Dakshina Kannada: ವಿಚಿತ್ರ ನಿಯಮ ಹೇರಿಕೊಂಡು ಕ್ರಿಕೆಟ್‌ ಆಡುವ ಕರಾವಳಿಯ ತಂಡ- ಆ ಕಂಡೀಷನ್‌ ಏನು ಗೊತ್ತಾ? | Cricket Competition at Dakshina Kannada Puttur with Weird Rule

Dakshina Kannada: ವಿಚಿತ್ರ ನಿಯಮ ಹೇರಿಕೊಂಡು ಕ್ರಿಕೆಟ್‌ ಆಡುವ ಕರಾವಳಿಯ ತಂಡ- ಆ ಕಂಡೀಷನ್‌ ಏನು ಗೊತ್ತಾ? | Cricket Competition at Dakshina Kannada Puttur with Weird Rule

Last Updated:

ಸ್ಥಳೀಯ ಕ್ರಿಕೆಟ್ ಆಟಗಾರರನ್ನು ಉತ್ತೇಜಿಸಲು ಹಳ್ಳಿ ಹುಡುಗರ ಪೇಟೆ ಕಪ್ ಎನ್ನುವ ಟ್ಯಾಗ್ ಲೈನ್‌ನಲ್ಲಿ ನೀಡಲಾಗುವ ಅಮರ್ ಅಕ್ಬರ್ ಅಂಟೋನಿ ರೋಲಿಂಗ್ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಇಂದಿಗೆ‌ ಹದಿನಾಲ್ಕು ವರ್ಷಗಳ ಇತಿಹಾಸ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಕ್ರಿಕೆಟ್(Cricket) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಸ್ಥಳೀಯವಾಗಿ ಆಡುವ ಕ್ರಿಕೆಟ್ ಆಟವನ್ನು ನೋಡೋದೇ ಒಂದು ರೀತಿಯ ಖುಷಿ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲೂ(Puttur) ಇಂತಹುದೇ ಒಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯುತ್ತೆ. ಕಳೆದ ಹದಿನಾಲ್ಕು ವರ್ಷಗಳಿಂದ ಈ ಪಂದ್ಯಾಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಪಂದ್ಯಾಟದಲ್ಲಿ ಭಾಗವಹಿಸುವ ಯಾವುದಾದರೂ ತಂಡ ಮೂರು ವರ್ಷ ಸತತವಾಗಿ ಗೆದ್ದುಕೊಂಡು ಚಾಂಪಿಯನ್(Champion) ಆದಲ್ಲಿ ಈ ಪಂದ್ಯಾಟ(Competition) ಅಂದಿಗೇ ನಿಂತುಹೋಗಲಿದೆ.

ಕಳೆದ 14 ವರ್ಷಗಳಿಂದ ನಡೆಯುತ್ತಿರುವ ಪಂದ್ಯಾಟ

ಹೌದು, ಇಂತಹುದೊಂದು ವಿಚಿತ್ರ ನಿಯಮವನ್ನು ಹಾಕಿಕೊಂಡು ನಡೆಸುವ ಕ್ರಿಕೆಟ್ ಪಂದ್ಯಾಟವಿದು. ಪುತ್ತೂರಿನ ಸಿಟಿ ಫ್ರೆಂಡ್ಸ್ ಆರ್ಟ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಕ್ಲಾಸಿಕ್ ಫ್ರೆಂಡ್ಸ್ ಸೌದಿ ಅರೇಬಿಯಾ, ಯಂಗ್ ಗೈಸ್ಸ್ ಅಬುಧಾಬಿ ಮತ್ತು ಅಮರ್ ಅಕ್ಬರ್ ಅಂಟೋನಿ ಫ್ರೆಂಡ್ಸ್ ಬೆಂಗಳೂರು ಸಂಘಟನೆಗಳು ಸೇರಿಕೊಂಡು ಈ ಪಂದ್ಯಾಟವನ್ನು ಪುತ್ತೂರಿನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿವೆ. ಸ್ಥಳೀಯ ಕ್ರಿಕೆಟ್ ಆಟಗಾರರನ್ನು ಉತ್ತೇಜಿಸಲು ಹಳ್ಳಿ ಹುಡುಗರ ಪೇಟೆ ಕಪ್ ಎನ್ನುವ ಟ್ಯಾಗ್ ಲೈನ್‌ನಲ್ಲಿ ನೀಡಲಾಗುವ ಅಮರ್ ಅಕ್ಬರ್ ಅಂಟೋನಿ ರೋಲಿಂಗ್ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಇಂದಿಗೆ‌ ಹದಿನಾಲ್ಕು ವರ್ಷಗಳ ಇತಿಹಾಸ.

