Last Updated:
ಕೊನೆಯ ದಿನ ಗೌರಿಮಾರುಕಟ್ಟೆ ಉತ್ಸವ, ಮಂಜುನಾಥ ಸ್ವಾಮಿಗೆ ಬೆಳ್ಳಿರಥೋತ್ಸವದ ನಡೆದಿದೆ. ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂಭ್ರಮದ ಕ್ಷಣದಲ್ಲಿ ನಾಡಿನಾದ್ಯಂತ ಲಕ್ಷಾಂತರ ಜನರು ಭಾಗಿಯಾಗಿದ್ದರು.
ದಕ್ಷಿಣ ಕನ್ನಡ: ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಲಕ್ಷದೀಪೋತ್ಸವ(Dharmastala Laksha Deepotsava) ಸಂಭ್ರಮಕ್ಕೆ ವೈಭವದ ತೆರೆ ಬಿದ್ದಿದೆ. ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಕಾರ್ತಿಕ ಮಾಸದ ದೀಪೋತ್ಸವ ವೈಭವ ಮಂಜುನಾಥ ಸ್ವಾಮಿ(God Manjunatha Swamy) ರಥಾರೂಢನಾಗುವ ಮೂಲಕ ಅಂತ್ಯ ಕಂಡಿದೆ. ಕೊನೆಯ ದಿನ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದು, ಇಡೀ ರಾತ್ರಿ ದೀಪೋತ್ಸವದ ವೈಭವದಲ್ಲಿ ಭಾಗಿಯಾಗಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೈಭವದ ಲಕ್ಷದೀಪೋತ್ಸವ ತೆರೆ ಕಂಡಿದೆ. ಕೋಟಿ ಕೋಟಿ ದೀಪಗಳಿಂದ ಕುಡುಮಕ್ಷೇತ್ರ ಬೆಳಗಿದೆ. ಐದು ದಿನಗಳ ಕಾಲ ನಡೆದ ಲಕ್ಷದೀಪೋತ್ಸವ ಶನಿವಾರ ಮಂಜುನಾಥ ಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ಮತ್ತು ಬೆಳ್ಳಿರಥೋತ್ಸವ ನಡೆದಿದೆ. ಕೊನೆಯ ದಿನದ ಅಂಗವಾಗಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 92ನೇ ಸಾಹಿತ್ಯ ಸಮ್ಮೇಳನ ನಡೆದಿದೆ. ಸಾಹಿತ್ಯ ಸಮ್ಮೇಳನವನ್ನು ಖ್ಯಾತ ವಿದ್ವಾಂಸ ಶತಾವಧನಿ ಆರ್.ಗಣೇಶ್ ಉದ್ಘಾಟನೆ ಮಾಡಿದರು. ಸಾಹಿತ್ಯ ಸಮ್ಮೇಳನ ದಲ್ಲಿ ಡಾ.ಪ್ರಮೀಳಾ ಮಾಧವ, ಡಾ.ಬಿ.ವಿ ವಸಂತ ಕುಮಾರ್, ಫ್ರೊ.ಮೊರಬದ ಮಲ್ಲಿಕಾರ್ಜುನ ಗೋಷ್ಠಿ ನಡೆಸಿಕೊಟ್ಟರು. ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಂಶೋಧಕ ಪಾದೆಕಲ್ಲು ವಿಷ್ಣುಭಟ್ಟ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದನ್ನೂ ಓದಿ: Karnataka Weather Forecast: ಇಂದು & ನಾಳೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ- ಆರೆಂಜ್ ಅಲರ್ಟ್ ಘೋಷಣೆ
ಕೊನೆಯ ದಿನ ಗೌರಿಮಾರುಕಟ್ಟೆ ಉತ್ಸವ, ಮಂಜುನಾಥ ಸ್ವಾಮಿಗೆ ಬೆಳ್ಳಿರಥೋತ್ಸವದ ನಡೆದಿದೆ. ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂಭ್ರಮದ ಕ್ಷಣದಲ್ಲಿ ನಾಡಿನಾದ್ಯಂತ ಲಕ್ಷಾಂತರ ಜನರು ಭಾಗಿಯಾಗಿದ್ದರು. ರಾತ್ರಿ ಇಡೀ ಕೊಂಬು ಕಹಳೆ ಜಾಗಟೆ ಶಂಖಸಣ್ಣಾಟವನ್ನು ನಿರಂತರವಾಗಿ ಕಲಾವಿದರು ಪ್ರದರ್ಶಿಸಿದರು. ಲಕ್ಷದೀಪೋತ್ಸವ ಹಿನ್ನೆಲೆ, ಕೋಟಿ ಕೋಟಿ ವಿದ್ಯುತ್ ದೀಪಗಳಿಂದ ಕ್ಷೇತ್ರವನ್ನು ಸಿಂಗಾರಗೊಳಿಸಲಾಗಿತ್ತು. ಬೆಂಗಳೂರು ಮೂಲದ ಭಕ್ತರ ತಂಡ ಇಡೀ ದೇವಸ್ಥಾನವನ್ನು ಹೂವು, ಹಣ್ಣು ಸೇರಿದಂತೆ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದ ಅಲಂಕೃತ ಮಾಡಿದ್ದರು.
ಧರ್ಮಸ್ಥಳದ ವಿವಿಧ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ,ರಾಜ್ಯ ಮಟ್ಟದ ವಸ್ತು ಪ್ರದರ್ಶನವೂ ನಡೆದಿದೆ. ಒಟ್ಟಿನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಲಕ್ಷದೀಪೋತ್ಸವದ ವೈಭವಕ್ಕೆ ಸಂಭ್ರಮದ ತೆರೆ ಕಂಡಿದೆ. ಕೋಟಿ ಕೋಟಿ ದೀಪಗಳಿಂದ ಬೆಳಗಿದ ಧರ್ಮಸ್ಥಳವನ್ನು ಭಕ್ತರ ಕಣ್ಣುಗಳು ಪಾವನವಾಗಿದೆ.
Dakshina Kannada,Karnataka
December 02, 2024 2:25 PM IST