Dakshina Kannada: ಪ್ರಕೃತಿಯ ಅಂದವನ್ನು ಇಮ್ಮಡಿಗೊಳಿಸಿದ ಬಿಸು ಹಬ್ಬದ ಹೂವು; ಈ ಮರದ ಹೂ, ಬೇರು, ಎಲೆಯಲ್ಲೂ ಅಡಗಿದೆ ಔಷಧೀಯ ಗುಣ | Golden shower tree doubles nature beauty in dakshina Kannada

Dakshina Kannada: ಪ್ರಕೃತಿಯ ಅಂದವನ್ನು ಇಮ್ಮಡಿಗೊಳಿಸಿದ ಬಿಸು ಹಬ್ಬದ ಹೂವು; ಈ ಮರದ ಹೂ, ಬೇರು, ಎಲೆಯಲ್ಲೂ ಅಡಗಿದೆ ಔಷಧೀಯ ಗುಣ | Golden shower tree doubles nature beauty in dakshina Kannada

Last Updated:

ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ ವರ್ಗಕ್ಕೆ ಸೇರಿದೆ. ಕಕ್ಕೆ ಮರ ನಾಟಿ ವೈದ್ಯ ಚಿಕಿತ್ಸೆಗಾಗಿಯೂ ಬಳಕೆಯಾಗುತ್ತದೆ, ಅಲಂಕಾರಿಕ ಸಸ್ಯವೂ ಹೌದು!

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಯುಗಾದಿ ಸಂಭ್ರಮ (Ugadi festival) ಮರಗಿಡಗಳಲ್ಲಿ ಕಾಣುತ್ತೇವೆ. ಹೊಸ ಚಿಗುರು ಪೃಕೃತಿಯನ್ನು ನಳನಳಿಸುವಂತೆ ಮಾಡಿದೆ. ಯುಗಾದಿಯನ್ನು ಕರಾವಳಿಯಲ್ಲಿ ಬಿಸು ಎಂದು ಆಚರಿಸುತ್ತಾರೆ. ಬಿಸು ಮತ್ತು ಕೇರಳದ (Kerala) ‘ವಿಶು’ ಗೆ ಸಾಮ್ಯತೆ ಗಳಿವೆ. ಅದರಲ್ಲೂ ಕೇರಳದ ವಿಶುಕಣಿಯಲ್ಲಿ ಎಲ್ಲರ ಮನಸೊರೆಗೊಳ್ಳುವ ಒಂದು ಹೂವು (Golden shower flower) ಇಡೀ ಪೃಕೃತಿಯಲ್ಲೇ ಬಂಗಾರದ ಮಳೆಯನ್ನು ತರಿಸುತ್ತದೆ. ಕಕ್ಕೆ ಮರದ ಹೂವು ಇಡೀ ಪರಿಸರದ ಅಂದವನ್ನೇ ಇಮ್ಮಡಿಗೊಳಿಸುತ್ತದೆ.

ಕಕ್ಕೆ ಮರದ ಮೂಲ ಭಾರತ ಉಪಖಂಡವಾಗಿದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ.

Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ ವರ್ಗಕ್ಕೆ ಸೇರಿದೆ. ಕಕ್ಕೆ ಮರ ನಾಟಿ ವೈದ್ಯ ಚಿಕಿತ್ಸೆಗಾಗಿಯೂ ಬಳಕೆಯಾಗುತ್ತದೆ, ಅಲಂಕಾರಿಕ ಸಸ್ಯವೂ ಹೌದು! ಮಾರ್ಚ್‌ ತಿಂಗಳ ಕೊನೆಯಿಂದ ಮೇ ತಿಂಗಳವರೆಗೆ ಅರಳುವ ಹೂಗಳು ಕೆಲವೊಮ್ಮೆ‌ ಎಲೆಗಳನ್ನು ಮರೆಯಾಗಿಸುವಷ್ಟು ಒತ್ತಾಗಿರುತ್ತದೆ. ಬರವನ್ನು ಎದುರಿಸಿ ಬದುಕಬಲ್ಲದು ಈ ಮರ. ಈ ಮರದ ಕಾಯಿ, ಎಲೆ, ಹೂವು, ಬೇರು ಆಯುರ್ವೇದದಲ್ಲಿ ಔಷಧಿಯಾಗಿ ಬಳಕೆಯಾಗುತ್ತದೆ.

ಇದನ್ನೂ ಓದಿ: Bengaluru: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! ಜುಲೈಯೊಳಗೆ ಯೆಲ್ಲೋ ಲೈನ್‌ ಓಪನ್‌!?

ಕಕ್ಕೆ ಮರ ವನ್ನು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾಲು ಮರವಾಗಿ ನೆಡಲಾಗಿದ್ದು, ಇದೀಗ ಹೂವು ಬಿಟ್ಟು ರಸ್ತೆ ಸಂಚಾರ ಮಾಡೋದೇ ಅಹ್ಲಾದಕರವಾಗಿದೆ. ಬಿಸು ಹಬ್ಬಕ್ಕೆ ಈ ಹೂವು ಗಳಿಗೆ ಭಾರೀ ಬೇಡಿಕೆ ಇದ್ದು, ಕಕ್ಕೆ ಮರದ ಹೂವಿದ್ದರೆ ವಿಶುಕಣಿಗೆ ಮುಗುಳಿ ಇಟ್ಟಂತೆ. ರಸ್ತೆಯ ಇಕ್ಕೆಲಗಳಲ್ಲೂ ಈ ಮರದ ಹೂವು ಚಿನ್ನದಂತೆ ಹೊಳೆಯುತ್ತಿದ್ದು, ರಸ್ತೆಯ ಅಂದವನ್ನು ಹೆಚ್ಚಿಸಿದೆ.