Last Updated:
ಇಲ್ಲಿ ಸಿಗುವ ವೆರೈಟಿ, ವೆರೈಟಿ ವಸ್ತುಗಳು ಹಾಗೂ ಕೇಳಿದ್ದೆಲ್ಲಾ ವಸ್ತುಗಳು ಇಲ್ಲಿ ಇರೋ ಕಾರಣಕ್ಕಾಗಿಯೇ ಈ ಅಂಗಡಿಯನ್ನು ಸ್ಥಳೀಯ ಜನ ಈಸ್ಟ್ ಇಂಡಿಯಾ ಕಂಪನಿ ಎಂದೂ ಸಹ ಕರೆಯುತ್ತಾರೆ. ಅದರಲ್ಲೂ ಆಯುರ್ವೇದಕ್ಕೆ ಸಂಬಂಧಪಟ್ಟ ಮದ್ದಿನ ಬೇರುಗಳು, ಕೊರಡುಗಳು, ತೊಗಟೆಗಳು ಎಲ್ಲವೂ ಈ ಅಂಗಡಿಯಲ್ಲಿವೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada) ಪುತ್ತೂರು ನಗರದ(Puttur City) ಮಧ್ಯೆಯೊಂದು ಓಬೀರಾಯನ ಕಾಲದ ಅಂಗಡಿಯಿದೆ. ಈ ಅಂಗಡಿಗೆ ಹೋಗಿ ನೀವು ಯಾವ ವಸ್ತು ಕೇಳಿದರೂ ಅಲ್ಲಿ ಇಲ್ಲ ಎನ್ನುವ ಉತ್ತರ ಬರಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕಾಗಿ ಪುತ್ತೂರು ಹಾಗೂ ಆಸುಪಾಸಿನಲ್ಲಿ ಈ ಅಂಗಡಿಯನ್ನ ಈಸ್ಟ್ ಇಂಡಿಯಾ ಕಂಪನಿ(East India Company) ಎನ್ನುವ ಹೆಸರಿನಲ್ಲೂ ಕರೆಯಲಾಗುತ್ತದೆ.
ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಈಸ್ಟ್ ಇಂಡಿಯಾ ಕಂಪನಿ. ಇಲ್ಲಿ ನೀವು ಏನು ಬೇಕಾದರೂ ಕೇಳಿ, ಆ ವಸ್ತು ನಿಮಗೆ ಖಂಡಿತ ಸಿಗುತ್ತೆ. ಪುತ್ತೂರು ನಗರದ ಕೋರ್ಟ್ ರಸ್ತೆಯಲ್ಲಿರುವ ಈ ಅಂಗಡಿಗೆ ದಯ್ಯರ ಅಂಗಡಿ ಎನ್ನುವ ಹೆಸರಿದೆ. ಇಲ್ಲಿ ಸಿಗುವ ವೆರೈಟಿ, ವೆರೈಟಿ ವಸ್ತುಗಳು ಹಾಗೂ ಕೇಳಿದ್ದೆಲ್ಲಾ ವಸ್ತುಗಳು ಇಲ್ಲಿ ಇರೋ ಕಾರಣಕ್ಕಾಗಿಯೇ ಈ ಅಂಗಡಿಯನ್ನು ಸ್ಥಳೀಯ ಜನ ಈಸ್ಟ್ ಇಂಡಿಯಾ ಕಂಪನಿ ಎಂದೂ ಸಹ ಕರೆಯುತ್ತಾರೆ. ಅದರಲ್ಲೂ ಆಯುರ್ವೇದಕ್ಕೆ ಸಂಬಂಧಪಟ್ಟ ಮದ್ದಿನ ಬೇರುಗಳು, ಕೊರಡುಗಳು, ತೊಗಟೆಗಳು ಎಲ್ಲವೂ ಈ ಅಂಗಡಿಯಲ್ಲಿವೆ.
