Last Updated:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ, ವಿದ್ಯುತ್ ದೀಪಾಲಂಕಾರ, ಹೂಬಾಣ ಪಟಾಕಿಗಳು, ಅನೇಕ ಕಲಾವಿದರು, ನವೆಂಬರ್ 20 ರವರೆಗೆ ವೈಭವದ ಆಚರಣೆ ನಡೆಯುತ್ತಿದೆ.
ದಕ್ಷಿಣ ಕನ್ನಡ: ಬಣ್ಣ ಬಣ್ಣದ (Colorful) ಬಲ್ಬುಗಳು, ಕಲರ್‌ಫುಲ್ ಮಂಟಪ, ಮಿರಿ ಮಿರಿ ಮಿಂಚುವ ನೂರಾರು ದೀಪದ ಮಾಲೆಗಳ ಜೊತೆಗೆ ಗಗನಕ್ಕೇರುವ (Sky) ಹೂಬಾಣದ ಪಟಾಕಿಗಳು, ಕೆಳಗೆ ಸಹಸ್ರಾರು ಭಕ್ತರ ಕಣ್ಣಲ್ಲಿ ಭಕ್ತಿಯ ದೀಪ ಬೆಳಗಿರಲು ಒಳಗೆ ಉಳ್ಳಾಯನ (Almighty) ಸಾನಿಧ್ಯದಲ್ಲಿ ಧರ್ಮಜ್ಯೋತಿ ಜ್ವಲಿಸುತ್ತಿದೆ. ನಾಡಿನ ಪ್ರಸಿದ್ಧ ತೀರ್ಥ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಆರಂಭವಾಗಿದೆ. ವಿದ್ಯುತ್ ದೀಪಗಳಿಂದ ಕುಡುಮಕ್ಷೇತ್ರ ಕಂಗೊಳಿಸುತ್ತದೆ. ಕಣ್ಣಿಗೆ ಹಬ್ಬವೆನಿಸುವ ವಿದ್ಯುತ್ ದೀಪಾಲಂಕಾರ ಲಕ್ಷದೀಪೋತ್ಸವ ವೈಭವಕ್ಕೆ (Celebration) ಮೆರುಗು ತಂದಿದೆ.
ಪ್ರತಿ ವರ್ಷದಂತೆಯೇ ಈ ಬಾರಿಯೂ ವಿನೂತನವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಧರ್ಮಸ್ಥಳದ ಪ್ರಮುಖ ದ್ವಾರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ದೀಪದ ಮಾದರಿಯ ದೀಪಾಲಂಕಾರ ಮಾಡಲಾಗಿದೆ. ದೇವಸ್ಥಾನಗಳಲ್ಲಿ ಕಂಡುಬರುವಂತೆ ಬೃಹತ್ ದೀಪಗಳನ್ನು ಡಿವೈಡರ್ಗಳ ನಡುವಿನಲ್ಲಿ ಹಾಕಲಾಗಿದೆ. ದೂರದಿಂದ ನೋಡುವಾಗ ದೀಪಗಳನ್ನು ಉರಿಸಿದಂತೆ ಭಾಸವಾಗುತ್ತದೆ. ಕಂಚಿನ ದೀಪಸ್ತಂಭಗಳನ್ನು ಹೋಲುವಂತೆ ಬೃಹತ್ ದೀಪಗಳನ್ನು ಹಾಕಲಾಗಿದೆ. ಕೆಲವು ಕಡೆಗಳಲ್ಲಿ ಗೂಡುದೀಪದಂತೆ ಅಳವಡಿಸಲಾಗಿದೆ.
ಧರ್ಮಸ್ಥಳದ ಶಾಂತಿವನದಿಂದ ದ್ವಾರದಿಂದ ಪಾಂಗಾಳ ಕ್ರಾಸ್ ವರೆಗೆ ಕೊಡೆಯನ್ನು ಅಲಂಕಾರದಲ್ಲಿ ಬಳಸಲಾಗಿದೆ. ಪಾಂಗಾಳ ಕ್ರಾಸ್‌ನಿಂದ ಮುಖ್ಯ ದ್ವಾರದವರೆಗೆ ಬಟ್ಟೆಯಲ್ಲಿ ಡೋಲು, ತಬಲದ ಅಲಂಕಾರ ಮಾಡಿ ಅದೊರಳಗೆ ವಿದ್ಯುತ್ ದೀಪಗಳನ್ನು ಹಾಕಲಾಗಿದೆ.
ನವೆಂಬರ್ 20 ರವರೆಗೂ ಮಹಾಕಾರ್ತಿಕ ಪರ್ವ
ಲಕ್ಷದೀಪೋತ್ಸವ ಪ್ರಯುಕ್ತ ಇಡೀ ಧರ್ಮಸ್ಥಳ ದೀಪಗಳಿಂದ ಹೊಳೆಯುತ್ತಿದೆ. ಕ್ಷೇತ್ರದ ವಸತಿಗೃಹಗಳು, ಮಾಹಿತಿ ಕೇಂದ್ರ, ಅಂಗಡಿಮುಂಗಟ್ಟುಗಳು, ಕಛೇರಿ, ಬೀಡು, ರಥಬೀದಿ ಸಹಿತ ಧರ್ಮಸ್ಥಳ ದೇವಸ್ಥಾನವನ್ನು ಅಲಂಕಾರ ಮಾಡಲಾಗಿದೆ. ದೇಗುಲದ ಸನ್ನಿಧಾನವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ನವೆಂಬರ್ 20 ರ ಬೆಳಗ್ಗಿನ ಜಾವ ಲಕ್ಷದೀಪೋತ್ಸವ ಸಂಪನ್ನಗೊಳ್ಳುತ್ತದೆ. ರಾಜ್ಯದ ನಾನಾ ಭಾಗಗಳಿಂದ ಚೆಂಡೆ, ಕೊಂಬು, ಕಹಳೆ, ವಾಲಗ, ನಾಗಸ್ವರ, ಮೊದಲ ಕಲಾವಿದರು ರಾತ್ರಿ ಇಡೀ ಕಲಾಸೇವೆ ನೀಡಲಿದ್ದಾರೆ.
Dakshina Kannada,Karnataka
November 17, 2025 11:22 AM IST