Dakshina Kannada Twins: ಅವಳ್ಯಾರು? ಇವಳ್ಯಾರು? ಅಯ್ಯೋ! ಅನ್ಬೇಡಿ ಇದು ಅವಳಿಗಳ ಸಾಮ್ರಾಜ್ಯ! ಮಕ್ಕಳ ಮುಖದಲ್ಲಿ ಕೋಟಿ-ಚೆನ್ನಯ್ಯರ ನೆನಪು | puttur gajanan school 8 pairs of twins curiosity among public

Dakshina Kannada Twins: ಅವಳ್ಯಾರು? ಇವಳ್ಯಾರು? ಅಯ್ಯೋ! ಅನ್ಬೇಡಿ ಇದು ಅವಳಿಗಳ ಸಾಮ್ರಾಜ್ಯ! ಮಕ್ಕಳ ಮುಖದಲ್ಲಿ ಕೋಟಿ-ಚೆನ್ನಯ್ಯರ ನೆನಪು | puttur gajanan school 8 pairs of twins curiosity among public

Last Updated:

ಪುತ್ತೂರಿನ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ಜೋಡಿ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಕೋಟಿಚೆನ್ನಯರ ತವರಿನಲ್ಲಿ ಈ ವಿಶೇಷತೆಯು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

+

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕೋಟಿ-ಚೆನ್ನಯರೆಂಬ ಅವಳಿ ವೀರರ (Twin Heroes)  ತವರಾಗಿರುವ ಪುತ್ತೂರು ತಾಲೂಕಿನ ಶಾಲೆಯೊಂದು ಅವಳಿ ಮಕ್ಕಳ (Twin) ಮೂಲಕ ಇದೀಗ ಸುದ್ದಿಯಲ್ಲಿದೆ. ತುಳುನಾಡುನ ವೀರ ಪುರುಷರಾಗಿರುವ ಕೋಟಿ-ಚೆನ್ನಯರ ಹುಟ್ಟೂರಿನ (Birth Place) ಪಕ್ಕದಲ್ಲೇ ಇರುವ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಾರಿ 8 ಜೋಡಿ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಪ್ರೀ ನರ್ಸರಿಯಿಂದ ಹಿಡಿದು 7 ನೇ ತರಗತಿವರೆಗಿನ‌ ಅವಳಿ‌ ಮಕ್ಕಳು ಶಾಲೆಯಲ್ಲಿದ್ದು, ಅವಳಿ ಮಕ್ಕಳ ಶಾಲೆಯ (School) ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲವೂ‌ ಮೂಡಲಾರಂಭಿಸಿದೆ.

ಅವಳಿ ವೀರರ ನೆನಪು ತಂದ ಮುದ್ದು ಮುದ್ದು ಪುಟಾಣಿಗಳು

ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರು ಇದೇ ಶಾಲೆಯ ಪಕ್ಕದಲ್ಲೇ ಇರುವ ಪಡುಮಲೆ‌ ಗ್ರಾಮದಲ್ಲಿ ಹುಟ್ಟಿದ್ದರು ಎನ್ನುವ ಬಗ್ಗೆ ಕುರುಹುಗಳು ಇವೆ. ಈ ಕಾರಣಕ್ಕೆ ಈ ಭಾಗದಲ್ಲಿ ಅವಳಿ ಗಂಡು ಮಕ್ಕಳು ಹುಟ್ಟಿದ‌ ಸಂದರ್ಭದಲ್ಲಿ ಹೆಚ್ಚಾಗಿ ಕೋಟಿ-ಚೆನ್ನಯರನ್ನು ನೆನಪಿಸೋದು ಇಲ್ಲಿ ಸಾಮಾನ್ಯವಾಗಿದೆ. ಹೀಗಿರುವಾಗ ಪಡುಮಲೆಯ ಪಕ್ಕದಲ್ಲೇ ಇರುವ ಗಜಾನನ ಆಂಗ್ಲ ಮಾದ್ಯಮ ಶಾಲೆಯಲ್ಲಿ 8 ಜೋಡಿ‌ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದಾಗ ಜನರಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ.

