Last Updated:
ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಬಹುತೇಕ ಪುತ್ತೂರಿನ ಎಲ್ಲಾ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಎಲ್ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳೂ ಈ ಕರಸೇವೆಯಲ್ಲಿ ಭಾಗವಹಿಸಿದ್ದಾರೆ.
ದಕ್ಷಿಣ ಕನ್ನಡ: ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ಪುತ್ತೂರಿನ ಮಹತೋಭಾರ ದೇವಸ್ಥಾನದಲ್ಲಿ(Puttur Mahatobhara Temple) ದೊಡ್ಡ ಮಟ್ಟದ ಕರಸೇವೆ(Karaseva) ನಡೆದಿದೆ. ಮಾಸ್ಟರ್ ಪ್ಲಾನ್ ಮೂಲಕ ಕ್ಷೇತ್ರದ ಅಭಿವೃದ್ಧಿ ನಡೆಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ(Ashok Kumar Rai) ನಿರ್ಧರಿಸಿರುವ ಹಿನ್ನಲೆಯಲ್ಲಿ ದೇವಸ್ಥಾನದ ಆಸುಪಾಸಿನಲ್ಲಿದ್ದ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಈ ನೆಲಸಮಗೊಳಿಸಿದ ಮನೆಗಳ(House) ಅವಶೇಷಗಳ ತೆರವಿಗಾಗಿ ಈ ಕರಸೇವೆಯನ್ನು ಕೈಗೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು(Devotees) ಈ ಸೇವೆಯಲ್ಲಿ ಪಾಲ್ಗೊಂಡಿದ್ದರು.
ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಸುಪಾಸಿನಲ್ಲಿದ್ದ ಮನೆಗಳ ತೆರವು ಜಾಗದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕರಸೇವೆ ನಡೆದಿದೆ. ಏಳು ಮನೆಗಳಲ್ಲಿದ್ದ ಕುಟುಂಬಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಮತ್ತು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್ ತಮ್ಮ ಸ್ವಂತ ಹಣದಲ್ಲಿ ಪರಿಹಾರವನ್ನು ನೀಡಿದ್ದಾರೆ. ಈ ನಡುವೆ ನೆಲಸಮಗೊಳಿಸಲಾದ ಮನೆಗಳ ಅವಶೇಷಗಳನ್ನು ಕರಸೇವೆಯ ಮೂಲಕ ತೆರವುಗೊಳಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಬಹುತೇಕ ಪುತ್ತೂರಿನ ಎಲ್ಲಾ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಎಲ್ಲಾ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳೂ ಈ ಕರಸೇವೆಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: Belagavi: ಬೈಲಹೊಂಗಲದ ದೊಡ್ಡ ಕೆರೆಯಲ್ಲಿ ಬಾತುಕೋಳಿ ಮರಿಗಳ ಕಲರವ!
ಉರಿ ಬಿಸಿಲಿನಲ್ಲೂ ದೇವರ ಸೇವೆ ಎನ್ನುವ ಕಾರಣಕ್ಕೆ ಸೇರಿದ ಸಾವಿರ ಸಂಖ್ಯೆಯ ಭಕ್ತಾಧಿಗಳು ತಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ದೇವಸ್ಥಾನದ ಅಭಿವೃದ್ಧಿಯಲ್ಲಿ ತಮ್ಮ ಅಳಿಲು ಸೇವೆಯನ್ನು ಕೈಗೊಂಡರು. ದೇವಸ್ಥಾನಕ್ಕೆ ಅಡ್ಡಲಾಗಿ ಇದ್ದ ಬಹುತೇಕ ಎಲ್ಲಾ ಅಂಗಡಿ, ಮನೆಗಳನ್ನು ತೆರವುಗೊಳಿಸಲಾಗಿದ್ದು, ನೆಲಸಮ ಮಾಡಿದ ಜಾಗದಲ್ಲಿ ಪಾರ್ಕ್, ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾದ ಸ್ಥಳಾವಕಾಶಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಯೋಜನೆ ಈ ಮಾಸ್ಟರ್ ಪ್ಲಾನ್ನಲ್ಲಿ ಅಡಕವಾಗಿದೆ.
ವಾರದ ಮಧ್ಯದಲ್ಲಿ ನಡೆದ ಈ ಕರಸೇವೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು, ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶಾಸಕರ ಕಾರ್ಯಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ. ಬೆಳಿಗ್ಗೆಯಿಂದಲೇ ಮಹಿಳೆಯರು ಕರಸೇವೆಯಲ್ಲಿ ಭಾಗವಹಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮ ಪಾಲೂ ಇರಲಿ ಎಂದು ಭಾಗವಹಿಸಿದ್ದಾರೆ. ಸರಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಯೋಜನೆ ಶಾಸಕರ ಮುಂದಿದೆ. ಮುಂದಿನ ಒಂದು ವರ್ಷದೊಳಗೆ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಶಾಸಕ ಅಶೋಕ್ ಕುಮಾರ್ ರೈ ಪಣ ತೊಟ್ಟಿದ್ದಾರೆ.
Dakshina Kannada,Karnataka
February 12, 2025 4:19 PM IST