Dakshina Kannada: ದೂಜ ಕೋಣಕ್ಕೆ ಅನಾರೋಗ್ಯ- ಇನ್ಮೇಲೆ ಕಂಬಳ ಕರೆಗೆ ಇಳಿಯಲ್ಲ! | Dakshina Kannada Dooja Kona is sick not participate in Kambala

Dakshina Kannada: ದೂಜ ಕೋಣಕ್ಕೆ ಅನಾರೋಗ್ಯ- ಇನ್ಮೇಲೆ ಕಂಬಳ ಕರೆಗೆ ಇಳಿಯಲ್ಲ! | Dakshina Kannada Dooja Kona is sick not participate in Kambala

Last Updated:

ಜೊತೆಗೆ ಕಂಬಳ ಓಟದಲ್ಲಿ 69 ಮೆಡೆಲ್ ಪಡೆದು ದೂಜ ದಾಖಲೆ ಬರೆದಿದ್ದಾನೆ. ಚಾಂಪಿಯನ್ ಸರಣಿ ಪ್ರಶಸ್ತಿ ಪಡೆದ ದೂಜ ತನ್ನ ಮೊದಲ ಕಂಬಳದಲ್ಲಿಯೇ ಸೆಮಿಫೈನಲ್ ಪ್ರವೇಶಿಸಿದ್ದ. ಅಪ್ಪು, ಚೆನ್ನ, ಬೊಲ್ಲ, ಮೋಡೆ ಕೋಣಗಳೊಂದಿಗೆ ಜೊತೆಯಾಗಿ ದೂಜ ಕಂಬಳ ಕರೆಯಲ್ಲಿ ಓಡಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ : “ಅಲೆ ಬುಡಿಯೆರ್‌ಗೇ….” ಎಂಬ ಉದ್ಘಾರ ಕೇಳುತ್ತಿದ್ದಂತೆ ಕಂಬಳ ಕರೆಯಲ್ಲಿ ದೂಜ ಓಟಕ್ಕೆ ನಿಂತರೆ ಮೆಡಲ್ ಪಡೆದನೆಂದೇ ಲೆಕ್ಕ. ಅಂತಹ ದೂಜ ಅನಾರೋಗ್ಯದಿಂದ(Unhealthy) ಒಂದೆರಡು ವರ್ಷಗಳಿಂದ ಕಂಬಳ ಕರೆಗೆ ಇಳಿದಿಲ್ಲ. ಸದ್ಯ ಆರೋಗ್ಯದಿಂದಿದ್ದರೂ ಇನ್ನು ಮುಂದೆ ದೂಜ ಕಂಬಳ(Buffalo) ಕರೆಗೆ ಇಳಿಯುವುದಿಲ್ಲ ಎಂಬ ಸುದ್ದಿ ಕಂಬಳ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆರೋಗ್ಯವಿದ್ದರೆ ಕೋಣಗಳು ಸರಾಸರಿ 20 ವರ್ಷ ಪ್ರಾಯದವರೆಗೆ ಕಂಬಳ ಕರೆಯಲ್ಲಿ ಓಡುತ್ತವೆ. ಆದರೆ ದೂಜನಿಗೆ ಎರಡು ವರ್ಷಗಳ ಹಿಂದೆ ಆರೋಗ್ಯ ಕೈಕೊಟ್ಟಿತ್ತು. ಎದ್ದು ನಿಲ್ಲಲೂ ಅಶಕ್ತನಾದ. ಬಳಿಕ‌ ನಡೆದ ಚಿಕಿತ್ಸೆಯಿಂದ ಆರೋಗ್ಯವಂತನಾದರೂ ಓಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ನು ಮುಂದೆ ಆತ ಕಂಬಳ(Kambala) ಕರೆಗೆ ಇಳಿಯುವುದು ಸ್ವಲ್ಪ ಕಷ್ಟವೇ ಎನ್ನಲಾಗುತ್ತಿದೆ.

