Dakshina Kannada: 61 ದಿನಗಳ ನಿಷೇಧ; ಮಂಗಳೂರಿನಲ್ಲಿ ಮೀನುಗಾರಿಕೆಗೆ ಮಳೆಗಾಲದ ವಿರಾಮ, ಗಗನಕ್ಕೇರಿದ ಮೀನಿನ ಬೆಲೆ | Mangaluru Coast Fishing Ban for 61 Days as Monsoon Begins

Dakshina Kannada: 61 ದಿನಗಳ ನಿಷೇಧ; ಮಂಗಳೂರಿನಲ್ಲಿ ಮೀನುಗಾರಿಕೆಗೆ ಮಳೆಗಾಲದ ವಿರಾಮ, ಗಗನಕ್ಕೇರಿದ ಮೀನಿನ ಬೆಲೆ | Mangaluru Coast Fishing Ban for 61 Days as Monsoon Begins

Last Updated:

ಮಂಗಳೂರು: ಮಳೆಗಾಲ ಆರಂಭದೊಂದಿಗೆ ಯಾಂತ್ರೀಕೃತ ಮೀನುಗಾರಿಕೆಗೆ ಜೂನ್ 1 ರಿಂದ ಜುಲೈ 31 ರವರೆಗೆ ನಿಷೇಧವಿದೆ. ಈ ಅವಧಿಯಲ್ಲಿ ಮೀನುಗಾರರು ಬೋಟ್ ನಿರ್ವಹಣೆ, ರಿಪೇರಿ ಕಾರ್ಯಗಳಲ್ಲಿ ತೊಡಗಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಮಳೆಗಾಲ ಆರಂಭವಾಗಿದೆ. (Karnataka Rains) ಕಡಲು ಪ್ರಕ್ಷುಬ್ಧಗೊಳ್ಳುತ್ತಿದ್ದಂತೆಯೇ ಕಡಲ ಮಕ್ಕಳ ಮೀನಿನ ಬೇಟೆಗೆ (Fishing Ban) ತಾತ್ಕಾಲಿಕ ವಿರಾಮ ಸಿಕ್ಕಿದೆ. ಜೂನ್ ಒಂದರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದು, ಮೀನುಗಾರಿಕಾ ಋತು ವಿನ ವಿರಾಮದ ರಜೆ (Holidays) ಆರಂಭವವಾಗಿದೆ. ಕಡಲ ಅಬ್ಬರ, ಪ್ರಕ್ಷುಬ್ಧತೆ ಮೀನುಗಳ ಸಂತಾನ ಅಭಿವೃದ್ಧಿಗೂ (Fish Reproductive Development) ಪ್ರಸಕ್ತಕಾಲ. ಮಳೆಗಾಲದ (Monsoon Rains) ಆರಂಭದ ದಿನದಿಂದ ಎರಡು ತಿಂಗಳ‌ಕಾಲ ಮೀನುಗಾರಿಕೆಗೆ ರಜೆ ಹಲವು ವರ್ಷಗಳಿಂದ ಜಾರಿಯಲ್ಲಿವೆ.

ಮಂಗಳೂರು, ಮಲ್ಪೆ ಸಹಿತ ಕರಾವಳಿಯ ವಿವಿಧ ಬಂದರುಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ಕಾರ್ಮಿಕರು ದುಡಿಯುತ್ತಿದ್ದಾರೆ. ಒರಿಸ್ಸಾ, ಆಂಧ್ರ ಪ್ರದೇಶ ಜಾರ್ಖಂಡ್ ರಾಜ್ಯದ ಕಾರ್ಮಿಕರೂ ಮೀನುಗಾರಿಕಾ ವೃತ್ತಿ ಮಾಡುತ್ತಾರೆ. ಮೀನು ಹೊರುವ, ಲೋಡ್ ಅನ್ ಲೋಡ್ ಮಾಡುವ ಕಾಯಕ ಮಾಡಿಕೊಂಡಿದ್ದಾರೆ. ಎರಡು ತಿಂಗಳು ಈ ಕೆಲಸಗಳಿಗೆ ಬಿಡುವ ಇರುವ ಕಾರಣ ಎಲ್ಲರೂ ಬಹುತೇಕ ಊರಿಗೆ ಮರಳಿದ್ದಾರೆ.

