Last Updated:
ಹಂಚಿನ ಹರಕಲು ಮುರುಕಲು ಮನೆಯನ್ನು ಸಂಪೂರ್ಣ ಕೆಡವಿ 12 ಲಕ್ಷ ರೂ. ವೆಚ್ಚದಲ್ಲಿ ಟಾಯ್ಲೆಟ್-ಬಾತ್‌ರೂಂ ಸಹಿತ 1 ಬಿಎಚ್‌ಕೆಯ (1 BHK) ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ದಕ್ಷಿಣ ಕನ್ನಡ: ಹೊಟ್ಟೆಪಾಡಿಗಾಗಿ ವಿದೇಶಕ್ಕೆ(Foreign) ತೆರಳಿ ಬದುಕು(Life) ಕಟ್ಟಿ ಕಟ್ಟಿಕೊಳ್ಳುವ ಅದೆಷ್ಟೋ ಯುವಕರು ಕರಾವಳಿಯಲ್ಲಿದ್ದಾರೆ. ಈ ಯುವಕರು ಕುಟುಂಬ ಮಾತ್ರವಲ್ಲ ತಮ್ಮ ಸುತ್ತಮುತ್ತಲಿನ ಇತರ ಬಡ ಕುಟುಂಬಗಳಿಗೂ(Poor Families) ನೆರವಾಗುತ್ತಿರುತ್ತಾರೆ. ಇಂತಹದ್ದೇ ಯುವಕರ ತಂಡವೊಂದು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಾ, ಅಲ್ಲಿಯೇ ಕ್ರಿಕೆಟ್ ತಂಡ ಕಟ್ಟಿ ಮಂಗಳೂರಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ (New House Built)ಕೊಟ್ಟಿದೆ.
ಹೌದು… ಇಸ್ರೇಲ್‌ನಲ್ಲಿರುವ ಕರಾವಳಿ ಮೂಲದ ಯುವಕರೇ ಸೇರಿ ಕಟ್ಟಿಕೊಂಡ ತಂಡ ಜೆರುಸಲೇಂ ಸ್ಟಾರ್ ಕ್ರಿಕೆಟರ್ಸ್. ಈ ತಂಡ ಕ್ರಿಕೆಟ್ ಆಡುವುದು ಮಾತ್ರವಲ್ಲ, ಈ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದೀಗ ಈ ತಂಡ ಮಂಗಳೂರಿನ ಬಳ್ಳಾಲ್‌ಬಾಗ್ ಬಳಿಯ ವಿವೇಕನಗರದ ಕೊರಗ ಕುಟುಂಬಕ್ಕೆ ಸುಂದರವಾದ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಸುಂದರಿ – ಸುಗಂಧಿ ಸಹೋದರಿಯರು ಹಾಗೂ ಇವರ ಕುಟುಂಬ ಇಂದೋ ನಾಳೆಯೋ ಬೀಳುವ ಮನೆಯಲ್ಲಿ ವಾಸವಿದ್ದರು. ಮಳೆ ಬಂದರೆ ಸಾಕು ಮಾಡು ಸೋರುತ್ತಿತ್ತು. ಮನೆ ಸಂಪೂರ್ಣ ತೊಯ್ದು ತೊಪ್ಪೆಯಾಗುತ್ತಿತ್ತು. ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್ ಮತ್ತು ಅವರ ಸಹೋದರ ಪ್ರದೀಪ್ ಸಾಲ್ಯಾನ್ ಈ ಕುಟುಂಬದ ಬಗ್ಗೆ ಜೆರುಸಲೇಂ ಸ್ಟಾರ್ ಕ್ರಿಕೆಟರ್ಸ್ ತಂಡಕ್ಕೆ ಮಾಹಿತಿ ನೀಡಿತ್ತು. ಈ ಕುಟುಂಬದ ಸಂಕಷ್ಟಕ್ಕೆ ಮರುಗಿದ ಅವರು ಮನೆ ಕಟ್ಟಿಕೊಡುವುದಕ್ಕೆ ಮುಂದಾಗಿದ್ದಾರೆ.
ಹಂಚಿನ ಹರಕಲು ಮುರುಕಲು ಮನೆಯನ್ನು ಸಂಪೂರ್ಣ ಕೆಡವಿ 12 ಲಕ್ಷ ರೂ. ವೆಚ್ಚದಲ್ಲಿ ಟಾಯ್ಲೆಟ್-ಬಾತ್‌ರೂಂ ಸಹಿತ 1 ಬಿಎಚ್‌ಕೆಯ (1 BHK) ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಸ್ಥಳೀಯರ ಕರಸೇವೆಯಲ್ಲಿ ಆರು ತಿಂಗಳಲ್ಲಿ ಸುಂದರವಾದ ಮನೆ ತಲೆಯೆತ್ತಿ ನಿಂತಿದೆ. ಗೃಹಪ್ರವೇಶವೂ ನಡೆದು ಮನೆಮಂದಿ ಮನೆಯಲ್ಲಿ ಸಂತೋಷದಿಂದ ವಾಸ್ತವ್ಯ ಹೂಡಿದ್ದಾರೆ. ಒಟ್ಟಿನಲ್ಲಿ ಊರು ಬಿಟ್ಟು ಪರ ಊರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದರೂ ಈ ಯುವಕರ ತಾಯ್ನೆಲದ ಬಡಜನತೆಯ ಬಗೆಗಿನ ಕಾಳಜಿ ನಿಜಕ್ಕೂ ಶ್ಲಾಘನೀಯ.
Dakshina Kannada,Karnataka
April 13, 2025 1:26 PM IST