Last Updated:
ನವೆಂಬರ್ 26 ರಂದು ಮಧ್ಯಾಹ್ನ ಮೂರು ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 25 ಸಾವಿರಕ್ಕೂ ಅಧಿಕ ಜನ ಪಾದಯಾತ್ರೆ ಮಾಡಲಿದ್ದಾರೆ. ಅದೇ ದಿನ ಧರ್ಮಸ್ಥಳ ಪ್ರೌಢಶಾಲೆಯ ವಠಾರದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ(Dharmastala) ಕಾರ್ತಿಕ ಮಾಸದ ಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಐದು ದಿನಗಳ ಕಾಲ ನಡೆಯುವ ಅದ್ಧೂರಿ ಕಾರ್ಯಕ್ರಮಕ್ಕೆ ಧರ್ಮಸ್ಥಳ ಸಜ್ಜುಗೊಂಡಿದೆ. ನವೆಂಬರ್ 26ರಿಂದ ಡಿಸೆಂಬರ್ 1ನೇ ತಾರೀಖಿನ ತನಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ನಡೆಯಲಿದೆ.
ನವೆಂಬರ್ 26ರಂದು ಹೊಸಕಟ್ಟೆ ಉತ್ಸವ, ನವೆಂಬರ್ 27ರಂದು ಕೆರೆಕಟ್ಟೆ ಉತ್ಸವ, ನವೆಂಬರ್ 28 ರಂದು ಲಲಿತೋದ್ಯಾನ ಉತ್ಸವ, ನವೆಂಬರ್ 29 ರಂದು ಕಂಚಿ ಮಾರುಕಟ್ಟೆ ಉತ್ಸವ ಹಾಗೂ ರಾಷ್ಟ್ರೀಯ ಸರ್ವಧರ್ಮ ಸಮ್ಮೇಳನ ನಡೆಯಲಿದೆ..ನವೆಂಬರ್ 30ರಂದು ಗೌರಿ ಮಾರುಕಟ್ಟೆ ಉತ್ಸವ ಮತ್ತು ಸಾಹಿತ್ಯ ಸಮ್ಮೇಳನ ನಡೆಯಲಿದೆ..ಡಿಸೆಂಬರ್ 1ನೇ ತಾರೀಕು ಚಂದ್ರನಾಥ ಸ್ವಾಮಿಯವರ ಸಮಾವರಣ ಪೂಜೆ ನಡೆಯಲಿದೆ.
ಇದನ್ನೂ ಓದಿ: Dakshina Kannada: ಕರಾವಳಿಯ ಕಲ್ಕುಡ-ಕಲ್ಲುರ್ಟಿ ದೈವಗಳ ಹರಕೆಯ ಕಾರ್ಣಿಕದ ಭೂಮಿ ವಿಟ್ಲದ ಕಡಂಬು ಕ್ಷೇತ್ರ!
ನವೆಂಬರ್ 29ರಂದು ರಾಷ್ಟ್ರೀಯ ಸರ್ವಧರ್ಮ ಸಮ್ಮೇಳನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ..ಈ ಸರ್ವಧರ್ಮ ಸಮ್ಮೇಳನವನ್ನು ಗೃಹ ಸಚಿವ ಜಿ ಪರಮೇಶ್ವರ್, ಉದ್ಘಾಟನೆ ಮಾಡಲಿದ್ದಾರೆ.. ಉಪನ್ಯಾಸಕರಾಗಿ ಸಂಶೋಧಕ ಮತ್ತು ಸಂವಹನಕಾರ ಡಾ. ಜಿ ಬಿ ಹರೀಶ್, ನಿವೃತ್ತ ಪ್ರಾಂಶುಪಾಲರಾದ ಡಾ. ಜೋಸೆಫ್ ಮತ್ತು ರಾಷ್ಟ್ರೀಯ ಬಸವಭೂಷಣ ಪ್ರಶಸ್ತಿ ಪುರಸ್ಕೃತ ಮೆಹತಾಭ ಇಬ್ರಾಹಿಂ ಕಾಗವಾಡ ಅವರು ಸರ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ.
ನವೆಂಬರ್ 26 ರಂದು ಮಧ್ಯಾಹ್ನ ಮೂರು ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 25 ಸಾವಿರಕ್ಕೂ ಅಧಿಕ ಜನ ಪಾದಯಾತ್ರೆ ಮಾಡಲಿದ್ದಾರೆ. ಅದೇ ದಿನ ಧರ್ಮಸ್ಥಳ ಪ್ರೌಢಶಾಲೆಯ ವಠಾರದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕೃಷಿ,ಆರೋಗ್ಯ,ವಾಣಿಜ್ಯ, ಶಿಕ್ಷಣ, ಗ್ರಾಮೀಣ, ಗುಡಿ ಕೈಗಾರಿಕೆಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಅಧಿಕ ಮಳಿಗೆಗಳು ಇರಲಿವೆ. ಧರ್ಮಸ್ಥಳಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುವ ನೀರೀಕ್ಷೆಯಿದ್ದು,ರಾಜ್ಯದ ಹಲವು ಭಾಗಗಳಿಂದ ಬರುವ ಬಸ್ ಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ.
Dakshina Kannada,Karnataka
November 23, 2024 5:56 PM IST