8 ಜೋಡಿ ಅವಳಿ ಮಕ್ಕಳಿಂದ ತುಂಬಿದೆ ಶಾಲೆ!

ಕರ್ನಾಟಕ-ಕೇರಳ  ಗಡಿ ಭಾಗದಲ್ಲಿರುವ ಈ ಶಾಲೆಗೆ‌ ಪಕ್ಕದ ಕೇರಳದ ಕೆಲವು ಭಾಗಗಳಿಂದಲೂ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದು,  ಪುತ್ತೂರಿನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಈ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ಈ ಬಾರಿ ಶಾಲೆಯಲ್ಲಿ 8 ಜೋಡಿ ಅವಳಿ ಮಕ್ಕಳನ್ನು ಕಂಡು ಶಾಲೆಯ ಶಿಕ್ಷಕರೂ ಫುಲ್ ಖುಷ್ ಆಗಿದ್ದಾರೆ. ಈ ಅವಳಿ ಮಕ್ಕಳಲ್ಲಿ ಒಂದು ಜೋಡಿ ಗಂಡು ಮತ್ತು ಹೆಣ್ಣು ಮಗುವಾಗಿದ್ದು, ಉಳಿದವುಗಳು ಗಂಡು ಮತ್ತು ಹೆಣ್ಣು ಪ್ರತ್ಯೇಕವಾಗಿದೆ. ಕೆಲವು ಜೋಡಿ  ಮಕ್ಕಳು ಅವಳಿಯಾದರೂ, ಇಬ್ಬರಲ್ಲೂ ಕೆಲವು ವ್ಯತ್ಯಾಸಗಳು ಇರುವ ಕಾರಣಕ್ಕೆ ಶಿಕ್ಷಕರು ಯಾವುದೇ ಪ್ರಯಾಸವಿಲ್ಲದೆ ಮಕ್ಕಳನ್ನು ಗುರುತು ಹಿಡಿಯುತ್ತಿದ್ದಾರೆ.

ಶಿಕ್ಷಕಿರಿಗೇ ಗೊಂದಲ ಮೂಡಿಸುವ ʼಎರಡು ನಕ್ಷತ್ರಗಳುʼ

ಇದನ್ನೂ ಓದಿ: Mangaluru Tourism: ಮಂಗಳೂರು ಗಂಡಸರು ಖುಷಿ ಪಡುವ ಸುದ್ದಿ! ನಿಮಗಾಗಿ ಹೊಸ ಬಸ್ಸು ನೀಡಿದ ಶಕ್ತಿ ಯೋಜನೆ

ಆದರೆ ಒಂದು ಜೋಡಿ ಅವಳಿ ಹೆಣ್ಣು ಮಕ್ಕಳು  ಒಂದೇ ರೀತಿಯಾಗಿರುವ ಕಾರಣ ಈ ಜೋಡಿಯಲ್ಲಿ ಅವಳ್ಯಾರು, ಇವಳ್ಯಾರು ಎನ್ನುವ ಕನ್‌ಫ್ಯೂಷಿಯಸ್‌ ಮಾತ್ರ ಶಿಕ್ಷಕರಿಗೆ ನಿರಂತರವಾಗಿ ಉಂಟಾಗಿದೆ. ಇಲ್ಲಿನ ಬೇಬಿ ಸಿಟ್ಟಿಂಗ್ ನಲ್ಲಿ ಕಲಿಯುತ್ತಿರುವ ಅವಳಿಗಳು ಇದೇ ಶಾಲೆಯ ಶಿಕ್ಷಕಿಯೋರ್ವಳ ಮಕ್ಕಳಾಗಿದ್ದು, ಉಳಿದ ಮಕ್ಕಳು ಈಶ್ವರಮಂಗಲ ಹಾಗೂ ಪಕ್ಕದ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. ಎಂಟು ಮನೆಗಳಿಂದ 16 ಮಕ್ಕಳು‌ ಈ ಶಾಲೆಗೆ ಬರುತ್ತಿದ್ದು, ಅವಳಿ ಮಕ್ಕಳನ್ನು ನೋಡೋದೇ ಒಂದು ತರಹದ ಖುಷಿ ಎನ್ನುತ್ತಾರೆ ಶಿಕ್ಷಕಿಯರು.