Dakshina Kannada: ವೈಕುಂಠ ಏಕಾದಶಿಯಲ್ಲಿ ಗಮನ ಸೆಳೆದ ಸೊಪ್ಪುಗಳ ಅಲಂಕಾರ! | Vaikunta Ekadasi celebrated at Dakshina Kannada

Dakshina Kannada: ವೈಕುಂಠ ಏಕಾದಶಿಯಲ್ಲಿ ಗಮನ ಸೆಳೆದ ಸೊಪ್ಪುಗಳ ಅಲಂಕಾರ! | Vaikunta Ekadasi celebrated at Dakshina Kannada

Last Updated:

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ಮಹತ್ವವಾದದ್ದು. ಈ ದಿನದಂದು ವೈಕುಂಠದ ಬಾಗಿಲು ತೆರೆಯುತ್ತದೆ ದಿನ ಎಂಬ ಪ್ರತೀತಿ ಇರುವುದರಿಂದ ವಿಷ್ಣು ದೇವರ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ವೈಕುಂಠ ಏಕಾದಶಿಯನ್ನು(Vaikunta Ekadasi) ಕಡಲ ನಗರಿ ಮಂಗಳೂರಿನಲ್ಲಿ(Mangaluru) ಈ ಬಾರಿ ಅತ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗಿದೆ.‌ ನಗರದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ರಾತ್ರಿಯಿಂದಲೇ ಹಬ್ಬದ ವಾತಾವರಣ ಮನೆ ಮಾಡಿತ್ತು. ಈ ಬಾರಿ ಧಾರ್ಮಿಕ ಆಚರಣೆಯ ಜೊತೆಗೆ ಸಾರ್ವಜನಿಕರಿಗೆ ಸಾವಯವ ತರಕಾರಿಗಳನ್ನು(Organic Vegetables) ಬೆಳೆಸಲು ಉತ್ತೇಜನವನ್ನೂ ಈ ಆಚರಣೆಯ ಮೂಲಕವೇ ನೀಡಲಾಗಿದೆ.

ಮಂಗಳೂರಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನವು ವೈಕುಂಠ ಏಕಾದಶಿಯ ಹಿನ್ನಲೆಯಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಮುಂಜಾನೆಯಿಂದಲೇ ಶ್ರೀ ವೆಂಕಟರಮಣ ದೇವರಿಗೆ ವಿಶೇಷ ಪೂಜಾ ಪುನಸ್ಕಾರಗಳು ಆರಂಭಗೊಂಡು ರಾತ್ರಿವರೆಗೂ ದೇವರ ನಾಮಸ್ಮರಣೆ ನಡೆದಿದೆ. ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ಮಹತ್ವವಾದದ್ದು. ಈ ದಿನದಂದು ವೈಕುಂಠದ ಬಾಗಿಲು ತೆರೆಯುತ್ತದೆ ದಿನ ಎಂಬ ಪ್ರತೀತಿ ಇರುವುದರಿಂದ ವಿಷ್ಣು ದೇವರ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ದಿನ ವಿಷ್ಣು ದೇವಾಲಯಗಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: Traffic Awareness: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಟ್ರಾಫಿಕ್‌ ಬಗ್ಗೆ ಅರಿವು ಮೂಡಿಸಿದ ಪೋರ!

ಈ ಬಾರಿ ಈ ಕ್ಷೇತ್ರದಲ್ಲಿ ದೇವರ ನಾಮಸ್ಮರಣೆಯ ಜೊತೆಗೆ ಸಾವಯವ ಬೆಳೆಗಳನ್ನು ಬೆಳೆಸಲು ಉತ್ತೇಜನ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರವನ್ನು ಈ ಬಾರಿ ಹೂವಿನ ಅಲಂಕಾರಕ್ಕಿಂತ ಸಾವಯವ ರೀತಿಯಲ್ಲಿ ಬೆಳೆದ ಸೊಪ್ಪು ತರಕಾರಿಗಳ ಮೂಲಕವೇ ಶೃಂಗರಿಸಲಾಗಿತ್ತು. ಸುಮಾರು 12 ಸಾವಿರ ಸೊಪ್ಪಿನ ತರಕಾರಿಗಳನ್ನು ಕ್ಷೇತ್ರದ ತುಂಬಾ ಜೋಡಿಸಲಾಗಿತ್ತು. ಏಕಾದಶಿ ಮಹಾಪೂಜೆ ನೆರವೇರಿದ ಬಳಿಕ ಈ ಸೊಪ್ಪನ್ನು ಭಕ್ತರಿಗೆ ಹಂಚುವ ವ್ಯವಸ್ಥೆಯನ್ನೂ ಮಾಡಲಾಗಿದೆ‌.

ಅಲ್ಲದೆ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ದೇವರ ಪ್ರಸಾದದ ಜೊತೆಗೆ ಹರಿವೆ, ಪಾಲಕ್,ತುಳಸಿ, ಬೆಂಡೆ, ಅಲಸಂದೆ ಹೀಗೆ ವಿವಿಧ ರೀತಿಯ ತರಕಾರಿ ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಭಕ್ತರೇ ಈ ತರಕಾರಿಗಳನ್ನು ಸಂಪೂರ್ಣ ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆದಿದ್ದು, ತಾವು ಬೆಳೆದ ಸೊಪ್ಪು ತರಕಾರಿಗಳನ್ನು ಕ್ಷೇತ್ರದ ತುಂಬಾ ಅಲಂಕಾರದ ರೂಪದಲ್ಲಿ ಜೋಡಿಸಿಡುವ ಮೂಲಕ ಗಮನಸೆಳೆದಿದ್ದಾರೆ. ಶುಕ್ರವಾರ ಮುಂಜಾನೆಯಿಂದಲೇ ಭಾರೀ ಸಂಖ್ಯೆಯ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು.