Danish Kaneria: ಪಾಕಿಸ್ತಾನ ನನ್ನ ಜನ್ಮಭೂಮಿ, ಆದ್ರೆ ಭಾರತ ದೇವಾಲಯವಿದ್ದಂತೆ, ಅದು ನನ್ನ ಮಾತೃಭೂಮಿ! ಪಾಕಿಸ್ತಾನ ಮಾಜಿ ಕ್ರಿಕೆಟರ್ ಅಚ್ಚರಿ ಹೇಳಿಕೆ| Bharat My Matrubhumi, A Temple For Me: Danish Kaneria reaction on india Citizenship roumors | ಕ್ರೀಡೆ

Danish Kaneria: ಪಾಕಿಸ್ತಾನ ನನ್ನ ಜನ್ಮಭೂಮಿ, ಆದ್ರೆ ಭಾರತ ದೇವಾಲಯವಿದ್ದಂತೆ, ಅದು ನನ್ನ ಮಾತೃಭೂಮಿ! ಪಾಕಿಸ್ತಾನ ಮಾಜಿ ಕ್ರಿಕೆಟರ್ ಅಚ್ಚರಿ ಹೇಳಿಕೆ| Bharat My Matrubhumi, A Temple For Me: Danish Kaneria reaction on india Citizenship roumors | ಕ್ರೀಡೆ

Last Updated:

ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಸೇರಿದಂತೆ ಪಾಕಿಸ್ತಾನಿ ಅಧಿಕಾರಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಎದುರಿಸಿದ ತಾರತಮ್ಯದ ಅನುಭವಗಳನ್ನು ಕನೇರಿಯಾ ಒಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ದಾನಿಸ್ ಕನೇರಿಯಾದಾನಿಸ್ ಕನೇರಿಯಾ
ದಾನಿಸ್ ಕನೇರಿಯಾ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ಭಾರತೀಯ ಪೌರತ್ವ (Indian citizenship) ಪಡೆಯುವ ವದಂತಿಗಳನ್ನು ನಿರಾಕರಿಸಿದ್ದಾರೆ. ಅವರು ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ದೃಢಪಡಿಸಿದರು. ಅವರು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಕನೇರಿಯಾ ತಮ್ಮ ಪಾಕಿಸ್ತಾನಿ ಪೌರತ್ವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆದರೆ ತಾರತಮ್ಯವನ್ನು ಎದುರಿಸುತ್ತಿರುವುದನ್ನು ಒಪ್ಪಿಕೊಂಡರು. ಭಾರತದ ಆಂತರಿಕ ವ್ಯವಹಾರಗಳ ಕುರಿತು ತಮ್ಮ ಸಕಾರಾತ್ಮಕ ಹೇಳಿಕೆಗಳು ಭಾರತೀಯ ಪೌರತ್ವ ಪಡೆಯುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟಿವೆ ಎಂಬ ಊಹಾಪೋಹಗಳಿಗೆ ಅವರು ಪ್ರತಿಕ್ರಿಯಿಸಿದರು.

ಭಾರತೀಯ ಪೌರತ್ವ ಪಡೆಯುತ್ತಿಲ್ಲ

ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಸೇರಿದಂತೆ ಪಾಕಿಸ್ತಾನಿ ಅಧಿಕಾರಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಎದುರಿಸಿದ ತಾರತಮ್ಯದ ಅನುಭವಗಳನ್ನು ಕನೇರಿಯಾ ಒಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. “ಇತ್ತೀಚೆಗೆ, ಬಹಳಷ್ಟು ಜನರು ನನ್ನನ್ನು ಪ್ರಶ್ನಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ, ನಾನು ಪಾಕಿಸ್ತಾನದ ಪರ ಏಕೆ ಮಾತನಾಡುವುದಿಲ್ಲ, ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ನಾನು ಏಕೆ ಕಾಮೆಂಟ್ ಮಾಡುತ್ತೇನೆ ಮತ್ತು ಕೆಲವರು ನಾನು ಭಾರತೀಯ ಪೌರತ್ವವನ್ನು ಪಡೆಯಲು ಇದನ್ನು ಮಾಡುತ್ತೇನೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಆ ಊಹಾಪೋಹಗಳನ್ನು ನೇರವಾಗಿ ಸರಿಪಡಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.

