Dakshina Kannada: ರೇಸ್ ಡ್ರೈವಿಂಗ್ ಅಭಿರುಚಿ- ನರ್ಸರಿ ಜಾಗದಲ್ಲೇ ಟ್ರ್ಯಾಕ್ ನಿರ್ಮಿಸಿ ಎಂಜಾಯ್ ಮಾಡುತ್ತಿರುವ ಜಾಕ್ ಅನಿಲ್! | Dakshina Kannada: Race driving hobby – Jack Anil is enjoying building a track in his nursery!

Dakshina Kannada: ರೇಸ್ ಡ್ರೈವಿಂಗ್ ಅಭಿರುಚಿ- ನರ್ಸರಿ ಜಾಗದಲ್ಲೇ ಟ್ರ್ಯಾಕ್ ನಿರ್ಮಿಸಿ ಎಂಜಾಯ್ ಮಾಡುತ್ತಿರುವ ಜಾಕ್ ಅನಿಲ್! | Dakshina Kannada: Race driving hobby – Jack Anil is enjoying building a track in his nursery!

Last Updated:

ಇವರಿಗೆ ಕಾರು ರೇಸ್ ನ ಹವ್ಯಾಸ ಇರುವ ಕಾರಣ ತನ್ನದೇ ತೋಟದ ಮಧ್ಯೆ ರೇಸ್ ಗಾಗಿ ಟ್ರ್ಯಾಕ್ ಕೂಡಾ ಸಿದ್ಧ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಳಕೆಮಜಲಿನಲ್ಲಿ ಕಳೆದ 25 ವರ್ಷಗಳಿಂದ ಹಲಸಿನ ಗಿಡಗಳ ನರ್ಸರಿ ಪ್ರಾರಂಭಿಸಿರುವ ಜಾಕ್ ಅನಿಲ್ ನರ್ಸರಿ‌ ಜೊತೆ ಜೊತೆಗೆ ಕಾರ್ ರೇಸ್ ಚಾಲನೆಯನ್ನೂ ಮಾಡುತ್ತಿದ್ದರು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಇವರದು ಹಲಸು ಗಿಡಗಳ(Jackfruit Plants) ವಿವಿಧ ತಳಿಗಳನ್ನು ಉಳಿಸಿ ಬೆಳೆಸುವ, ಮಾರಾಟ ಮಾಡುವ ಕಾಯಕ. ಜಾಕ್ ಅನಿಲ್ ಎಂದೇ ಹೆಸರುವಾಸಿಯಾಗಿದ್ದಾರೆ. ಇವರು ಕಸಿ ಮಾಡಿದ ಗಿಡಗಳು ದೇಶದ ಬಹುತೇಕ ಎಲ್ಲಾ ತೋಟಗಳಲ್ಲೂ(Garden) ಇವೆ. ಇಷ್ಟು ಫೇಮಸ್ ಆಗಿರುವ ಜಾಕ್ ಅನಿಲ್ ತಮ್ಮ ಬಿಡುವಿನ ವೇಳೆಯನ್ನು ತಮ್ಮದೇ ಆಸಕ್ತಿಯ ವಿಷಯದಲ್ಲಿ ಕಳೆಯುತ್ತಾರೆ.