ಮಂಗಳೂರಿನ ಶಕ್ತಿನಗರ ಪದವು – ಕಾನಡ್ಕದ ಯಜಮಾನರು ದೂಜ ಕೋಣವನ್ನು ಅಳದಂಗಡಿ ರವಿಯವರಿಂದ ಖರೀದಿಸಿದ್ದರು. ಪದವು ಕಾನಡ್ಕಕ್ಕೆ ಬರುವಾಗ 2ವರ್ಷದ ಮರಿಕೋಣವಾಗಿದ್ದ ದೂಜನಿಗೆ ಇದೀಗ 16ರ ಪ್ರಾಯ. ಪದವು – ಕಾನಡ್ಕಕ್ಕೆ ಬಂದ ಬಳಿಕವೇ ದೂಜ ಕಂಬಳಕ್ಕೆ ತಯಾರಾಗಿದ್ದು, ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜರ ಹೆಸರಿನಲ್ಲಿ ದೂಜನನ್ನು ಕಂಬಳ ಕರೆಯಲ್ಲಿ ಓಡಿಸಲಾಗುತ್ತಿತ್ತು. ತಂದೆ ಫ್ರಾನ್ಸಿಸ್ ಅವರ ನಿಧನದ ಬಳಿಕ ಮೂವರು ಮಕ್ಕಳಾದ ಡೋಲ್ಫಿ ಡಿಸೋಜ, ಡೆರಿಕ್ ಡಿಸೋಜ ಹಾಗೂ ನಾರ್ಬರ್ಟ್ ಡಿಸೋಜರು ತಾಯಿ ಫ್ಲೇವಿ ಡಿಸೋಜರ ಹೆಸರಿನಲ್ಲಿ ಕೋಣಗಳನ್ನು ಓಡಿಸುತ್ತಿದ್ದಾರೆ.

ಇದನ್ನೂ ಓದಿ: Hubli: ಮಹಿಳೆಯರಿಗೆ ಮರು ಜೀವ ನೀಡಿದ ಚಿಟಗುಪ್ಪಿ ಆಸ್ಪತ್ರೆ ವೈದ್ಯರು!

ನೇಗಿಲು‌ ಕಿರಿಯದಲ್ಲಿ ಚಾಂಪಿಯನ್ ಆಗಿದ್ದ ದೂಜ ಬಳಿಕ ಹಗ್ಗ ಕಿರಿಯ ವಿಭಾಗದಲ್ಲಿ ಚಾಂಪಿಯನ್ ಆಗಿತ್ತು, ಹಗ್ಗ ಹಿರಿಯ ವಿಭಾಗದಲ್ಲಿ ನಾಲ್ಕು ವರ್ಷ ಚಾಂಪಿಯನ್ ಆಫ್ ದಿ ಈಯರ್ ಆಗಿತ್ತು. ಜೊತೆಗೆ ಕಂಬಳ ಓಟದಲ್ಲಿ 69 ಮೆಡೆಲ್ ಪಡೆದು ದೂಜ ದಾಖಲೆ ಬರೆದಿದ್ದಾನೆ. ಚಾಂಪಿಯನ್ ಸರಣಿ ಪ್ರಶಸ್ತಿ ಪಡೆದ ದೂಜ ತನ್ನ ಮೊದಲ ಕಂಬಳದಲ್ಲಿಯೇ ಸೆಮಿಫೈನಲ್ ಪ್ರವೇಶಿಸಿದ್ದ. ಅಪ್ಪು, ಚೆನ್ನ, ಬೊಲ್ಲ, ಮೋಡೆ ಕೋಣಗಳೊಂದಿಗೆ ಜೊತೆಯಾಗಿ ದೂಜ ಕಂಬಳ ಕರೆಯಲ್ಲಿ ಓಡಿದೆ.

ಸಂಗೀತ ಪ್ರೇಮಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ದೂಜ ಸೆಮಿಫೈನಲ್ ಪ್ರವೇಶಿಸಿದರೆ ಬ್ಯಾಂಡು, ಕೊಂಬಿನ ನಾದಕ್ಕೆ ತಕ್ಕಂತೆ ತಲೆಯಾಡಿಸುವುದು ನೋಡುವುದಕ್ಕೆ ಚಂದ. ಫೈನಲ್‌ನಲ್ಲಿ ಮೆಡಲ್ ಹೊಡೆದರೆ, ಚಾಂಪಿಯನ್ ಶಿಪ್ ಆದರೆ ಆತ ಖುಷಿಯಿಂದ ಕುಣಿಯುತ್ತಿದ್ದ ಎಂದು ದೂಜನನ್ನು ಸಾಕುವವರು ನೆನಪಿಸುತ್ತಾರೆ.