Last Updated:
ಚರ್ಮವನ್ನು ಚೆಂಡೆಗೆ ಕಟ್ಟುವ ಮೊದಲು ಕಬ್ಬಿಣದ ಸರಳುಗಳಿಂದ ಮಾಡಿದ ರಿಂಗ್ ಗಳನ್ನು ಎರಡೂ ಕಡೆ ಸೇರಿಸಬೇಕು. ಅದಾದ ಬಳಿಕ ಚರ್ಮವನ್ನು ಎಳೆಯಲಾಗಿತ್ತದೆ. ಚೆಂಡಗೆ ಬೇಕಾದ ಎತ್ತು ಮತ್ತು ಕೋಣಗಳ ಚರ್ಮವನ್ನು ಜಮಖಂಡಿಯಿಂದ ತರಿಸಲಾಗುತ್ತಿದೆ. ಚರ್ಮವನ್ನು ಒಣಗಿಸಿ ಹದ ಮಾಡಿದ ಬಳಿಕವೇ ಚೆಂಡೆಗೆ ಬಳಸಲಾಗುತ್ತದೆ.
ಚೆಂಡೆ ಶಬ್ದ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಲಯಬದ್ಧ ಚೆಂಡೆ ಶಬ್ದಕ್ಕೆ ತಲೆದೂಗಿಸದ ಜನರಿರುವುದು ಬಹಳ ಕಡಿಮೆಯೇ. ಇಂತಹ ಚೆಂಡೆಯನ್ನು ತಯಾರಿಸುವುದರ ಹಿಂದೆ ಎಷ್ಟು ಪರಿಶ್ರಮ ಇರುತ್ತೆ ಗೊತ್ತಾ? ಚೆಂಡೆಗೆ ಬೇಕಾದ ಗಾತ್ರದ ಮರ ಆಯ್ದುಕೊಳ್ಳುವುದರಿಂದ ಆರಂಭಿಸಿ ಅದಕ್ಕೆ ಚರ್ಮದ ಹೊದಿಕೆ ಹಾಕುವವರೆಗಿನ ಪ್ರಕ್ರಿಯೆ ಅತ್ಯಂತ ಕ್ಲಿಷ್ಟಕರ.
ಚೆಂಡೆ ತಯಾರಿಕೆಯ ಬಗ್ಗೆ ಮಾತನಾಡಿರುವ ರಾಜಾರಾಂ ದೇವಾಡಿಗ ಅದರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಚೆಂಡೆ ತಯಾರಿಸಲು ತಾಳೆ, ತೆಂಗಿನ ಮರಗಳು ಅವಶ್ಯಕ. ಈ ಮರದ ದಿಮ್ಮಿಗಳನ್ನು ಚೆಂಡೆಯ ರೂಪಕ್ಕೆ ತರಲಾಗುತ್ತದೆ. ಬಳಿಕ ಚರ್ಮವನ್ನು ದಿಮ್ಮಿಯ ಎರಡೂ ಕಡೆ ಹೊದಿಸಲಾಗುತ್ತದೆ. ಚರ್ಮವನ್ನು ಚೆಂಡೆಗೆ ಕಟ್ಟುವ ಮೊದಲು ಕಬ್ಬಿಣದ ಸರಳುಗಳಿಂದ ಮಾಡಿದ ರಿಂಗ್ ಗಳನ್ನು ಎರಡೂ ಕಡೆ ಸೇರಿಸಬೇಕು. ಅದಾದ ಬಳಿಕ ಚರ್ಮವನ್ನು ಎಳೆಯಲಾಗಿತ್ತದೆ. ಚೆಂಡಗೆ ಬೇಕಾದ ಎತ್ತು ಮತ್ತು ಕೋಣಗಳ ಚರ್ಮವನ್ನು ಜಮಖಂಡಿಯಿಂದ ತರಿಸಲಾಗುತ್ತಿದೆ. ಚರ್ಮವನ್ನು ಒಣಗಿಸಿ ಹದ ಮಾಡಿದ ಬಳಿಕವೇ ಚೆಂಡೆಗೆ ಬಳಸಲಾಗುತ್ತದೆ.
ಇದನ್ನೂ ಓದಿ: Mandya: ರಾಜ್ಯದಲ್ಲೇ ಮೊದಲ ಬಾರಿಗೆ ಮಂಡ್ಯದ ಈ ಸರ್ಕಾರಿ ಶಾಲೆಗೆ ಫೇಸ್ ಬಯೋಮೆಟ್ರಿಕ್!
