Last Updated:
ಇಂಗ್ಲೆಂಡ್ ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್ 2025 ರ ಪಂದ್ಯದಲ್ಲಿ ಭಾರತ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ ನಾಲ್ಕು ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಭಾನುವಾರದಂದು ಇಂಗ್ಲೆಂಡ್ (England) ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್ (World Cup) 2025 ರ ಪಂದ್ಯದಲ್ಲಿ ಭಾರತ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ (Deepti Sharma) ಇತಿಹಾಸ ಸೃಷ್ಟಿಸಿದ್ದಾರೆ. ಇಂದೋರ್‌ನ ಹೋಳ್ಕರ್ ಕ್ರಿಕೆಟ್ (Cricket) ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತದ ಪರ ದೀಪ್ತಿ ಮಿಂಚಿದರು. ಇಂಗ್ಲೆಂಡ್ ವಿರುದ್ಧ ದೀಪ್ತಿ ಶರ್ಮಾ ಅದ್ಭುತ ಬೌಲಿಂಗ್ (Bowling) ಪ್ರದರ್ಶನ ನೀಡಿದರು. ಭಾರತ ತಂಡಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ದೀಪ್ತಿ ಪ್ರಮುಖ ಆಟಗಾರ್ತಿಯಾಗಿದ್ದಾರೆ.
ಇಂಗ್ಲೆಂಡ್ ತಂಡವನ್ನು ಕಾಡಿದ ದೀಪ್ತಿ ಶರ್ಮಾ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಪರಿಣಾಮ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿತು. ದೀಪ್ತಿ 10 ಓವರ್‌ಗಳಲ್ಲಿ 51 ರನ್ ನೀಡಿ 4 ವಿಕೆಟ್ ಉರುಳಿಸಿದರು. ಇಂಗ್ಲೆಂಡ್ ವಿರುದ್ಧ ದೀಪ್ತಿ ಶರ್ಮಾ ತಮ್ಮ ಮೊದಲ ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 150 ವಿಕೆಟ್ ಪೂರೈಸಿದರು.
ಭಾರತ ತಂಡದ ಪರ ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 150 ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ದೀಪ್ತಿ ಪಾತ್ರರಾದರು. ಇದರೊಂದಿಗೆ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದಿರುವ ಏಕೈಕ ಭಾರತೀಯ ಬೌಲರ್ ಜೂಲನ್ ಗೋಸ್ವಾಮಿ ಅವರೊಂದಿಗೆ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದರು. ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಕೇವಲ ಹತ್ತು ಬೌಲರ್‌ಗಳು ಮಾತ್ರ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.
ಜೂಲನ್ ಗೋಸ್ವಾಮಿ: 204 ಪಂದ್ಯಗಳಲ್ಲಿ 255 ವಿಕೆಟ್‌ಗಳು
ದೀಪ್ತಿ ಶರ್ಮಾ: 117 ಪಂದ್ಯಗಳಲ್ಲಿ 151 ವಿಕೆಟ್‌ಗಳು
ನೀತು ಡೇವಿಡ್: 97 ಪಂದ್ಯಗಳಲ್ಲಿ 141 ವಿಕೆಟ್‌ಗಳು
ನೂಶಿನ್ ಅಲ್ ಖದೀರ್: 78 ಪಂದ್ಯಗಳಲ್ಲಿ 100 ವಿಕೆಟ್‌ಗಳು
ರಾಜೇಶ್ವರಿ ಗಾಯಕ್ವಾಡ್: 64 ಪಂದ್ಯಗಳಲ್ಲಿ 99 ವಿಕೆಟ್
ದೀಪ್ತಿ ಶರ್ಮಾ ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ದೀಪ್ತಿ ಬ್ಯಾಟರ್ ಆಗಿಯೂ ರನ್ ಗಳಿಸಿದ್ದಾರೆ. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 2000 ರನ್ ಮತ್ತು 150 ವಿಕೆಟ್ ಪಡೆದ ವಿಶ್ವದ ನಾಲ್ಕನೇ ಆಲ್‌ರೌಂಡರ್ ಎಂಬ ದಾಖಲೆಯನ್ನು ಮಾಡಿದ್ದಾರೆ. ಎಲಿಸ್ ಪೆರ್ರಿ, ಮರಿಜಾನ್ನೆ ಕಪ್ ಮತ್ತು ಸ್ಟೆಫಾನಿ ಟೇಲರ್ ನಂತರ ದಾಖಲೆಯ ಪಟ್ಟಿಯಲ್ಲಿ ದೀಪ್ತಿ ನಾಲ್ಕನೇ ಆಟಗಾರ್ತಿಯಾಗಿದ್ದಾರೆ. ಅಲ್ಲದೆ, ದೀಪ್ತಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಇದು ವರೆಗೂ ಭಾರತದ ಪರ ಯಾರು ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 2000 ರನ್ ಮತ್ತು 150 ವಿಕೆಟ್ ಪಡೆದಿಲ್ಲ.
ಎಲ್ಲಿಸ್ ಪೆರ್ರಿ: (ಆಸ್ಟ್ರೇಲಿಯಾ) 4414 ರನ್, 166 ವಿಕೆಟ್
ಸ್ಟಾಫನಿ ಟೇಲರ್ (ವೆಸ್ಟ್ ಇಂಡೀಸ್) 5873 ರನ್, 155 ವಿಕೆಟ್
ಮಾರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ) 3397 ರನ್, 172 ವಿಕೆಟ್
ದೀಪ್ತಿ ಶರ್ಮಾ (ಭಾರತ) 2607 ರನ್, 150 ವಿಕೆಟ್
October 19, 2025 7:58 PM IST