ತಾರತಮ್ಯ ಎದುರಿಸದ್ದೇನೆ

“ಪಾಕಿಸ್ತಾನ ಮತ್ತು ಅದರ ಜನರಿಂದ, ವಿಶೇಷವಾಗಿ ಅವರ ಪ್ರೀತಿಯಿಂದ ನನಗೆ ಅನೇಕ ವಿಷಯಗಳು ಸಿಕ್ಕಿವೆ. ಆ ಪ್ರೀತಿಯ ಜೊತೆಗೆ, ಪಾಕಿಸ್ತಾನಿ ಅಧಿಕಾರಿಗಳು ಮತ್ತು ಪಿಸಿಬಿಯಿಂದ ನಾನು ತೀವ್ರ ತಾರತಮ್ಯವನ್ನು ಸಹ ಎದುರಿಸಿದ್ದೇನೆ. ಇದರಲ್ಲಿ ಬಲವಂತದ ಮತಾಂತರದ ಪ್ರಯತ್ನಗಳು ಸೇರಿವೆ. ಭಾರತ ಮತ್ತು ಅದರ ಪೌರತ್ವದ ಬಗ್ಗೆ, ನಾನು ಸಂಪೂರ್ಣವಾಗಿ ಸ್ಪಷ್ಟವಾಗಿ ಹೇಳುತ್ತೇನೆ. ಪಾಕಿಸ್ತಾನ ನನ್ನ ಜನ್ಮಸ್ಥಳವಾಗಿರಬಹುದು, ಆದರೆ ಭಾರತ, ನನ್ನ ಪೂರ್ವಜರ ಭೂಮಿ, ನನ್ನ ತಾಯಿನಾಡು” ಎಂದು ಬರೆದುಕೊಂಡಿದ್ದಾರೆ.

ಭಾರತದ ದೇವಾಲಯದಂತೆ

ನನಗೆ ಭಾರತ ಒಂದು ದೇವಾಲಯವಿದ್ದಂತೆ. ಪ್ರಸ್ತುತ ನನಗೆ ಭಾರತೀಯ ಪೌರತ್ವ ಪಡೆಯುವ ಯಾವುದೇ ಯೋಜನೆ ಇಲ್ಲ. ನನ್ನಂತಹ ಯಾರಾದರೂ ಭವಿಷ್ಯದಲ್ಲಿ ಹಾಗೆ ಮಾಡಲು ನಿರ್ಧರಿಸಿದರೆ, ನಮ್ಮಂತಹ ಜನರಿಗೆ CAA ಈಗಾಗಲೇ ಅಸ್ತಿತ್ವದಲ್ಲಿದೆ. ನನ್ನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವವರಿಗೆ ನಾನು ತಿಳಿಸುವುದೇನೆಂದರೆ, ಭಗವಾನ್ ಶ್ರೀ ರಾಮನ ಆಶೀರ್ವಾದದಿಂದ, ನಾನು ನನ್ನ ಕುಟುಂಬದೊಂದಿಗೆ ಸುರಕ್ಷಿತ ಮತ್ತು ಸಂತೋಷವಾಗಿದ್ದೇನೆ. ನನ್ನ ಭವಿಷ್ಯ ಭಗವಾನ್ ರಾಮನ ಕೈಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕನೇರಿಯಾ ಅಂಕಿ ಅಂಶ

ಬಲಗೈ ಲೆಗ್ ಸ್ಪಿನ್ನರ್ ಆಗಿದ್ದ 44 ವರ್ಷದ ಕನೇರಿಯಾ, 2000 ರಿಂದ 2010 ರವರೆಗೆ ಪಾಕಿಸ್ತಾನ ಪರ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದರು. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಅವರನ್ನು ಜೀವಮಾನ ನಿಷೇಧ ಹೇರಿದ ನಂತರ ಅವರ ವೃತ್ತಿಜೀವನ ಕೊನೆಗೊಂಡಿತು, ಇದರಿಂದಾಗಿ ಅವರು ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರು ಈಗ ತಮ್ಮ ಕುಟುಂಬದೊಂದಿಗೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Danish Kaneria: ಪಾಕಿಸ್ತಾನ ನನ್ನ ಜನ್ಮಭೂಮಿ, ಆದ್ರೆ ಭಾರತ ದೇವಾಲಯವಿದ್ದಂತೆ, ಅದು ನನ್ನ ಮಾತೃಭೂಮಿ! ಪಾಕಿಸ್ತಾನ ಮಾಜಿ ಕ್ರಿಕೆಟರ್ ಅಚ್ಚರಿ ಹೇಳಿಕೆ