ಚೆಂಡೆಗೆ ಚರ್ಮ ಹೊದಿಸಿದ ಬಳಿಕ ಹಗ್ಗ ಪೋಣಿಸುವ ಪ್ರಕ್ರಿಯೆ ನಡೆಯುತ್ತದೆ. ಚೆಂಡೆಗೆ ಹೊಂದಿಕೆಯಾಗಿರುವ ಎರಡೂ ಬದಿಯ ಚರ್ಮಕ್ಕೆ ತೂತುಗಳನ್ನು ಕೊರೆದು ಅದಕ್ಕೆ ಹಗ್ಗವನ್ನು ಪೋಣಿಸಿ ಎಳೆಯಲಾಗುತ್ತದೆ. ಈ ಹಿಂದೆ ಚೆಂಡೆ ತಯಾರಿಸುವ ವ್ಯಕ್ತಿಯ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಎಳೆಯಲಾಗುತ್ತಿತ್ತು. ಇತ್ತೀಚೆಗೆ ಕಬ್ಬಿಣದ ಗೂಟ ಹೊಡೆದು ಆ ಮೂಲಕ ಚೆಂಡೆಯ ಹಗ್ಗಗಳನ್ನು ಟೈಟ್ ಮಾಡಲಾಗುತ್ತದೆ. ಹಗ್ಗಗಳನ್ನು ಎಳೆದಷ್ಟೂ, ಚರ್ಮಕ್ಕೆ ಬಿದ್ದ ಏಟುಗಳಿಂದ ಸುಮಧುರ ಶಬ್ದ ಹೊಮ್ಮುತ್ತದೆ.
ರಾಜಾರಾಂ ದೇವಾಡಿಗ ಅವರು ಈಗ ಈ ಕಾಯಕದಲ್ಲಿ ಪರಿಣತಿ ಹೊಂದಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದಿಂದಲೂ ಜನ ಇವರನ್ನು ಹುಡುಕಿಕೊಂಡು ಬಂದು ಚೆಂಡೆ ತಯಾರಿಸಿಕೊಂಡು ಹೊಗುತ್ತಿದ್ದಾರೆ. ಸಾಮಾನ್ಯ ಚೆಂಡೆಗಳಿಗೆ 7 ಸಾವಿರ ರೂಪಾಯಿ ಬೆಲೆಯಿದ್ದು, ಉತ್ತಮ ಗುಣಮಟ್ಟದ ಮರ ಮತ್ತು ಚರ್ಮ ಹೊದಿಸಿದ ಚೆಂಡೆಗಳ ಬೆಲೆ 25 ಸಾವಿರ ರೂಪಾಯಿಗಳನ್ನೂ ದಾಟುತ್ತದೆ ಎನ್ನುತ್ತಾರೆ ರಾಜಾರಾಂ
ರಾಜಾರಾಂ ದೇವಾಡಿಗ ಹಿನ್ನೆಲೆ
ಕಳೆದ 40 ವರ್ಷಗಳಿಂದ ಚೆಂಡೆ ತಯಾರಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ರಾಜಾರಾಂ ದೇವಾಡಿಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಇವರು ದಕ್ಷಿಣ ಕನ್ನಡ ಮತ್ತು ಕಾಸರಗೋಡು ವ್ಯಾಪ್ತಿಯ ಅತ್ಯಂತ ಫೇಮಸ್ ಚೆಂಡೆ ತಯಾರಕ. ರಾಜಾರಾಂ ದೇವಾಡಿಗ ಅವರದ್ದು ಕಲಾವಿದರ ಕುಟುಂಬ. ಅವರ ತಂದೆ ಓರ್ವ ಶ್ರೇಷ್ಠ ಸ್ಯಾಕ್ಸೋಫೋನ್ ವಾದಕರಾಗಿದ್ದರು. ರಾಜಾರಾಂ ಸಹೋದರ ಕೂಡಾ ಸ್ಯಾಕ್ಸೋಫೋನ್ ನುಡಿಸುತ್ತಾರೆ.
ಬಿಎಸ್ಸಿ ಪದವೀಧರ
ಚೆಂಡೆ ತಯಾರಕ ರಾಜಾರಾಂ ಬಿಎಸ್ಸಿ ಪದವೀಧರ. ತಂದೆಯ ನಿಧನಾನಂತರ ಕೆಮಿಕಲ್ ಕಂಪನಿಯಲ್ಲಿನ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ ಚೆಂಡೆ ತಯಾರಿಕೆಗೆ ಇಳಿದವರು. ಚೆಂಡೆಯ ಜೊತೆಗೆ ತಬಲಾ ಮತ್ತು ಇತರ ಚರ್ಮದ ಬ್ಯಾಂಡ್ ಗಳನ್ನೂ ಕಾರ್ಮಿಕರ ಸಹಾಯದಿಂದ ತಯಾರಿಸುತ್ತಾರೆ.
Dakshina Kannada,Karnataka
October 14, 2024 1:24 PM IST