Dakshina Kannada: ನೀರಿಗಾಗಿ 8 ಸುರಂಗ ಕೊರೆದ ಬಂಟ್ವಾಳದ ಜಾನ್ ಮೊಂತೆರೋ; ಮೂರರಲ್ಲಿ ನೀರು-ಕರ್ಮಯೋಗಿ ಬದುಕಲ್ಲಿ ಹಸಿರು | John Montero of Dakshina Kannada district Bantwal has dug a tunnel for water

Dakshina Kannada: ನೀರಿಗಾಗಿ 8 ಸುರಂಗ ಕೊರೆದ ಬಂಟ್ವಾಳದ ಜಾನ್ ಮೊಂತೆರೋ; ಮೂರರಲ್ಲಿ ನೀರು-ಕರ್ಮಯೋಗಿ ಬದುಕಲ್ಲಿ ಹಸಿರು | John Montero of Dakshina Kannada district Bantwal has dug a tunnel for water

Last Updated:

ನೀರು ಮನುಷ್ಯನ ಜೀವನಾವಶ್ಯಕತೆಗಳಲ್ಲಿ ಮುಖ್ಯವಾದದ್ದು. ಅಂತಹ ಜೀವಜಲದ ಕೊರತೆಯಾದಾಗ ಧೃತಿಗೆಡದ ಬಂಟ್ವಾಳದ ವ್ಯಕ್ತಿಯೊಬ್ಬರು ಸುರಂಗಗಳನ್ನು ಕೊರೆದು ನೀರನ್ನು ಪಡೆದುಕೊಂಡಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಇವರು ಕಾಯಕವನ್ನೇ ಉಸಿರಾಗಿಸಿಕೊಂಡ ಕರ್ಮಯೋಗಿ. ಬೇಸಾಯ ಹಾಗೂ ಮನೆ ಬಳಕೆಗೆ ನೀರಿನ ಸಮಸ್ಯೆ ಎದುರಾದಾಗ ಇವರು ಕಂಡುಕೊಂಡ ಮಾರ್ಗವೇ ಸುರಂಗಗಳನ್ನು ಕೊರೆಯುವುದು (Dakshina Kannada Story). ಹೀಗೆ ಸುರಂಗ ಕೊರೆದು ಭೂಮಿ ತಾಯಿಯ ಒಡಲನ್ನು ಹಸಿರಾಗಿಸಿದ ಸರಳ ಸಜ್ಜನಿಕೆಯ ಈ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ. ಹೆಸರು ಜಾನ್ ಮೊಂತೆರೋ (John Montero).

ಜಾನ್ ಮೊಂತೆರೋ ಕಾಯಕವೇ ಕೈಲಾಸ ಎನ್ನುವ ಛಲವಾದಿ. ಕೃಷಿಯನ್ನೇ ಉಸಿರಾಗಿಸಿಕೊಂಡವರು. ಕುಡಿಯಲು, ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆ ಎದುರಾದಾಗ ಇವರು ಕಂಗೆಡಲಿಲ್ಲ. ಬದಲಾಗಿ ಯಾರ ಸಹಾಯವೂ ಇಲ್ಲದೆ ತಾವೇ ಸುರಂಗ ಕೊರೆದು ನೀರಿನ ವ್ಯವಸ್ಥೆ ಮಾಡಿಕೊಂಡ್ರು.

ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಜಾನ್ ಮೊಂತೆರೋ ಸಂಜೆ ಮನೆಗೆ ಬಂದ ಬಳಿಕ ಸುರಂಗ ಕೊರೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದರು. ಸಂಜೆ 6 ಗಂಟೆಯಿಂದ ತಡರಾತ್ರಿ 12 ಗಂಟೆಯವರೆಗೂ ಸುರಂಗ ಕೊರೆದ ದಿನಗಳಿವೆ ಎಂದು ಜಾನ್ ಮೊಂತೆರೋ ನೆನಪಿಸಿಕೊಳ್ಳುತ್ತಾರೆ.

