Last Updated:
ವಾಜಪೇಯಿ ಕೇವಲ ಬಿಜೆಪಿ ಮುಖಂಡ ಮಾತ್ರವಲ್ಲ, ಉತ್ತಮ ಸಂಸದೀಯ ಪಟು ಕೂಡಾ ಆಗಿದ್ದರು. ಈ ವಿಚಾರ ಇಂದಿನ ಮಕ್ಕಳಿಗೆ ತಿಳಿದಿಲ್ಲ ಎನ್ನುವ ಕಾರಣಕ್ಕೆ ಪಕ್ಷ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಪುತ್ತೂರು: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ (Atal Bihari Vajpayee) ಜನ್ಮ ಶತಾಬ್ಧಿ ಅಂಗವಾಗಿ ಬಿಜೆಪಿ ಪಕ್ಷ (BJP Party) ರಾಷ್ಟ್ರದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಜೀವಿತಾವಧಿಯಲ್ಲಿ ಎಲ್ಲೆಲ್ಲಾ ಭೇಟಿ ನೀಡಿದ್ದರು, ಯಾರನ್ನು ಭೇಟಿ ಮಾಡಿದ್ದರು, ಅವರನ್ನೆಲ್ಲಾ ಗುರುತಿಸುವ (Leaders) ಕಾರ್ಯಕ್ರಮ ಇವುಗಳಲ್ಲಿ ಒಂದಾಗಿದೆ.
ಹಿರಿಯ ಮುಖಂಡರನ್ನು ಭೇಟಿ ಮಾಡಿ ಗೌರವಾರ್ಪಣೆ
ದೇಶದಾದ್ಯಂತ ನಡೆಯುವ ಈ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಚಾಲನೆ ದೊರೆತಿದೆ. ಬಿಜೆಪಿ ಮತ್ತು ಹಿಂದುತ್ವದ ಶಕ್ತಿಕೇಂದ್ರ ಎಂದು ಗುತುತಿಸಲಾಗಿರುವ ಪುತ್ತೂರಿನಲ್ಲಿ ಜನಸಂಘದ ಕಾಲದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹಲವು ಮುಖಂಡರಿದ್ದಾರೆ. ಈ ಕಾರಣಕ್ಕಾಗಿಯೇ ಅಂತಹ ಹಿರಿಯ ಮುಖಂಡರನ್ನು ಭೇಟಿ ಮಾಡಿ, ಗೌರವಾರ್ಪಣೆ ಸಲ್ಲಿಸುವುದು ಈ ಭೇಟಿಯ ಹಿಂದಿನ ಉದ್ದೇಶವಾಗಿದೆ.
ದೇಶದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಮಟ್ಟಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಪುತ್ತೂರಿಗೆ ಸಂಬಂಧಿಸಿದಂತೆ ಪುತ್ತೂರು ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಳ ಈ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಈಗಾಗಲೇ 6 ಮಂದಿ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಸನ್ಮಾನಿಸಿದ್ದು, ಇನ್ನೂ ಹಲವರನ್ನು ಸನ್ಮಾನಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಮನೆ ಮನೆಗೆ ತೆರಳುವ ಕಾರ್ಯಕ್ರಮ
ಪುತ್ತೂರಿಗೆ ವಾಜಪೇಯಿ ಸರಿ ಸುಮಾರು ಎರಡು ಬಾರಿ ಭೇಟಿ ನೀಡಿದ್ದು, ಈ ಎರಡು ಬಾರಿಯೂ ಪುತ್ತೂರಿನ ಕೆಲವು ಪ್ರಮುಖ ಮುಖಂಡರನ್ನು ಭೇಟಿಯಾಗಿದ್ದರು. ಆ ಮುಖಂಡರನ್ನು ಇದೀಗ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂತಹ ಮುಖಂಡರ ಮನೆಗೆ ತೆರಳಿ ಈ ಗೌರವವನ್ನು ಸಲ್ಲಿಸಲಾಗುತ್ತಿದೆ.
ಕರ್ನಾಟಕದಲ್ಲಿ ಮೊದಲಿಗೆ ಪುತ್ತೂರಿನಲ್ಲಿ ಆರಂಭ
ಪ್ರತಿ ಜಿಲ್ಲೆ, ತಾಲೂಕು ಮತ್ತು ಜಿಲ್ಲೆಯ ಪಕ್ಷದ ಜವಾಬ್ದಾರಿ ಹೊತ್ತ ಪದಾಧಿಕಾರಿಗಳು ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಸೂಚನೆಯೂ ಪಕ್ಷದ ವರಿಷ್ಠರಿಂದ ರವಾನೆಯಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರೂ ಈ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮದ ಯಶಸ್ವಿಗಾಗಿ ದುಡಿಯುತ್ತಿದ್ದಾರೆ.
ಇದನ್ನೂ ಓದಿ: Mysuru: ರೈತನ ಜಮೀನು ಕಾಯಲು ಬಂದ ಮೈ ಬಳುಕಿಸುವ ನಟಿಯರು; ವರ್ಕ್ ಆಗುತ್ತಾ ಯುವಕನ ಪ್ಲ್ಯಾನ್?
ವಾಜಪೇಯಿ ಕೇವಲ ಬಿಜೆಪಿ ಮುಖಂಡ ಮಾತ್ರವಲ್ಲ, ಉತ್ತಮ ಸಂಸದೀಯ ಪಟು ಕೂಡಾ ಆಗಿದ್ದರು. ಈ ವಿಚಾರ ಇಂದಿನ ಮಕ್ಕಳಿಗೆ ತಿಳಿದಿಲ್ಲ ಎನ್ನುವ ಕಾರಣಕ್ಕೆ ಪಕ್ಷ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪುತ್ತೂರು ಬಿಜೆಪಿ ನಗರ ಮಂಡಲದ ವತಿಯಿಂದ ಈಗಾಗಲೇ 6 ಮಂದಿಯನ್ನು ಸನ್ಮಾನಿಸಲಾಗಿದ್ದು, ಇನ್ನೂ ಹಲವರ ಪಟ್ಟಿ ಸಿದ್ಧವಾಗಿದೆ. ಅದೇ ರೀತಿ ಪುತ್ತೂರು ಗ್ರಾಮಾಂತರ ವ್ಯಾಪ್ತಿಯಲ್ಲಿಯೂ ಇದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಾಜಪೇಯಿ ಅವರನ್ನು ಪುತ್ತೂರಿನಲ್ಲಿ ಅಥವಾ ಅವರಿದ್ದ ಕಡೆ ಭೇಟಿಯಾಗಿರುವ ಎಲ್ಲರನ್ನೂ ಪಕ್ಷ ಗೌರವಿಸಲು ನಿರ್ಧರಿಸಿದ್ದು, ಪುತ್ತೂರಿನಲ್ಲಿ ಈ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ.
Puttur,Dakshina Kannada,Karnataka
February 23, 2025 1:07 PM IST