ಇದನ್ನೂ ಓದಿ: Aries Yearly Horoscope 2025: ಮುಂದಿನ ವರ್ಷ ಮೇಷ ರಾಶಿಯವರ ಭವಿಷ್ಯ ಹೇಗಿರಲಿದೆ?

3 ವರ್ಷ ಒಂದೇ ತಂಡ ಗೆದ್ದರೆ ಅಂದಿಗೇ ಪಂದ್ಯಾಟ ನಿಲ್ಲುತ್ತೆ

ಸಮಾಜದಲ್ಲಿ ಸೌಹಾರ್ದತೆಯನ್ನು‌ ನೆಲೆಸುವ ನಿಟ್ಟಿನಲ್ಲಿ ಎಲ್ಲಾ ಜಾತಿ, ಧರ್ಮಗಳನ್ನು ಮೀರಿ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಸುಮಾರು 5 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯುವ ಈ ಪಂದ್ಯಾಟದಲ್ಲಿ 80 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುತ್ತವೆ. ಆದರೆ ಈ ಪಂದ್ಯಾಟದಲ್ಲಿ ಒಂದೇ ತಂಡ ಸತತ ಮೂರು ವರ್ಷಗಳ ಕಾಲ ಗೆದ್ದು ಪ್ರಶಸ್ತಿ ಪಡೆದುಕೊಂಡಲ್ಲಿ ಅಲ್ಲಿಗೇ ಈ ಅಮರ್ ಅಕ್ಬರ್ ಅಂಟೋನಿ ಪಂದ್ಯಾಟ ನಿಂತು‌ಹೋಗಲಿದೆ.

ಮತ್ತೆ ಕ್ರಿಕೆಟ್‌ ನೋಡುವ ಅವಕಾಶ

ಇಂತಹ ನಿಯಮವನ್ನು ಹೇರಿಕೊಂಡು‌ ಈ‌‌ ಕ್ರಿಕೆಟ್ ಸಂಘಟಕರು ಈ ಪಂದ್ಯಾಟವನ್ನು ಆರಂಭಿಸಿದ್ದರು. ಕಳೆದ ಎರಡು ವರ್ಷದ ಪಂದ್ಯಾಟದಲ್ಲಿ‌ ಬಂಟ್ವಾಳದ ಯಂಗ್ ಫ್ರೆಂಡ್ಸ್ ವಾಮದಪದವು ಎನ್ನುವ ತಂಡ ಪ್ರಶಸ್ತಿಯನ್ನು ಗೆದ್ದಿತ್ತು. 2023 ರಲ್ಲಿ ಮತ್ತೆ ಇದೇ ತಂಡ ಫೈನಲ್ ತನಕ ಪ್ರವೇಶಿಸಿತ್ತು. ಆ ವರ್ಷಕ್ಕೆ ಪಂದ್ಯಾಟ ನಿಂತು‌ಹೋಗುತ್ತದೆ ಎನ್ನುವ ಆತಂಕದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಪಂದ್ಯಾಟ ನೋಡುವ ಅವಕಾಶ ಲಭಿಸಿದೆ.

ಮುಂದಿನ 2 ವರ್ಷ ನಡೆಯುವ ಪಂದ್ಯಾಟ

ಫೈನಲ್ ಪಂದ್ಯಾಟದಲ್ಲಿ ಯಂಗ್ ಫ್ರೆಂಡ್ಸ್ ವಾಮದಪದವು‌ ತಂಡವನ್ನು ಪುತ್ತೂರಿನ ಎನ್.ಎಫ್.ಸಿ ಕುಂಬ್ರ ಎನ್ನುವ ತಂಡ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಕಾರಣಕ್ಕಾಗಿ ಅಮರ್ ಅಕ್ಬರ್ ಅಂಟೋನಿ ಪಂದ್ಯಾಟ ಈ ಬಾರಿಯೂ ಜೀವಂತವಾಗಿರುವಂತಾಗಿದೆ. ಇದರಿಂದಾಗಿ ಮುಂದಿನ ಎರಡು ವರ್ಷಗಳ ಕಾಲ ಈ ಪಂದ್ಯಾಟ ನಿರಾತಂಕವಾಗಿ ನಡೆಯಲಿದೆ.