ಹೌದು, ಇವರಿಗೆ ಕಾರು ರೇಸ್ ನ ಹವ್ಯಾಸ ಇರುವ ಕಾರಣ ತನ್ನದೇ ತೋಟದ ಮಧ್ಯೆ ರೇಸ್ ಗಾಗಿ ಟ್ರ್ಯಾಕ್ ಕೂಡಾ ಸಿದ್ಧ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಳಕೆಮಜಲಿನಲ್ಲಿ ಕಳೆದ 25 ವರ್ಷಗಳಿಂದ ಹಲಸಿನ ಗಿಡಗಳ ನರ್ಸರಿ ಪ್ರಾರಂಭಿಸಿರುವ ಜಾಕ್ ಅನಿಲ್ ನರ್ಸರಿ‌ ಜೊತೆ ಜೊತೆಗೆ ಕಾರ್ ರೇಸ್ ಚಾಲನೆಯನ್ನೂ ಮಾಡುತ್ತಿದ್ದರು. ಆದರೆ ಯಾವುದೇ ಸ್ಪರ್ಧೆಗಾಗಿ ಅನಿಲ್ ಈ ರೀತಿ ಮಾಡದೆ ತನ್ನ ಅಭಿರುಚಿಗಾಗಿ ಈ ಚಾಲನೆ ಮಾಡುತ್ತಿದ್ದಾರೆ. ಇದೀಗ ಹೊಚ್ಚ ಹೊಸ ಥಾರ್ ಫೋರ್ ವೀಲ್ಹ್ ಜೀಪ್ ಖರೀದಿಸಿ ಅದರಲ್ಲೂ ತನ್ನ ಆಸಕ್ತಿಯ ರೇಸಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Scorpio: ವೃಶ್ಚಿಕ ರಾಶಿಯವರಿಗೆ ಯುಗಾದಿ ಸಂವತ್ಸರದ ಗೋಚರ ಫಲಗಳೇನು?

ಅಳಕೆಮಜಲಿನ ನಿನ್ನಿಕಲ್ಲು ಎಂಬಲ್ಲಿ ಸುಮಾರು 6 ಎಕರೆ ಜಾಗದಲ್ಲಿ ನರ್ಸರಿಯ ಜೊತೆಗೆ ತನಗೆ ರೇಸ್ ಮಾಡಲು ಬೇಕಾದ ಸಣ್ಣದೊಂದು ಟ್ರ್ಯಾಕ್ ಕೂಡಾ ನಿರ್ಮಿಸಿದ್ದಾರೆ. ಅಲ್ಲಲ್ಲಿ ಹೊಂಡಗಳು, ಏರು ಮತ್ತು ಇಳಿಜಾರುಗಳನ್ನು ನಿರ್ಮಿಸಿದ್ದು, ಒಂದು ವಿಧದಲ್ಲಿ ಈ ಹೊಂಡಗಳಲ್ಲಿ ಮಳೆಗಾಲದಲ್ಲಿ ನೀರಿನ ಶೇಖರಣೆಯಾದರೆ, ಉಳಿದ ಸಮಯದಲ್ಲಿ ರೇಸ್ ಗೂ ಈ ಹೊಂಡಗಳು ಬಳಕೆಯಾಗುವಂತೆ ವ್ಯವಸ್ಥೆ ಮಾಡಿದ್ದಾರೆ.

ಯಾವುದೇ ನುರಿತ ರೇಸ್ ಚಾಲಕನಿಗೂ ಠಕ್ಕರ್ ನೀಡುವ ಚಾಕಚಕ್ಯತೆಯ ಚಾಲನೆ ಮಾಡುವ ಅನಿಲ್, ತನ್ನ ಡ್ರೈವಿಂಗ್ ಸ್ಕಿಲ್‌ನ್ನು ತನ್ನ ಜಾಗದ ಹೊರಗೆ ಎಂದಿಗೂ ತೋರಿಸಿಲ್ಲ. ಸ್ಥಳೀಯವಾಗಿ ನಡೆಯುವ ರೇಸ್ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಹಲವು ಆಫರ್ ಗಳು ಅನಿಲ್‌ಗೆ ಬಂದರೂ, ಎಲ್ಲವನ್ನೂ ನಯವಾಗಿ ತಿರಸ್ಕರಿಸಿದ್ದಾರೆ. ರೇಸ್‌ ಡ್ರೈವಿಂಗ್ ನನ್ನ ಅಭಿರುಚಿಯಾಗಿದ್ದು, ಇದನ್ನು ಸ್ಪರ್ಧೆಗಾಗಿ‌ ಬಳಸುವ ಆಸಕ್ತಿ ತಮಗಿಲ್ಲ ಎನ್ನುತ್ತಾರೆ ಜಾಕ್‌ ಅನಿಲ್..