ಕನ್ನಡಿಗರ ಮನ ಗೆದ್ದ ಡಿಸಿ!
ಐಪಿಎಲ್ನಲ್ಲಿ ಕೆಲವೇ ಕೆಲವು ಕನ್ನಡಿಗರು ಆಡ್ತಿದ್ದಾರೆ. ಅದರಲ್ಲೂ ನಮ್ಮ ಕನ್ನಡ ಮಣ್ಣಿನ ಮಕ್ಕಳು ಕೆಎಲ್ ರಾಹುಲ್, ಕರುಣ್ ನಾಯರ್, ಮನೀಶ್ ಪಾಂಡೆ ಎಲ್ಲರೂ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಒಂದು ವಿಡಿಯೋ ಶೇರ್ ಮಾಡಿಕೊಂಡಿದೆ. ಇದ್ರಲ್ಲಿ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಇದ್ದಾರೆ. ಈ ವಿಡಿಯೋಗೆ ಕನ್ನಡ ಹಾಡು ಬಳಸಿದ್ದಾರೆ. ಜೊತೆಗೆ ಬ್ರದರ್ಸ್ ಅಂತ ಟೈಟಲ್ ಕೂಡ ಕೊಟ್ಟಿದೆ. ಇದನ್ನು ಕಂಡ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.
ಅಪ್ಪ ಆಗಿರೋ ಖುಷಿಯಲ್ಲಿರೋ ಕೆಎಲ್ ರಾಹುಲ್!
ವಿಶಾಖಪಟ್ಟಣದ ಡಾ. ವೈ. ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎಲ್ಎಸ್ಜಿಯ ವಿರುದ್ಧದ ಮೊದಲ ಪಂದ್ಯಕ್ಕೆ ಕೆಎಲ್ ರಾಹುಲ್ ಗರ್ಭಿಣಿ ಕಾರಣದಿಂದ ಅಲಭ್ಯರಾಗಿದ್ದರು. ಮಾರ್ಚ್ 24ರಂದು ಡೆಲ್ಲಿ ಕ್ಯಾಪಿಟಲ್ಸ್ ತಾವು ಮೊದಲ ಪಂದ್ಯ ಆಡುವ ದಿನವೇ, ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ದಂಪತಿಗೆ ಹೆಣ್ಣುಮಗು ಜನಿಸಿತ್ತು.
ವಿಶಾಖಪಟ್ಟಣದಲ್ಲಿ ಪಿಚ್ ಹೇಗಿದೆ?
ವಿಶಾಖಪಟ್ಟಣಂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎರಡನೇ ತವರು ಮೈದಾನವಾಗಿದೆ. ಈ ಮೈದಾನವು ದೊಡ್ಡ ಸ್ಕೋರ್ಗಳಿಗೆ ಹೆಸರುವಾಸಿಯಾಗಿದೆ. ದೆಹಲಿ ತಂಡ ಲಕ್ನೋ ವಿರುದ್ಧ 210 ರನ್ಗಳ ಗುರಿಯನ್ನು ಸಾಧಿಸಿತ್ತು. ದೆಹಲಿ ಮತ್ತು ಹೈದರಾಬಾದ್ ನಡುವಿನ ಈ ಪಂದ್ಯದಲ್ಲೂ ಹೆಚ್ಚಿನ ಸ್ಕೋರಿಂಗ್ ಕಾಣಬಹುದು. ಎರಡೂ ತಂಡಗಳು ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದು, ಪಿಚ್ ಬ್ಯಾಟಿಂಗ್ಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: SRH ತಂಡಕ್ಕೆ ಭಯ ಹುಟ್ಟಿಸಿರೋ 3.8 ಕೋಟಿ ಬೆಲೆಯ ಆಟಗಾರ! ಇವ್ರನ್ನು ಬೇಗ ಔಟ್ ಮಾಡದಿದ್ರೆ ಸೋಲು ಖಚಿತ!
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಜೇಕ್ ಫ್ರೇಸರ್-ಮೆಕ್ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್ , ಮೋಹಿತ್ ಶರ್ಮಾ, ಇಂಪ್ಯಾಕ್ಟ್ ಪ್ಲೇಯರ್: ಮುಖೇಶ್ ಕುಮಾರ್
ಸನ್ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ : ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ , ಇಶಾನ್ ಕಿಶನ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಾಕ್), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್ (ಸಿ), ಹರ್ಷಲ್ ಪಟೇಲ್ , ಮೊಹಮ್ಮದ್ ಶಮಿ , ಸಿಮರ್ಜೀತ್ ಸಿಂಗ್, ಇಂಪ್ಯಾಕ್ಟ್ ಪ್ಲೇಯರ್: ಆಡಮ್ ಜಂಪಾ
Visakhapatnam,Visakhapatnam,Andhra Pradesh
March 30, 2025 11:34 AM IST