ಇದನ್ನೂ ಓದಿ: Uttara Kannada: ಸಾವಿರ ಮಕ್ಕಳಿಗೆ ವೇದಿಕೆಯಾಯಿತು ಚಿಗುರು! ಶಿರಸಿಯಲ್ಲೊಂದು ವಿಶೇಷ ಕಾರ್ಯಕ್ರಮ
ಸುಮಾರು 100 ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಈ ಅಂಗಡಿ ಇಂದಿಗೂ ಹಿಂದಿನ ಶೈಲಿಯಲ್ಲೇ ಇದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೆ ಬೇಕಾದ ಎಲ್ಲಾ ವಸ್ತುಗಳು ಈ ಅಂಗಡಿಯಲ್ಲಿವೆ. ಸುಮಾರು ಐದು ಸಾವಿರಕ್ಕೂ ಹೆಚ್ಚಿನ ವಸ್ತುಗಳು ಈ ಅಂಗಡಿಯಲ್ಲಿ ಸಿಗುತ್ತಿದ್ದು, ಒಂದು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿವರೆಗೂ ಸಿಗುವ ಅಂಗಡಿಯೊಂದಿದ್ದರೆ ಇದು ಮಾತ್ರವಾಗಿದೆ. ಚಿನ್ನವೊಂದನ್ನು ಬಿಟ್ಟು ಉಳಿದ ಎಲ್ಲಾ ವಸ್ತುಗಳೂ ಇಲ್ಲಿ ಇರೋದು ಇಲ್ಲಿನ ಸ್ಪೆಷ್ಯಾಲಿಟಿಯಾಗಿದೆ. ನಿಯತ್ತಿನ, ಪ್ರಾಮಾಣಿಕ ಸೇವೆಗೂ ಈ ಅಂಗಡಿ ಹೆಸರವಾಸಿಯಾಗಿದೆ.
ಇಂದಿನ ಪಿಕ್ ಅಂಡ್ ಪೇ ವ್ಯವಸ್ಥೆಯಿಂದ ಸಂಪೂರ್ಣ ದೂರವಿದೆ ಈ ಅಂಗಡಿ. ಇದನ್ನು ಆರಂಭಿಸಿದವರು ದಯಾನಂದ ಪೈ. ಸದ್ಯ ಅಂಗಡಿಯನ್ನು ದಯಾನಂದ ಪೈ ಅವರ ಮಕ್ಕಳಾದ ದಿನೇಶ್ ಪೈ, ಪ್ರೇಮಚಂದ್ರ ಪೈ, ರಮಾನಂದ ಪೈ ನಡೆಸುತ್ತಿದ್ದಾರೆ. ಈ ಅಂಗಡಿಯಲ್ಲಿ ಯಾವ ವಸ್ತು ಎಲ್ಲಿ ಇದೆ ಅನ್ನೋದು ಈ ಅಂಗಡಿಗೆ ಸಂಬಂಧಪಟ್ಟ ವ್ಯಕ್ತಿಗಳಲ್ಲದೆ ಇನ್ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ ಅನ್ನೋ ಮಟ್ಟಿಗೆ ಈ ಅಂಗಡಿ ಡೆಲಿಕೇಟ್ ಆಗಿದೆ.
ಇಂದಿಗೂ ಮರದ ಬಾಗಿಲನ್ನು ಹೊಂದಿರುವ ಈ ಅಂಗಡಿಯ ಬಾಗಿಲನ್ನು ಕೇವಲ ಅಂಗಡಿಗೆ ಸಂಬಂಧಪಟ್ಟವರಿಗೆ ಬೇಕಾದಷ್ಟು ಮಾತ್ರ ತೆರೆದಿಡಲಾಗುತ್ತದೆ. ವಸ್ತು ಬೇಕಾದವರಿಗೆ ಅಂಗಡಿಯೊಳಗಿಂದಲೇ ಹುಡುಕಿ ಇಲ್ಲಿ ಗ್ರಾಹಕನಿಗೆ ಕೊಡಲಾಗುತ್ತದೆ.
Dakshina Kannada,Karnataka
February 03, 2025 12:16 PM IST