ಆದರೆ ಬೋಟ್ ಮಾಲೀಕರು, ಮೀನುಗಾರರಿಗೆ ರಜೆ ಇಲ್ಲ. ಬೋಟ್ ಕಟ್ಟುವುದು, ಮೇಲೆಳೆಯುವುದು, ಬೋಟ್ ನ ರಿಪೇರಿ, ನಿರ್ವಹಣೆ, ಬಲೆ ಹೊಂದಿಸಿ ಕೊಳ್ಳುವ ಕೆಲಸದಲ್ಲಿ ನಿರತರಾಗುತ್ತಾರೆ. ಮೀನುಗಾರಿಕಾ ಋತು ಆರಂಭವಾದಾಗ ಮತ್ತೆ ಕಡಲಿನಲ್ಲಿ ಮೀನುಗಾರಿಕೆಗೆ ತೆರಳುತ್ತಾರೆ.

ಮೀನುಗಾರಿಕಾ ವೃತ್ತಿ ಒಂದು ರೀರಿಯ ಹಾವು ಏಣಿಯ ಆಟ ಇದ್ದಂತೆ. ಕೆಲವು ಬಾರಿ ಉತ್ತಮ ಬೇಟೆಯಾದರೆ ಮತ್ತೆ ಕೆಲವು ಬಾರಿ ಬರೀ ಕೈಲಿದಡ ಸೇರಿದ್ದೂ ಇದೆ. ಈ ಬಾರಿ ಎಂದೂ ಕಂಡುಕೇಳರಿಯದ ಮತ್ಸ್ಯಕ್ಷಾಮ ವಾಗಿದೆ. ಮೀನುಗಾರಿಕಾ ಋತುವಿನಲ್ಲೇ 60% ಬೋಟ್ ಗಳು ದಡದಲ್ಲಿ ಲಂಗರು ಹಾಕಿದ್ದವು. ಮೀನು ಸರಿಯಾದ ಪ್ರಮಾಣದಲ್ಲಿ ದೊರೆಯದೇ ಇರೋದರಿಂದ ಮೀನಿನ ದರದಲ್ಲಿ ಭಾರೀ ಏರಿಕೆ ಕಂಡಿದೆ. ಮಂಗಳೂರಿನಲ್ಲಿ ಸದ್ಯ ಮೀನಿನ ದರ ಈ ರೀತಿ ಇದೆ.

ಅಂಜಲ್ ಕೆಜಿಗೆ 1500 ರಿಂದ 1600 ರೂಪಾಯಿ, ಬಂಗುಡೆ 200 ರಿಂದ 300 ರೂಪಾಯಿ, ಬೊಂಡಾಸ್ 500-600 ರೂಪಾಯಿ, ದೊಡ್ಡ ಸಿಗಡಿ 500-600 ರೂಪಾಯಿ, ಕೊಡ್ಡಾತಿ 200-350 ರೂಪಾಯಿ, ದೊಡ್ಡ ನಂಗ್ ಕೇಜಿಗೆ 300 ರೂಪಾಯಿಗಳಿವೆ.

ಒಟ್ಟು 61 ದಿನಗಳ ವರೆಗೆ ಮೀನುಗಾರಿಕೆಗೆ ನಿಷೇಧವಿದ್ದು, ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಕರ್ನಾಟಕ ಮೀನುಗಾರಿಕಾ ಕಾಯ್ದೆ 1986ರಲ್ಲಿ ವಿಧಿಸಲಾದ ದಂಡನೆ ಸೇರಿದಂತೆ ಒಂದು ವರ್ಷ ಸಬ್ಸಿಡಿ ಸಹಿತ ಡಿಸೇಲ್ ಪಡೆಯಲು ಅನರ್ಹರಾಗುತ್ತಾರೆ.