DC vs LSG: LSG ಬೌಲರ್ಸ್‌ ಬೆವರಿಳಿಸಿದ ಮಾರ್ಷ್, ಪೂರನ್! ಅಣ್ಣಾ ನಮ್ಮ ಕೈಯಲ್ಲಿ ಆಯ್ತಾ ಇಲ್ಲಾ ಅನ್ನೋ ಪರಿಸ್ಥಿತಿ!DC vs LSG Score IPL 2025 Mitchell Marsh and Pooran slams half-century

DC vs LSG: LSG ಬೌಲರ್ಸ್‌ ಬೆವರಿಳಿಸಿದ ಮಾರ್ಷ್, ಪೂರನ್! ಅಣ್ಣಾ ನಮ್ಮ ಕೈಯಲ್ಲಿ ಆಯ್ತಾ ಇಲ್ಲಾ ಅನ್ನೋ ಪರಿಸ್ಥಿತಿ!DC vs LSG Score IPL 2025 Mitchell Marsh and Pooran slams half-century

ಬೌಲರ್ಸ್ ಬೆಂಡೆತ್ತಿದ ಮಾರ್ಷ್, ಪೂರನ್‌!

ಈ ಸಮಯದಲ್ಲಿ ಮಾರ್ಷ್ ಮಾತ್ರ ಸ್ಫೋಟಕ ಬ್ಯಾಟಿಂಗ್‌ ಮಾಡಿದ್ರು. ಪವರ್‌‌ಪ್ಲೇನಲ್ಲೇ ಲಕ್ನೋ 64 ರನ್‌‌ಗಳಿಸಿತು. ಒಂದು ಕಡೆ ಮಾರ್ಷ್ ಬಾರಿಸ್ತಿದ್ರೆ, ಇತ್ತ ನಿಕೋಲಸ್ ಪೂರನ್‌ ಕೂಡ ಅಬ್ಬರಿಸಿದ್ರು. ಹೇಗೆ ಬೌಲಿಂಗ್ ಮಾಡಿದ್ರು ಬೌಂಡರಿಗಟ್ಟುತ್ತಿದ್ದರು. ಲಕ್ನೋ ಸೂಪರ್‌ಜೈಂಟ್ಸ್ 10 ಓವರ್‌ಗಳಲ್ಲಿ 117 ರನ್ ಗಳಿಸಿತು.

ಲಕ್ನೋ ತಂಡ 133 ರನ್‌ಗಳಿಸಿದ್ದಾಗ ಮುಖೇಶ್ ಕುಮಾರ್ ಬಾಲ್‌ಗೆ ಮಿಚೆಲ್ ಮಾರ್ಷ್‌ ಔಟಾದ್ರು. ಸ್ವಲ್ಪ ನಿಧಾನವಾದ ಚೆಂಡಾಗಿತ್ತು, ಮಿಚೆಲ್ ಮಾರ್ಷ್ ಎತ್ತರವಾಗಿ ನಿಂತು ಲಾಂಗ್-ಆನ್ ಕಡೆಗೆ ಶಕ್ತಿಯುತವಾಗಿ ಹೊಡೆದರು. ಲಾಂಗ್-ಆನ್‌ನಲ್ಲಿದ್ದ ಫೀಲ್ಡರ್ ಸುರಕ್ಷಿತ ಕ್ಯಾಚ್ ತೆಗೆದುಕೊಂಡರು. ಮಿಚೆಲ್‌ ಮಾರ್ಷ್ 72 ರನ್‌‌ ಬಾರಿಸಿ ಔಟಾದ್ರು ಇದ್ರಲ್ಲಿ 6 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ ಸೇರಿದೆ. ಪೂರನ್ ಜೊತೆಗೂಡಿ ಮಿಚೆಲ್‌ ಮಾರ್ಷಲ್‌ ಅವರು 42 ಎಸೆತಗಳಲ್ಲಿ 87 ರನ್ ಸೇರಿಸಿದರು.

ಇದನ್ನೂ ಓದಿ: ಐಪಿಎಲ್ ವೇಳೆಯೇ ಕೆಎಲ್‌ ರಾಹುಲ್ ಮನೆಗೆ ಮಹಾಲಕ್ಷ್ಮಿ! ಹೆಣ್ಣು ಮಗುವಿಗೆ ಜನ್ಮ ನೀಡಿದ ಅಥಿಯಾ ಶೆಟ್ಟಿ

ಇನ್ನೂ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ಗೆ ಪೂರನ್‌ ಕ್ಲೀನ್‌ ಬೋಲ್ಡ್‌ ಆದ್ರು. ಪೂರನ್‌ 30 ಎಸೆತಗಳಲ್ಲಿ 75 ರನ್ ಗಳಿಸಿ ಔಟಾದರು. ಆದರೆ ಇಬ್ಬರು ಬ್ಯಾಟರ್ಸ್ ಕೂಡ ಡೆಲ್ಲಿ ಕ್ಯಾಪಿಟಲ್ಸ್‌‌‌ ಬೌಲರ್ಸ್‌ ಕೆಲ ಹೊತ್ತು ತೊಂದ್ರೆ ಕೊಟ್ಟು. ಮೈದಾನದ ಮೂಲೆ ಮೂಲೆಗೆ ಬಾಲ್ ಕಳಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್‌ ಟಾಸ್‌ ಗೆದ್ದು ತೆಗೆದುಕೊಂಡ ನಿರ್ಧಾರ ತಪ್ಪಾಯ್ತ ಅಂತ ಅಂದುಕೊಳ್ಳವಂತಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್(ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್(w/c), ಡೇವಿಡ್ ಮಿಲ್ಲರ್, ಪ್ರಿನ್ಸ್ ಯಾದವ್, ದಿಗ್ವೇಶ್ ರಾಠಿ, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್.

ಕೆಎಲ್‌ ರಾಹುಲ್‌ ಮನೆಗೆ ಮಹಾಲಕ್ಷ್ಮಿ ಆಗಮನ!

ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿಗೆ ಇದೀಗ ಹೆಣ್ಣು ಮಗು ಜನಿಸಿದೆ. ಈ ವಿಷಯವನ್ನು ಸ್ವತಃ ಅತಿಯಾ ಅವರೇ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅಲ್ಲದೇ ಕ್ರಿಕೆಟಿಗ ಕೆಎಲ್ ರಾಹುಲ್‌ ಕೂಡಾ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಖುಷಿಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ.