಇಬ್ಬರೂ ಎರಡೂ ಮನೆಯವರನ್ನು ಒಪ್ಪಿಸಿ ಗುರುಹಿರಿಯರ ಆಶೀರ್ವಾದದೊಂದಿಗೆ ವಿವಾಹವಾಗಿದ್ದಾರೆ (Mangaluru News).
ಎಲ್ಲಿಯ ತುಳುನಾಡು, ಎಲ್ಲಿಯ ಥೈಲ್ಯಾಂಡ್. ಆದರೆ ಈ ಜೋಡಿಯದ್ದು ಮಾತ್ರ ದೇಶ, ಜಾತಿ-ಮತವನ್ನು ಮೀರಿದ ಪ್ರೀತಿ. ಆದ್ದರಿಂದಲೇ ಈ ಪ್ರಣಯ ಪಕ್ಷಿಗಳಿಗೆ ತುಳುನಾಡು ಮತ್ತು ಥೈಲ್ಯಾಂಡ್ ನಡುವಿನ ಅಂತರ ಅಡ್ಡಿಯಾಗಲೇ ಇಲ್ಲ. ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ಒಂದಾಗಿದೆ.
ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಹಿರಿಯರ ಮಾತು, ಮಂಗಳೂರಿನ ಪೃಥ್ವಿರಾಜ್ ಎಸ್. ಅಮೀನ್ ಹಾಗೂ ಥೈಲ್ಯಾಂಡ್‌ನ ಮೊಂತಕನ್ ಸಸೂಕ್ ಮದುವೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಸುಜಯಾ ಹಾಗೂ ಸತೀಶ್ ಕುಮಾರ್ ದಂಪತಿ ಪುತ್ರ ಪೃಥ್ವಿರಾಜ್ ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್ ವೇರ್ ಕಂಪನಿ ಹೊಂದಿದ್ದಾರೆ. ಇವರ ಕಂಪನಿ ಟಾಟಾ ಸೇರಿದಂತೆ ಕೆಲವು ಕಂಪನಿಗಳಿಗೆ ಸಾಫ್ಟ್‌ವೇರ್ ಸರ್ವಿಸ್ ಒದಗಿಸುತ್ತದೆ.
ಥೈಲ್ಯಾಂಡ್ ಯುವತಿ ಮೇಲೆ ಲವ್ ಅಟ್ ಫಸ್ಟ್ ಸೈಟ್
ಒಮ್ಮೆ ಹೀಗೆ ಪ್ರಾಜೆಕ್ಟ್ ಮೇಲೆ ಥೈಲ್ಯಾಂಡ್ ದೇಶಕ್ಕೆ ಹೋಗಿದ್ದ ವೇಳೆ ಪೃಥ್ವಿರಾಜ್‌ಗೆ ಮೊಂತಕನ್ ಸಸೂಕ್ ಪರಿಚಯವಾಗಿತ್ತು. ಅವರನ್ನು ನೋಡಿದ್ದೇ ಪೃಥ್ವಿರಾಜ್‌ಗೆ ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ಪ್ರೀತಿ ಚಿಗುರೊಡೆದಿತ್ತು. ಮೊಂತಕನ್ ಕೂಡಾ ಪೃಥ್ವಿರಾಜ್ ಪ್ರೀತಿಯನ್ನು ಒಪ್ಪಿಕೊಂಡಿದ್ರು. ಇಬ್ಬರ ನಡುವಿನ ಪ್ರೀತಿ ಗಟ್ಟಿಗೊಳ್ಳುತ್ತಿದ್ದಂತೆ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿತ್ತು ಈ ಜೋಡಿ.
ಇದನ್ನೂ ಓದಿ: Dakshin Kannada: ದೇವಸ್ಥಾನಗಳಲ್ಲಿ ಅನ್ನಪ್ರಸಾದಕ್ಕೂ ಮೊದಲು ಮಾಡುವ ಪೂಜೆಗಿದೆ ಭಾರೀ ಮಹತ್ವ; ಪಲ್ಲ ಪೂಜೆ ಬಗ್ಗೆ ನೀವೂ ತಿಳಿಯಿರಿ
ಇಬ್ಬರ ಪ್ರೀತಿಗೆ ಪೋಷಕರ ಒಪ್ಪಿಗೆ
ಇನ್ನು, ಥೈಲ್ಯಾಂಡ್ ಯುವತಿಯನ್ನು ಮದುವೆಯಾಗುವುದಾಗಿ ಪೃಥ್ವಿರಾಜ್ ತಿಳಿಸಿದಾಗ ಹೆತ್ತವರು ಒಮ್ಮೆ ಶಾಕ್ ಆದ್ರೂ ಬಳಿಕ ಇಬ್ಬರ ಪ್ರೀತಿಗೆ ಅಸ್ತು ಅಂದಿದ್ದಾರೆ. ಇತ್ತ ಮೊಂತಕನ್ ಮನೆಯಲ್ಲೂ ವಿವಾಹಕ್ಕೆ ಸಮ್ಮತಿ ಸಿಕ್ಕಿತ್ತು. ಜುಲೈನಲ್ಲಿ ಥೈಲ್ಯಾಂಡ್ ನಲ್ಲಿ ಅಲ್ಲಿಯ ಪದ್ಧತಿಯಂತೆ ಮದುವೆಯಾಗಿದ್ದ ಈ ಜೋಡಿ, ಈಗ ಭಾರತೀಯ ಪದ್ಧತಿ ಪ್ರಕಾರ ಮದುವೆಯಾಗಿದ್ದಾರೆ.
ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಪೃಥ್ವಿರಾಜ್ ಮತ್ತು ಮೊಂತಕನ್ ಸಸೂಕ್ ಭಾರತೀಯ ಪದ್ಧತಿಯಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ನೂರ್ಕಾಲ ಸುಖವಾಗಿ ಬಾಳಲಿ ಎಂಬುದೇ ನಮ್ಮ ಆಶಯ.
Dakshina Kannada,Karnataka
December 08, 2024 9:36 AM IST