Dakshina Kannada: ವೃತ್ತಿಯಲ್ಲಿ ಪ್ರಸಿದ್ಧ ವೈದ್ಯೆ! ಫ್ಯಾಶನ್ ಶೋನಲ್ಲಿ 17 ದೇಶಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕರಾವಳಿಯ ಸುಂದರಿ! | AJ Hospital and Athena Hospital Dr Nikita Shettian Fernandes crowned Mrs International Independent

Dakshina Kannada: ವೃತ್ತಿಯಲ್ಲಿ ಪ್ರಸಿದ್ಧ ವೈದ್ಯೆ! ಫ್ಯಾಶನ್ ಶೋನಲ್ಲಿ 17 ದೇಶಗಳನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕರಾವಳಿಯ ಸುಂದರಿ! | AJ Hospital and Athena Hospital Dr Nikita Shettian Fernandes crowned Mrs International Independent

Last Updated:

ರ್ಯಾಂಪ್‌ ವಾಕ್‌ ಅಲ್ಲದೆ ಸ್ಪರ್ಧಿಗಳು ವಿವಿಧ ರೀತಿಯ ಸ್ಪರ್ಧೆಗಳನ್ನು ಎದುರಿಸಬೇಕಿತ್ತು. ಜೊತೆಗೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣಗಳನ್ನು ಗಮನಿಸಲಾಗುತ್ತಿತ್ತು. ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಬೇಕಿತ್ತು.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ವೈದ್ಯರು (Doctors) ಬರೀ ರೋಗಿಗಳ ಕಾಳಜಿಯಲ್ಲಿಯೇ ಕಾಲ ಕಳೆಯುತ್ತಿರುತ್ತಾರೆ. ರೋಗಿಗಳ ಉಪಚಾರದ ಅವಸರದಲ್ಲಿರುವ ವೈದ್ಯರಿಗೆ ಬಿಡುವೆಂಬುದೇ ಇಲ್ಲ. ಆದರೆ ಮಂಗಳೂರಿನ (Mangaluru) ಪ್ರಸೂತಿ ತಜ್ಞೆಯೊಬ್ಬರು (Obstetrician) ಬಿಡುವಿಲ್ಲದ ಬಿಡುವಿನ ನಡುವೆಯೂ ಸೌಂದರ್ಯ ಪ್ರಜ್ಞೆ (Sense of beauty) ಬೆಳೆಸಿ, ವಿದೇಶದಲ್ಲಿ ರ್ಯಾಂಪ್‌ ವಾಕ್ (Ramp walk) ಮಾಡಿ ಫಸ್ಟ್ ರನ್ನರ್‌ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಹೌದು… ಎ.ಜೆ.ಆಸ್ಪತ್ರೆ ಹಾಗೂ ಅಥೆನಾ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆಯಾಗಿರುವ ಡಾ.ನಿಕಿತಾ ಶೆಟ್ಟಿಯಾನ್ ಫರ್ನಾಂಡೀಸ್ ಮಿಸೆಸ್ ಇಂಟರ್‌ನ್ಯಾಷನಲ್ ಇಂಡಿಪೆಂಡೆಂಟ್‌ ಕಿರೀಟ ಮುಡಿಗೇರಿಸಿಕೊಂಡ ವೈದ್ಯೆ. ಫಿಲಿಪೈನ್ಸ್‌ನಲ್ಲಿ ನಡೆದ ಪೆಜೆಂಟ್‌ನಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು. ಫ್ರಾನ್ಸ್, ಸ್ವಿಟ್ಜರ್‌ಲೆಂಡ್, ರಷ್ಯಾ, ಬೆಲ್ಜಿಯಂ ಸೇರಿದಂತೆ 17ದೇಶಗಳ 25ರಷ್ಟು ಸ್ಪರ್ಧಿಗಳು ಈ ಪೆಜೆಂಟ್‌ನಲ್ಲಿ ಭಾಗವಹಿಸಿದ್ದರು.

ಬರೀ ರ್ಯಾಂಪ್‌ ವಾಕ್‌ ಅಲ್ಲದೆ ಸ್ಪರ್ಧಿಗಳು ವಿವಿಧ ರೀತಿಯ ಸ್ಪರ್ಧೆಗಳನ್ನು ಎದುರಿಸಬೇಕಿತ್ತು. ಜೊತೆಗೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣಗಳನ್ನು ಗಮನಿಸಲಾಗುತ್ತಿತ್ತು. ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಬೇಕಿತ್ತು. ಇದೆಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದ ಡಾ.ನಿಕಿತಾ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಯಲ್ಲಿ ಮಿಂಚಿದ್ದರು. ಶಿಲಾ ಬಾಲಿಕೆಯಂತಹ ಇವರ ವಿಶಿಷ್ಟ ಉಡುಪಿನಲ್ಲಿ ರಾಷ್ಟ್ರೀಯ ಪಕ್ಷಿ ನವಿಲು, ರಾಷ್ಟ್ರೀಯ ಹೂ ತಾವರೆ, ರಾಷ್ಟ್ರೀಯ ಲಾಂಛನ ಸಿಂಹ, ಕೊನಾರ್ಕ್ ಸೂರ್ಯ ದೇವಾಲಯದ ಚಕ್ರ, ಹಿಮಾಲಯ, ಶಂಖಗಳನ್ನು ಅಳವಡಿಸಲಾಗಿತ್ತು. ಈ ಉಡುಪಿಗೆ ಅವರಿಗೆ ಬೆಸ್ಟ್ ನ್ಯಾಷನಲ್ ಅವಾರ್ಡ್ ದೊರಕಿದೆ.

ಇದನ್ನೂ ಓದಿ: Bengaluru: ಅಪಾರ್ಟ್​ಮೆಂಟ್​ಗಳಲ್ಲಿ ವಾಸಿಸುವವರಿಗೆ BWSSB ಬಿಗ್ ಶಾಕ್! ನೀವು ಈ ಸುದ್ದಿ ಓದಲೇಬೇಕು

ಇಬ್ಬರು ಮಕ್ಕಳ ತಾಯಿಯಾದ ಡಾ.ನಿಕಿತಾ ವೈದ್ಯ ವೃತ್ತಿಯಲ್ಲಿಯೇ ಮುಳುಗಿದ್ದರು‌. ಆದರೆ 2023ರಲ್ಲಿ ಪಾತ್‌ವೇ ಮಾಡಲಿಂಗ್ ಸಂಸ್ಥೆ ನಡೆಸಿದ ಡಾಕ್ಟರ್ಸ್‌ ರ್ಯಾಂಪ್ ವಾಕ್ ಇವರ ಜೀವನದ ದಿಕ್ಕನ್ನೇ ಬದಲಿಸಿತು. ಆ ಬಳಿಕ ಇವರು ವಿವಿಧ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿ, ಫಿಲಿಪೈನ್ಸ್‌ನ ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ‌ ರ್ಯಾಂಪ್‌ ವಾಕ್ ಮಾಡಲು ಸಹಕಾರಿಯಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಡಾ.ನಿಕಿತಾ ಮಿಸೆಸ್ ಇಂಡಿಯಾ ಕೆಟಗರಿಯಲ್ಲಿ ಮಂಗಳೂರಿನಿಂದ ಅಂತಾರಾಷ್ಟ್ರೀಯ ಫ್ಯಾಶನ್ ಶೋನಲ್ಲಿ ಭಾಗಿವಹಿಸಿ ಕಿರೀಟ ಮುಡಿಗೇರಿಸಿರುವುದು ಮಂಗಳೂರಿಗರಿಗೆ ಹೆಮ್ಮೆಯಾಗಿದೆ.