Last Updated:
ಗಾಯಗೊಂಡ ನಂತರ, ಬಶೀರ್ ಮೈದಾನವನ್ನು ತೊರೆದರು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡಲಿಲ್ಲ. ಇಂಗ್ಲೆಂಡ್ ತಂಡವು ಸಂಜೆಯ ಅವಧಿಯಲ್ಲಿ ಬಶೀರ್ ಬೌಲಿಂಗ್ ಮಾಡುತ್ತಾರೆಂದು ನಿರೀಕ್ಷಿಸಿತ್ತು, ಆದರೆ ಅವರು ಮೈದಾನಕ್ಕೆ ಬರಲಿಲ್ಲ.
ಶನಿವಾರ (ಜುಲೈ 12) ಲಾರ್ಡ್ಸ್‌ನಲ್ಲಿ (Lord’s Stadium) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಸ್ಪಿನ್ನರ್ ಶೋಯೆಬ್ ಬಶೀರ್ (Shoibh Basheer) ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಮೂರನೇ ದಿನದ ಆಟದ ಎರಡನೇ ಸೆಷನ್ನಲ್ಲಿ ರವೀಂದ್ರ ಜಡೇಜಾಗ (Ravindra Jadeja) ಬೌಲಿಂಗ್ ಮಾಡುವಾಗ 21 ವರ್ಷದ ಸ್ಪಿನ್ನರ್ ಎಡಗೈಯ ಕಿರುಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಭಾರತದ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
ಗಾಯಗೊಂಡ ನಂತರ, ಬಶೀರ್ ಮೈದಾನವನ್ನು ತೊರೆದರು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡಲಿಲ್ಲ. ಇಂಗ್ಲೆಂಡ್ ತಂಡವು ಸಂಜೆಯ ಅವಧಿಯಲ್ಲಿ ಬಶೀರ್ ಬೌಲಿಂಗ್ ಮಾಡುತ್ತಾರೆಂದು ನಿರೀಕ್ಷಿಸಿತ್ತು, ಆದರೆ ಅವರು ಮೈದಾನಕ್ಕೆ ಬರಲಿಲ್ಲ. ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಅವರು ನಾಲ್ಕನೇ ದಿನದ ಆಟಕ್ಕೆ ಮೊದಲು ಅಭ್ಯಾಸ ಪಿಚ್‌ನಲ್ಲಿ ಬೌಲಿಂಗ್ ಮಾಡಿದ್ದಾರೆ. ಇದರಲ್ಲಿ ಅವರ ನಾಲ್ಕನೇ ಮತ್ತು ಐದನೇ ಬೆರಳುಗಳಿಗೆ ಬ್ಯಾಂಡೇಜ್ ಹಾಕಲಾಗಿತ್ತು, ಆದರೆ ಅವರು ಬ್ಯಾಟಿಂಗ್‌ಗೆ ಫಿಟ್ ಆಗುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ನಾಲ್ಕನೇ ದಿನದ ಬೆಳಿಗ್ಗೆ ಇಂಗ್ಲೆಂಡ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಎಡಗೈ ಕಿರುಬೆರಳಿನ ಗಾಯದ ನಂತರ, ಶೋಯೆಬ್ ಬಶೀರ್ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಈ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ನಿರೀಕ್ಷೆಯಿದೆ. ಮೂರನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಅವರ ಭಾಗವಹಿಸುವಿಕೆಯನ್ನು ಪಂದ್ಯದ ಕೊನೆಯಲ್ಲಿ ನಿರ್ಣಯಿಸಲಾಗುತ್ತದೆ” ಎಂದು ಹೇಳಲಾಗಿದೆ.
ಕಳೆದ ವರ್ಷ ವಿಶಾಖಪಟ್ಟಣದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಬಶೀರ್, ಈ ಸರಣಿಯಲ್ಲಿ ಇದುವರೆಗೆ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಾರ್ಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್ ಗಳಿಸಿದ್ದ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ಬಶೀರ್ ಮ್ಯಾಂಚೆಸ್ಟರ್‌ನಲ್ಲಿ ಆಡಲು ಫಿಟ್ ಆಗಿಲ್ಲದಿದ್ದರೆ, ಇಂಗ್ಲೆಂಡ್ ಲಿಯಾಮ್ ಡಾಸನ್, ಜ್ಯಾಕ್ ಲೀಚ್ ಮತ್ತು ರೆಹಾನ್ ಅಹ್ಮದ್ ಅವರನ್ನು ಆಡಿಸುವುದನ್ನು ಪರಿಗಣಿಸಬಹುದು.
ಶೋಯೆಬ್ ಬಶೀರ್ 21 ವರ್ಷದ ಯುವ ಆಫ್-ಸ್ಪಿನ್ನರ್ ಆಗಿದ್ದು, ಇಂಗ್ಲೆಂಡ್‌ನ ಬೌಲಿಂಗ್ ದಾಳಿಯ ಪ್ರಮುಖ ಭಾಗವಾಗಿದ್ದಾರೆ. ಆದರೆ ಈ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಅವರು 286 ರನ್‌ಗಳನ್ನು ಕೊಟ್ಟಿದ್ದು ಒಂದು ಚಿಂತೆಯ ವಿಷಯವಾದರೂ, ಅವರ ಸಾಮರ್ಥ್ಯ ಮತ್ತು ತಂಡದಲ್ಲಿ ಅವರ ಪಾತ್ರವು ಇಂಗ್ಲೆಂಡ್‌ಗೆ ಬಹಳ ಮುಖ್ಯವಾಗಿದೆ. ಈಗ ಅವರ ಗಾಯದಿಂದಾಗಿ ಇಂಗ್ಲೆಂಡ್‌ನ ಬೌಲಿಂಗ್ ತಂಡವು ಮತ್ತಷ್ಟು ದುರ್ಬಲವಾಗಬಹುದು, ವಿಶೇಷವಾಗಿ ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಗಸ್ ಆಟ್ಕಿನ್ಸನ್, ಮಾರ್ಕ್ ವುಡ್, ಮತ್ತು ಒಲಿ ಸ್ಟೋನ್‌ರಂತಹ ಇತರ ಬೌಲರ್‌ಗಳ ಸಮಸ್ಯೆಗಳಿಂದ ತಂಡ ಕಂಗಾಲಾಗಿದೆ. ಇದೀಗ ಮತ್ತೊಬ್ಬ ಸ್ಟಾರ್ ಬೌಲರ್ ಟೂರ್ನಿಯಿಂದ ಹೊರಬೀಳುತ್ತಿರುವುದು ಇಂಗ್ಲೆಂಡ್ಗೆ ಆಘಾತವಾಗಿದೆ.
July 13, 2025 7:28 PM IST