ಸತತ ಪ್ರಯತ್ನದಿಂದ ನೀರಿನ ಒರತೆ ಪಡೆದ ಮೊಂತೆರೋ

ನೀರಿನ ಸಮಸ್ಯೆ ಎದುರಾದಾಗ ಜಾನ್ ಮೊಂತೆರೋ ತಮ್ಮ ಜಮೀನಿನ ಗುಡ್ಡದ ತಪ್ಪಲಿನಲ್ಲಿ ಸ್ವಂತ ಪರಿಕಲ್ಪನೆಯಲ್ಲಿ ಸುರಂಗ ಕೊರೆಯಲು ಶುರು ಮಾಡುತ್ತಾರೆ. ಸುಮಾರು 30 ಫೀಟ್ ಅಗೆದರೂ ನೀರು ಸಿಕ್ಕಿರಲಿಲ್ಲ. ಇದರಿಂದ ಧೃತಿಗೆಡದ ಮೊಂತೆರೋ ತಮ್ಮ ಪ್ರಯತ್ನವನ್ನು ಮುಂದುವರೆಸಿ ಸುರಂಗ ಕೊರೆದು ನೀರಿನ ಒರತೆಯನ್ನು ಪಡೆದಿದ್ದಾರೆ. ಅವರ ಸತತ ಪ್ರಯತ್ನದ ಫಲವಾಗಿ ಇಂದು ಸಂತಸದ ಜೀವನ ನಡೆಸುವಂತಾಗಿದೆ.

ಇದನ್ನೂ ಓದಿ: Belagavi: ಬೆಳಗಾವಿಯ ಗೆಣಸಿಗೆ ಉತ್ತರ ಭಾರತದಲ್ಲಿ ಫುಲ್ ಡಿಮ್ಯಾಂಡ್; ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಂಪು ಗೆಣಸು!

8 ಸುರಂಗಗಳ ಪೈಕಿ 3ರಲ್ಲಿ ನೀರು

ಜಾನ್ ಮೊಂತೆರೋ ಒಟ್ಟು 8 ಸುರಂಗಗಳನ್ನು ಕೊರೆದಿದ್ದರು. ಈ ಪೈಕಿ 3 ಸುರಂಗಗಳಲ್ಲಿ ನೀರು ಸಿಕ್ಕಿದೆ. ಸುರಂಗ ಕೊರೆಯಲು ಆರಂಭಿಸಿದ 2 ವರ್ಷಗಳ ಬಳಿಕ ಅವರು ಸುರಂಗ ಕೊರೆಯುವ ಕೌಶಲ್ಯವನ್ನು ಕಲಿತುಕೊಂಡ್ರು. ಆ ಬಳಿಕ ಕೆಲವು ತಿಂಗಳುಗಳಲ್ಲಿ ಸುರಂಗ ಕೊರೆದು ಪೂರ್ಣಗೊಳಿಸಿದ್ದಾರೆ.

ಇನ್ನು, ತನ್ನ ಕೆಲಸಕ್ಕೆ ಪತ್ನಿ, ಮಕ್ಕಳು ಸಹ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಜಾನ್ ಮೊಂತೆರೋ. ಮಕ್ಕಳು ಶಾಲೆಗೆ ಹೋಗುವ ಮುನ್ನ ಹಾಗೂ ಶಾಲೆಯಿಂದ ಬಂದ ಬಳಿಕ ಮಣ್ಣು ತೆಗೆಯಲು ನೆರವಾಗುತ್ತಿದ್ದರು ಎಂದಿದ್ದಾರೆ. ಒಟ್ಟಿನಲ್ಲಿ ಎಂತಹ ಸಂದರ್ಭದಲ್ಲೂ ಧೃತಿಗೆಡದೆ ಧೈರ್ಯದಿಂದ ಕೆಲಸ ನಿರ್ವಹಿಸಿದ ಜಾನ್ ಮೊಂತೆರೋ ಎಲ್ಲರಿಗೂ ಸ್ಫೂರ್ತಿ.