Last Updated:
ಮಕ್ಕಳಿಗಾಗಿ ಆಟದ ಮೈದಾನ, ಉದ್ಯಾನವನ ಹೀಗೆ ಯಾವ ಖಾಸಗಿ ಶಾಲೆಗೂ ಕಮ್ಮಿಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಂದು ಕಾಲದಲ್ಲಿ ಇಲ್ಲಿನ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಇದೀಗ ಮಕ್ಕಳ ಸಂಖ್ಯೆ ಸುಮಾರು 125 ಏರಿದೆ.
ದಕ್ಷಿಣ ಕನ್ನಡ: ಖಾಸಗಿ ಶಾಲೆಗಳೆಂದರೆ(Private Schools) ಪೋಷಕರಿಗೆ(Parents) ಏನೋ ಒಂದು ರೀತಿಯ ವ್ಯಾಮೋಹ. ಈ ವ್ಯಾಮೋಹದ ಕಾರಣಕ್ಕಾಗಿ ಸರಕಾರಿ ಕನ್ನಡ ಶಾಲೆಗಳ ನಿರ್ಲಕ್ಷ್ಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಈ ಗ್ರಾಮದ ಜನ(Village People) ಮಾತ್ರ ಅದೆಷ್ಟೇ ಸಮಸ್ಯೆ ಬಂದರೂ,ತಮ್ಮ ಗ್ರಾಮದ ಸರಕಾರಿ ಶಾಲೆಯನ್ನು ಮುಚ್ಚಲು ಬಿಡಲಿಲ್ಲ. ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದ ಈ ಶಾಲೆಗೆ ಊರಿನ ಜನ ಮತ್ತು ದಾನಿಗಳು ಸೇರಿ ಎಲ್ಲಾ ಕೊರತೆಗಳನ್ನು ನೀಗಿಸಿ ಸ್ಮಾರ್ಟ್ ಶಾಲೆಯನ್ನಾಗಿ(Smart School) ರೂಪಿಸಿದ್ದಾರೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ಎನ್ನುವ ಕುಗ್ರಾಮದ ಶಾಲೆ ಇಂದು ಮೂಲಭೂತ ಸೌಲಭ್ಯಗಳ ದೃಷ್ಟಿಯಲ್ಲಿ ಯಾವ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲ. ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಸೆಳೆಯಲು ಯಾವೆಲ್ಲಾ ಸೌಲಭ್ಯಗಳಿವೆಯೋ, ಆ ಎಲ್ಲಾ ಸೌಲಭ್ಯಗಳನ್ನು ಈ ಶಾಲೆಯಲ್ಲಿ ಅಳವಡಿಸಲಾಗಿದೆ. 1950 ರಲ್ಲಿ ಬಾಳ್ತಿಲ ಎನ್ನುವ ಕುಗ್ರಾಮದಲ್ಲಿ ಆರಂಭಗೊಂಡಿದ್ದ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗಳ ಕೊರತೆ ಬಹಳಷ್ಟು ಕಾಡುತ್ತಿತ್ತು. ಈ ಕೊರತೆ ಈ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಗಳ ಮೇಲೂ ಪರಿಣಾಮ ಬೀರಿತ್ತು. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಸರ್ಕಾರಗಳು ಈ ಬಗ್ಗೆ ಗಮನಹರಿಸದ ಸಮಯದಲ್ಲಿ ಶಾಲೆಯ ಉಳಿವಿಗಾಗಿ ಧಾವಿಸಿದ ಗ್ರಾಮದ ಜನ ಮತ್ತು ಪರವೂರಿನ ದಾನಿಗಳ ಸಹಕಾರದಲ್ಲಿ ಶಾಲೆಗೆ ಹೊಸ 7 ತರಗತಿ ಕೊಠಡಿಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಅದರ ಜೊತೆಗೆ ಬಂಟ್ವಾಳ ಶಾಸಕರ ನಿಧಿಯಿಂದಲೂ ಎರಡು ಹೆಚ್ಚುವರಿ ಕಟ್ಟಡಗಳು ಈ ಶಾಲೆಗೆ ಲಭಿಸಿದೆ.
ಇದನ್ನೂ ಓದಿ: Mandya: 12 ವರ್ಷಗಳ ಬಳಿಕ ನಡೆದ ಶ್ರೀ ಸಂಗಮೇಶ್ವರ ಸ್ವಾಮಿಯ ವೈಭವದ ರಥೋತ್ಸವ!
ಈ ಶಾಲೆ ಮುಚ್ಚುವ ಹಂತಕ್ಕೆ ತಲುಪಿದಾಗ ಗ್ರಾಮಸ್ಥರು ಈ ಶಾಲೆಗಳಾಗಿ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವ ಮೂಲಕ ಪ್ರಶಂಸೆಗೆ ಭಾಜನರಾಗಿದ್ದಾರೆ. ಸ್ಮಾರ್ಟ್ ಕ್ಲಾನ್, ಡೆಸ್ಟ್ ,ಬೆಂಚುಗಳು, ಹೆಚ್ಚುವರಿ ಶಿಕ್ಷಕಿಯರು, ಕಂಪ್ಯೂಟರ್ ಕ್ಲಾಸ್, ಎಲ್.ಕೆ.ಜಿ, ಯು.ಕೆ.ಜಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ದಾನಿಗಳ ಸಹಕಾರದಿಂದ ಗ್ರಾಮಸ್ಥರೇ ನಿರ್ಮಿಸಿಕೊಟ್ಟಿದ್ದಾರೆ. ಮಕ್ಕಳಿಗಾಗಿ ಆಟದ ಮೈದಾನ, ಉದ್ಯಾನವನ ಹೀಗೆ ಯಾವ ಖಾಸಗಿ ಶಾಲೆಗೂ ಕಮ್ಮಿಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಂದು ಕಾಲದಲ್ಲಿ ಇಲ್ಲಿನ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಇದೀಗ ಮಕ್ಕಳ ಸಂಖ್ಯೆ ಸುಮಾರು 125 ಏರಿದೆ.
ಸರಕಾರಿ ಶಾಲೆ ಉಳಿಸುವುದಕ್ಕೋಸ್ಕರ ಹೆಣಗಾಡುತ್ತಿದ್ದ ಗ್ರಾಮದ ಜನರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದಾನಿಗಳು ನೀಡಿದ್ದಾರೆ. ಬಹುತೇಕ ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆಯನ್ನು ಉಳಿಸಲು ಹೋರಾಟ ಮಾಡಿದ ಬಾಳ್ತಿಲ ಗ್ರಾಮಸ್ಥರಂತೆ ಎಲ್ಲರೂ, ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಣತೊಡಬೇಕಿದೆ.
Dakshina Kannada,Karnataka
April 16, 2025 6:07 PM IST