Last Updated:
ಕರಾವಳಿಯ ಕೋಳಿ ಅಂಕದ ಸಾಂಪ್ರದಾಯಿಕ ಮಹತ್ವ, 1968 ರ ಆಮಂತ್ರಣ ಪತ್ರಿಕೆಯ ವೈರಲ್, ನಿರ್ಬಂಧಗಳ ನಂತರದ ಬದಲಾವಣೆಗಳು, ಜೂಜು ಮತ್ತು ಕತ್ತಿ ಇಲ್ಲದ ಅಂಕದ ಅನುಮತಿ, ಆಮಂತ್ರಣದ ರಹಸ್ಯ.
ದಕ್ಷಿಣ ಕನ್ನಡ: ಕರಾವಳಿ ಭಾಗದಲ್ಲಿ (Karnataka Coastal ) ನಡೆಯುವ ಕೋಳಿ ಅಂಕಕ್ಕೆ (Cockfighting) ತನ್ನದೇ ಶದ ಮಹತ್ವವಿದೆ. ಕರಾವಳಿಯ ಜನ ಸಾಂಪ್ರದಾಯಿಕ ಹಿನ್ನಲೆಯಲ್ಲಿ ಕೋಳಿ ಅಂಗವನ್ನು ನೋಡುತ್ತಿದ್ದು, ತುಳುನಾಡಿನಲ್ಲಿ (Tulu) ಆರಾಧಸಲಾಗುವ ಪ್ರತಿಯೊಂದು ದೈವಕ್ಕೆ ಸಂಬಂಧಪಟ್ಟ ದೈವಸ್ಥಾನದಲ್ಲೂ (Temple) ಕೋಳಿ ಅಂಕ ಮಾಡೋದು ಕಡ್ಡಾಯ ಎನ್ನುವ ಅಲಿಖಿತ ನಂಬಿಕೆಯೂ ಇದೆ. ಕೋಳಿ ಅಂಕದಲ್ಲಿ ಭಾಗಿಯಾಗುವ ಕೋಳಿಗಳ ಕಾಲಿಗೆ ಬಾಳ್ ಎಂದು ಕರೆಯಲಾಗುವ ಎರಡೂ ಕಡೆಯಲ್ಲೂ ಹರಿತವಾಗಿರುವ ಸಣ್ಣ ಕತ್ತಿಯನ್ನು ಕಟ್ಟಲಾಗುತ್ತದೆ.
ಅಂಕದಲ್ಲಿ ಕಾದಾಡುವ ಕೋಳಿಗಳು ತನ್ನ ಕಾಲಿಗೆ ಕಟ್ಟಿದ ಕತ್ತಿಯ ಮೂಲಕ ಎದುರಾಳಿ ಕೋಳಿಗೆ ಮಟ್ಟಿ ಗಾಯಗೊಳಿಸುತ್ತದೆ. ಅಲ್ಲದೆ ಯಾವ ಕೋಳಿ ಗೆಲ್ಲುತ್ತೆ ಎನ್ನುವ ಲೆಕ್ಕಾಚಾರದಲ್ಲಿ ಜೂಜು ಕೂಡಾ ನಡೆಯುತ್ತೆ. ಆದರೆ ಈ ಕೋಳಿ ಅಂಕಕ್ಕೆ ಇದೀಗ ನಿರ್ಬಂಧವಿದ್ದು, ಕತ್ತಿ ಕಟ್ದದೆ, ಜೂಜು ಮಾಡದೆ ನಡೆಸುವ ಕೋಳಿ ಅಂಕಗಳಿಗೆ ಸಾಂಪ್ರದಾಯಿಕ ನೆಲೆಯಲ್ಲಿ ಇಂದು ಅವಕಾಶಗಳನ್ನು ನೀಡಲಾಗುತ್ತಿದೆ.
ಹಾಗಾದರೆ ನಿರ್ಬಂಧಗಳು ಇಲ್ಲದ ಸಮಯದಲ್ಲಿ ತುಳುನಾಡಿನಲ್ಲಿ ಯಾವ ರೀತಿ ಕೋಳಿ ಅಂಕ ನಡೆಯುತ್ತಿತ್ತು ಎನ್ನುವುದನ್ನು ತಿಳಿಸುವ ಕೋಳಿ ಅಂಕದ ಆಮಂತ್ರಣ ಪತ್ರಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಾವ ರೀತಿ ಸಭೆ-ಸಮಾರಂಭಗಳಿಗೆ ಆಮಂತ್ರಣ ಪತ್ರಿಕೆಯನ್ನು ಮಾಡಲಾಗುತ್ತದೋ, ಅದೇ ರೀತಿ ಕೋಳಿ ಅಂಕಕ್ಕೂ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗುತ್ತಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಅಂಕ ನಡೆಯುವ ಸ್ಥಳ, ಸಮಯ, ಬಹುಮಾನ ಎಲ್ಲವನ್ನೂ ನಮೂದಿಸಲಾಗುತ್ತಿತ್ತು. 1968 ರಲ್ಲಿ ತಯಾರಿಸಲಾದ ಈ ಆಮಂತ್ರಣ ಪತ್ರಿಕೆಯಲ್ಲಿ ಅಂಕದಲ್ಲಿ ಕಾದಾಡುವ ಕೋಳಿಗಳ ವರ್ಣನೆಯ ಜೊತೆಗೆ, ಅಂಕಕ್ಕೆ ಬರುವ, ಅಂಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರನ್ನೂ ಮೆಚ್ಚಿಸುವ ವರ್ಣನೆಯೂ ಅಡಕವಾಗಿದೆ.
ಹಾಗೆಂದು ಇಂದು ನಡೆಯುವ ಕೋಳಿ ಅಂಕಕ್ಕೆ ಆಮಂತ್ರಣವು ರಹಸ್ಯವಾಗಿಯೇ ಮೊಬೈಲ್ ಮತ್ತು ಸಂಪರ್ಕದ ಮೂಲಕವಾಗುತ್ತಿದೆ. ಆದರೆ ಹಿಂದಿನಂತೆ ತಾವೂ ಆಮಂತ್ರಣ ಪತ್ರಿಕೆ ಹಂಚಿ ಕೋಳಿ ಅಂಕ ಆಯೋಜಿಸುತ್ತೇವೆ ಎಂದು ಮುಂದಾದಲ್ಲಿ, ಹಂಚಿದವರು, ಆಯೋಜಿಸಿದವರು, ಕಾದಾಡುವ ಕೋಳಿಗಳೆಲ್ಲಾ ಪೊಲೀಸ್ ಠಾಣೆಯಲ್ಲಿರಬಹುದು ಜೋಕೆ.
Dakshina Kannada,Karnataka
June 10, 2025 10:56 AM IST